ಸಿರುಮನ ಸಾಂಗತ್ಯಗಳು

ಗ್ರಂಥಸಂಪಾದನ ಶಾಸ್ತ್ರ:

ಸಿರುಮನ ಸಾಂಗತ್ಯಗಳು, ಸಿರುಮನ ಚರಿತೆ, ಗೊಲ್ಲ ಸಿರುಮನ ಚರಿತೆ:

sirumana sangatya ಸಿರುಮಣ ನಾಯಕನ ಸಾಂಗತ್ಯ (ಸಿದ್ಧಕವಿ), ಸಿರುಮನ ಚರಿತೆ(ಕೆಂಚಿಶೆಟ್ಟಿಸುತರಾಮ), ೩, ಗೊಲ್ಲ ಸಿರುಮನ ಚರಿತೆ (ಮಲ್ಲಕವಿ) ಈ ಮೂರು ಕೃತಿಗಳು ಸಿರುಮಭೂಪಾಲನನ್ನು ಕುರಿತು ರಚನೆಗೊಂಡ ಸಾಂಗತ್ಯ ಕಾವ್ಯಗಳು. ಈ ಮುಂಚೆ ಪ್ರತ್ಯೇಕವಾಗಿಯೆ ಈ ಕೃತಿಗಳನ್ನು ಪ್ರಕಟಿಸಿದ್ದ ಡಾ. ಕಲಬುರ್ಗಿಯವರು, ಇವು ಒಂದು ಸಂಪುಟವಾಗಿ ಓದುಗರಿಗೆ ದೊರೆಯಬೇಕೆಂಬ ಉದ್ದೇಶದಿಂದ ಮತ್ತೊಮ್ಮೆ ಪರಿಷ್ಕರಿಸಿ 'ಸಿರುಮನ ಸಾಂಗತ್ಯಗಳು'ಎನ್ನುವ ಹೆಸರಿನಲ್ಲಿ ಪ್ರಕಟಿಸಿದ್ದಾರೆ. "ಕರ್ನಾಟಕದಲ್ಲಿ ಒಂದು ರಾಜಮನೆತನವನ್ನು ಕುರಿತು ಕುಮಾರರಾಮನನ್ನು ಬಿಟ್ಟರೆ ಹೆಚ್ಚು ಅಂದರೆ ಮೂರು ಕೃತಿಗಳು, ಹುಟ್ಟಿದುದು ಸಿರಿಮನನ್ನು ಕುರಿತು"ಎಂದು ಅಭಿಪ್ರಾಯಪಡುತ್ತಾರೆ. ಇದು ಅಲ್ಲದೆ ಈ ಸಾಂಗತ್ಯಗಳು ಸಿರುಮನ ರಾಜಕೀಯ ಚರಿತ್ರೆಯ ಜೊತೆಗೆ ಸಾಂಸ್ಕೃತಿಕ ಚರಿತ್ರೆಯನ್ನೂ ಒಳಗೊಂಡಿರುವುದನ್ನು ಡಾ. ಕಲಬುರ್ಗಿಯವರು ಗುರುತಿಸುತ್ತಾರೆ. ಹೀಗಾಗಿ ಇವು ಅಭ್ಯಾಸಿಗಳಿಗೆ ತುಂಬಾ ಉಪಯುಕ್ತ ಕೃತಿಗಳೆನಿಸಿವೆ. ಈ ಸಾಂಗತ್ಯ ಕಾವ್ಯಗಳು ಕ್ರಮವಾಗಿ ೫, ೧೩ ಮತ್ತು ೬ ಸಂಧಿಗಳ್ನ್ನು ಒಳಗೊಂಡಿವೆ.
(ಪ್ರ) :  ವೀರಶೈವ ಅಧ್ಯಯನ ಸಂಸ್ಥೆ, ಶ್ರೀ ಜಗದ್ಗುರು ತೋಂಟದಾರ್ಯಮಠ, ಗದಗ – ೧೯೮೩