ಕನ್ನಡ ವಿಶ್ವವಿದ್ಯಾಲಯ

ಶೈಕ್ಷಣಿಕ ಕ್ಷೇತ್ರ:

ಕನ್ನಡ ವಿಶ್ವವಿದ್ಯಾಲಯ (ಹಂಪಿ):

ಪ್ರಾಧ್ಯಾಪಕನೊಬ್ಬ ತನ್ನ ಜೀವನದಲ್ಲಿ ಏರಬೇಕಾದ ಅತ್ಯುನ್ನತ ಸ್ಥಾನ, ಕುಲಪತಿಯದು. ಸಂಶೋಧನಾಂಗ, ಪ್ರಸಾರಾಂಗ, ಆಡಳಿತಾಂಗ ಪರಿಕಲ್ಪನೆಯನ್ನು ಆಧಾರವಾಗಿಟ್ಟುಕೊಂಡು, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಯನ್ನು ಮೂರು ವಷ೯ ಸಮರ್ಥವಗಿ ನಿವ೯ಹಿಸಿದರು. ೨ ಕೋಟಿ ಸಾಲ ಹೊತ್ತುಕೊಂಡೇ ಈ ಹುದ್ದೆ ಸ್ವೀಕರಿಸಿದ ಇವರು ಮಾಡಿದ ಮೊದಲ ಕೆಲಸವೆಂದರೆ, ಸರಕಾರದ ವಿಶೇಷ ಅನುದಾನ ಪಡೆದು ಸಂಸ್ಥೆಯನ್ನು ಸಾಲದಿಂದ ಮುಕ್ತಗೊಳಿಸಿದುದು.

ವಿಶ್ವವಿದ್ಯಾಲಯದ ಶಿಕ್ಷಣ ನವೀಕರಣಗೊಳ್ಳಬೇಕು, ವಿಸ್ತಾರಗೊಳ್ಳಬೇಕೆಂಬ ಉದ್ದೇಶದಿಂದ ಆರಂಭದಿಂದಲೇ ಮಹಿಳಾ ಅದ್ಯಯನ ವಿಭಾಗ, ದ್ರಾವಿಡ ಅದ್ಯಯನ ವಿಭಾಗ, ವಿಶ್ವ ಕನ್ನಡ ವಿಭಾಗಗಳನ್ನು ಹೊಸದಾಗಿ ಆರಂಭಿಸಿದರು. ವಿಶ್ವ ಕನ್ನಡ ವಿಭಾಗವನ್ನು ಜಗಜ್ಜಾಲವಾಗಿ ಬೆಳೆಸಿ 'ಜಗತ್ತಿನ ಎಲ್ಲಾ ದಾರಿಗಳು ಹಂಪಿಯಕಡೆಗೆ ತಿರುಗುವ ಹಾಗೆ ನೋಡಿಕೊಂಡರು' ಇವರ ಪ್ರಯತ್ನದಿಂದ ಸರಕಾರದ ಅನುದಾನದಲ್ಲಿ ದಾಸಸಾಹಿತ್ಯ ಪೀಠ, ಶಂಬಾ ಅದ್ಯಯನ ಪೀಠಗಳು ಸ್ಥಾಪನೆಗೊಂಡವು. ಎಲ್ಲ ವಿಭಾಗಗಳನ್ನು ಕ್ರಿಯಾಶೀಲಗೊಳಿಸಿದರು. ಸಾಂಸ್ಥಿಕ ಯೋಜನೆ-ವೈಯಕ್ತಿಕ ಯೋಜನೆ, ವಷ೯ಕ್ಕೆ ಒಂದು ವಿಚಾರ ಸಂಕೀರಣ, ಒಬ್ಬ ಬಾಹ್ಯವಿದ್ವಾಂಸರ ಸಂದಶ೯ನ, ಕ್ಷೇತ್ರಕಾಯ೯ದ ನಿದಿ೯ಷ್ಟ ಅನುದಾನಗಳಿಂದ ಅವುಗಳನ್ನು ಕ್ರಮಬದ್ಧಗೊಳಿಸಿದರು. ದಾನಿಗಳ ನೆರವಿನಿಂದ ಕೆಲವು ವಿಭಾಗಗಳಿಗೆ 'ದತ್ತಿ ಉಪನ್ಯಾಸ'ಗಳ ಅನುಕೂಲತೆ ಕಲ್ಪಿಸಿದರು. ಮೂರು ತಿಂಗಳಿಗೊಮ್ಮೆ ವಿಭಾಗಗಳಿಗೆ ಹೋಗಿ, ಶೈಕ್ಷಣಿಕ ಪ್ರಗತಿಯನ್ನು ಪರಿಶೀಲಿಸಿ ಅಲ್ಲಿಯ ಕೆಲಸಗಳಿಗೆ ನಿರ್ದಿಷ್ಟ ವೇಗ ಪ್ರಾಪ್ತಿಯಾಗುವಂತೆ ನೋಡಿಕೊಂಡರು.ಶ್ರೀ ಬಲ್ದೋಟ ಅವರಿಂದ ಒಂದು ಲಕ್ಷ ಮುಂಗಡ ಪಡೆದು, 'ಜೈನ ಅದ್ಯಯನ ಪೀಠ'ದ ಆರಂಭಕ್ಕೆ ಶ್ರೀಕಾರ ಹಾಕಿದರು.

ವಿಶ್ವವಿದ್ಯಾಲಯದ ಕ್ರಿಯಾಶೀಲತೆಯನ್ನು ಸಾಬೀತುಪಡಿಸುವುದು ಪ್ರಸಾರಾಂಗ. ಇಲ್ಲಿ ಪುಸ್ತಕ ಪ್ರಕಟಣೆ, ಮಾರಾಟ, ಪ್ರಚಾರೋಪನ್ಯಾಸ-ವಿಶೇಷೋಪನ್ಯಾಸಗಳನ್ನು ಕ್ರಮಬದ್ಧಗೊಳಿಸಿದರು. ಪುಸ್ತಕ ಪ್ರಕಟಣೆಗೆ ಆಥಿ೯ಕ ತೊಂದರೆಯಾಗಬಾರದೆಂದು ಆವತ೯ನ ನಿಧಿ ಯೋಜನೆ ಅಸ್ತಿತ್ವಕ್ಕೆ ತಂದುದು ಇವರ ಸ್ಮರಣೀಯ ಕಾರ್ಯಗಳಲ್ಲೊಂದು. ಪುಸ್ತಕ ಮಾರಾಟ ತೀವ್ರಗೊಂಡು, ಆಥಿ೯ಕ ಸ್ಥಿತಿ ಸುಧಾರಿಸಲು ಹೊಸಪೇಟೆ ನಗರದಲ್ಲಿ ಮಾರಾಟ ಮಳಿಗೆ ಆರಂಭಿಸಿದರು.

kannada univercity hampi
Kannada university, Hampi

ಹಂಪಿ ಉತ್ಸವದಿಂದ ಪ್ರತಿ ವಷ೯ ಒಂದು ಲಕ್ಷ , ಉತ್ತರ ಕನಾ೯ಟಕದ ಶಾಸನಗಳ ಪ್ರಕಟನೆಗಾಗಿ ಸಕಾ೯ರದಿಂದ ಪ್ರತಿವಷ೯ ೨ ಲಕ್ಷ ಹಣ ಪಡೆಯುವ ನೀತಿ ರೂಪಿಸಿದರು. ವಿಶೇಷ ಪುಸ್ತಕಗಳ ಪ್ರಕಟನೆಗಾಗಿ ದಾನಿಗಳಿಂದ ದೊಡ್ಡ ಮೊತ್ತದ ಹಣ ಆಗಾಗ ಪಡೆದು ಸಾವ೯ಜನಿಕ ಸಹಾಯದ ಇನ್ನೊಂದು ಪ್ರಯೋಗ ಮಾಡಿದರು. ಇದರಿಂದಾಗಿ ಮೂರು ವಷ೯ಗಳಲ್ಲಿ ೩೦೦ರಷ್ಟು ಪುಸ್ತಕಗಳು ಪ್ರಕಟನೆಗೊಂಡುದು ಒಂದು ಧಾಖಲೆ. ಇವೆಲ್ಲ ಮುಖ್ಯವಾಗಿ ನಮ್ಮ ಪರಂಪರೆಯ ಉಪೇಕ್ಷಿತ ಕ್ಷೇತ್ರಗಳಿಗೆ ಈ ವಿಶ್ವವಿದ್ಯಾಲಯದ ಅಧ್ಯಾಪಕರಿಗೆ ಸಂಬಂಧಿಸಿದ ಪ್ರಯೋಗಗಳಾಗಿದ್ದವು. ಇವರ ಅವಧಿಯಲ್ಲಿ ಒಂದು ವಷ೯ ಕನ್ನಡ ವಿಶ್ವವಿದ್ಯಾಲಯದ ಆರು ಪುಸ್ತಕಗಳಿಗೆ ಸಾಹಿತ್ಯ ಅಕಾಡಮಿ ಬಹುಮಾನ ಪ್ರಾಪ್ತವಾದುದು ದಾಖಲಾಹ೯ವೆನಿಸಿದೆ. ಜನಪ್ರಿಯ ಗ್ರಂಥಮಾಲೆಯನ್ನಾಧರಿಸಿ, ಕಡಿಮೆ ಬೆಲೆಯಲ್ಲಿ ಕನ್ನಡದ ಪ್ರಸಿದ್ದ ಕೃತಿಗಳಾದ ಹರಿಹರನ ರಗಳೆಗಳು, ಹದಿನೆಂಟು ಪರ್ವದ ಕನ್ನಡ ಭಾರತ, ಸಾವಿರ ಕೀತ೯ನೆ ಮೊದಲಾದವುಗಳನ್ನು ಪ್ರಕಟಿಸಿದರು. ಇದೇ ಮಾಲೆಯಲ್ಲಿ ಲೋಕಶಿಕ್ಷಣ ಟ್ರಸ್ಟ ಸಹಾಯದಿಂದ ಗಳಗನಾಥರ ೨೮ ಕಾದಂಬರಿಗಳ ೬ ಸಂಪುಟಗಳನ್ನು ಹೊರತಂದರು. ಕುವೆಂಪು ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಅಮೇರಿಕಾದ 'ಅಕ್ಕ' ಸಂಸ್ಥೆಯ ನೆರವಿನಿಂದ ಕುವೆಂಪು ಕವನಗಳ ಸಮಗ್ರ ಸಂಪುಟವನ್ನು ಎರಡು ಭಾಗಗಳಲ್ಲಿ ಪ್ರಕಟಿಸಿ, ಹ್ಯೂಸ್ಟನ್ ನಗರದಲ್ಲಿ ಜರುಗಿದ ವಿಶ್ವ ಕನ್ನಡಮೇಳದಲ್ಲಿ ಬಿಡುಗಡೆ ಮಾಡಲಾಯಿತು.
ವಿಶ್ವವಿದ್ಯಾಲಯದ ಮುಖ್ಯ ಆಕಷ೯ಣೆ ಎಂಬಂತೆ ಜಾನಪದ-ಪುರಾತತ್ವ ಇತ್ಯಾದಿಗಳನ್ನೊಳಗೊಂಡ ಮೂಜಿಯಮ್ ಅಸ್ತಿತ್ವಕ್ಕೆ ತಂದುದು ಒಂದು ಸಾಧನೆ. ಹಸ್ತಪ್ರತಿ ವಿಭಾಗದಲ್ಲಿ ಹಸ್ತಪ್ರತಿ ಗ್ರಂಥಾಲಯ ಸ್ಥಾಪನೆಗೊಂಡು, ೨ ಸಾವಿರದಷ್ಟು ಹಸ್ತಪ್ರತಿಗಳು ಸಂಗ್ರಹಗೊಂಡು, ಸೂಚಿ ಸಂಪುಟಗಳು ಪ್ರಕಟವಾದವು. ಗ್ರಂಥಾಲಯವನ್ನು ಮೇಲು ಮಹಡಿಗೆ ಸ್ಥಳಾಂತರಿಸಿ ಸುಸಜ್ಜಿತಗೊಳಿಸಲಾಯಿತು. ಕನ್ನಡ ವಿದ್ಯೆ, ಕನ್ನಡ ವಿಶ್ವವಿದ್ಯಾಲಯ ಜಾಗತಿಕ ಸಂಪಕ೯ ಸಾಧಿಸಲು ಅಂತಜಾ೯ಲ ವಿಭಾಗ ಅಸ್ತಿತ್ವಕ್ಕೆ ತಂದರು. 'ದೇಸಿ ಸಮ್ಮೇಳನ'ವನ್ನು ಆರಂಭಿಸಿದ ಕಾರಣ, ಜನತಾವಿದ್ಯಯ ಅದ್ಯಯನಕ್ಕೆ- ಜನತಾ ಸಂದಶ೯ನಕ್ಕೆ ಅವಕಾಶ ಪ್ರಾಪ್ತವಾಯಿತು. ಯುವಸಾಹಿತಿಗಳಿಗೆ ಪ್ರತಿವಷ೯ 'ಸಾಹಿತ್ಯ ತರಬೇತಿ ಶಿಬಿರ'ನಡೆಸುವ ಉದ್ದೇಶದಿಂದ ಮೊದಲ ವಷ೯ ಕಾವ್ಯ ರಚನಾ ಶಿಬಿರವನ್ನು ಆರಂಬಿಸಿದುದು ಒಂದು ಅನ್ವಯಿಕ ಪ್ರಯೋಗವೆನಿಸಿದೆ.

ಇವರ ಅವಧಿಯ ಮುಖ್ಯ ಕಾಯ೯ವೆಂದರೆ ಶಿಲ್ಪಕಲಾ ವಿಭಾಗವನ್ನು ಶಿಲ್ಪಕಲಾ ಪರಂಪರೆಯ ತವರುಮನೆಯೆನಿಸಿದ ಬದಾಮಿ ಪರಿಸರಕ್ಕೆ ಸ್ಥಳಾಂತರಿಸಿದುದು ಮತ್ತು ಅಲ್ಲಿ ಶಿಲ್ಪಕಲಾ ಮೂಜಿಯಮ್ ಆರಂಭಿಸಿದುದು ಈ ಮೂಲಕ ವಿಶ್ವವಿದ್ಯಾಲಯವು ಹಂಪಿ ಆವರಣದಿಂದ ಹೊರಗೂ ಬೆಳೆಯಲು ಅನುವಾಯಿತು. ಪ್ರತಿವಷ೯ ರಾಜ್ಯದ ಬೇರೆ ಬೇರೆ ಪ್ರದೇಶಗಳಲ್ಲಿ 'ಚಿತ್ರಕಲಾ ಪ್ರದಶ೯ನ'ಏಪ೯ಡುವ ಉಪಕ್ರಮ ಆರಂಭವಾಯಿತು. ಸಂಪ್ರದಾಯಿಕ ವಿಶ್ವವಿದ್ಯಾಲಯಗಳಲ್ಲಿ ಸಹಜವಾಗಿಯೇ ಉಪೇಕ್ಷೆಗೆ ಒಳಗಾಗಿದ್ದ ಚಿತ್ರ, ಶಿಲ್ಪ ಇತ್ಯಾದಿ ಲಲಿತಕಲಾ ವಿಭಾಗಗಳನ್ನು ಕನ್ನಡ ವಿಶ್ವವಿದ್ಯಾಲಯಕ್ಕೆ ವಗಾ೯ಯಿಸುವಂತೆ ಸರಕಾರದಿಂದ ಒಪ್ಪಿಗೆ ಪಡೆದರು,ಇದರಿಂದ ಈ ವಿಶ್ವವಿದ್ಯಾಲಯಕ್ಕೆ ರಾಜ್ಯ ವಿಸ್ತಾರ ಪ್ರಾಪ್ತಿಯಾಯಿತು.

ವಿಶ್ವವಿದ್ಯಾಲಯದ ಶೈಕ್ಷಣಿಕ ವಾತಾವರಣದಂತೆ ಆವರಣವೂ ಬೆಳೆಯ ಬೇಕೆಂದು ಸಂಸದರ ನಿಧಿಯಿಂದ ಹೈದ್ರಾಬಾದ ಕನಾ೯ಟಕ ಅಭಿವೃದ್ದಿ ನಿಗಮದಿಂದ ದೊಡ್ಡ ಮೊತ್ತದ ಅನುದಾನ ಪಡೆದು, ರಸ್ತೆಗಳ ಡಾಂಬರೀಕರಣ ಮಾಡಿಸಿ, ಅವುಗಳಿಗೆ 'ಸೂಯ೯ಬೀದಿ-ಚಂದ್ರಬೀದಿ, ಹುಕ್ಕ ರಸ್ತೆ- ಬುಕ್ಕ ರಸ್ತೆ' ಎಂದು ಹೆಸರಿಡಲಾಯಿತು. ವಿಶ್ವವಿದ್ಯಾಲಯ ಧನಸಹಾಯ ಆಯೋಗಕ್ಕೆ ಕನ್ನಡ ವಿಶ್ವವಿದ್ಯಾಲಯ ಒಳಪಟ್ಟುದು ಇವರ ಕಾಲಾವಧಿಯ ಇನ್ನೊಂದು ದೊಡ್ಡ ಸಾಧನೆಯಂದೇ ಹೇಳಬೇಕು. ಇದರಿಂದ ಬಂದ ಹಣದ ನೆರವಿನಿಂದ 'ಮಾನಸೋಲ್ಲಾಸ' ಹೆಸರಿನ ಸಭಾ ಭವನ ಕಟ್ಟಿಸುವಂತೆ ಆಗ್ರಹಿಸಿ ಸಫಲರಾದರು. 'ಸವ೯ಜ್ಞ' ಹೆಸರಿನ ಗ್ರಂಥಾಲಯ ಕಟ್ಟಡದ ನಿಮಾ೯ಣಕಾಯ೯ಕ್ಕೆ ಒತ್ತಾಸೆಯಾಗಿ ನಿಂತರು, ಮಿಕ್ಕ ಹಣದಿಂದ ಗ್ರಂಥಾಲಯವನ್ನು ಪುಸ್ತಕ ಮೊತ್ತದಿಂದ ಸಮೃದ್ಧಗೊಳಿಸಾಯಿತು.

"ಕನ್ನಡ ವಿಶ್ವವಿದ್ಯಾಲಯದ ಪ್ರಥಮ ಗುರಿ 'ಕನ್ನಡ ಸಂಸ್ಕೃತಿಯ' ಶೋಧ, ವಿಮರ್ಶೆ ಮತ್ತು ಪ್ರಸಾರ. ಅಂತಿಮ ಗುರಿ ಸುತ್ತಲಿನ ಸಂಸ್ಕೃತಿಗಳ ವಿವೇಕಪೂರ್ಣ ವಿನಿಯೋಗ. ಆದಿಕವಿ ಪಂಪ, ಸಾಹಿತ್ಯಕ್ಕೆ ಅನ್ವಯಿಸಿ ಹೇಳಿರುವ 'ದೇಶಿಯೊಳ್ ಪುಗುವುದು ಪೊಕ್ಕು ಮಾರ್ಗದೊಳೆ ತಳ್ವದು' ಎಂಬ ಮಾತು ಪರ್ಯಾಯವಾಗಿ ಇದನ್ನೇ ದ್ವನಿಸುತ್ತದೆ.... ಈ ಮತ್ತು ಇಂಥ ದೇಶಿ ಚಿಂತನೆಗಳ ಆದರ್ಶದಲ್ಲಿ ಕನ್ನಡ ವಿಶ್ವವಿದ್ಯಾಲಯ ಮೊದಲು ಮಾಡಬೇಕಾದ ಕೆಲಸವೆಂದರೆ ವಿಸೃತಿಯ ಸಾಗರದಲ್ಲಿ ಮುಳುಗಿ ಹೋಗಿರುವ ನಮ್ಮ ಪಾರಂಪರಿಕ ಕ್ರಿಯೆ, ಪ್ರಕ್ರಿಯೆರೂಪದ 'ಸ್ವದೇಶಿ ಸತ್ಯ'ಗಳನ್ನು ಶೋಧಿಸುವುದು; ಬಳಿಕ ಅಲ್ಲಿ ಸೇರಿಕೊಂಡಿರುವ ದೋಷಗಳನ್ನು ದೂರ ಸರಿಸಿ ಗುಣಾಂಶಗಳನ್ನು ಗುರುತಿಸುವುದು, ಜೊತೆಗೆ ಪೂರ್ಣ ಬದುಕಿಗೆ ಅವಶ್ಯವಿರುವ ಕೊರತೆಗಳನ್ನು ಅನ್ಯಸಂಸ್ಕೃತಿಯಿಂದ ಎಚ್ಚರವಹಿಸಿ ತುಂಬಿಕೊಳ್ಳುವುದು..."