ಸ್ವಾದಿ ಅರಸುಮನೆತನ

ಸಂಪಾದನ ಶಾಸ್ತ್ರ:

ಸ್ವಾದಿ ಅರಸುಮನೆತನ:

svadi arasu manetana

ವೀರಶೈವ ಅರಸು ಮನೆತನಗಳಲ್ಲಿ ಸ್ವಾದಿ ಅರಸು ಮನೆತನವೂ ಒಂದು. ಉತ್ತರ ಕನ್ನಡ ಜಿಲ್ಲೆಯಲ್ಲಿ ಆ ಧರ್ಮದ ಸಾಹಿತ್ಯ-ಸಂಸ್ಕೃತಿ ಪ್ರಸಾರವಾಗಲು ಶ್ರಮಿಸಿದ ಈ  ರಾಜಮನೆತನಕ್ಕೆ ವಿಶಿಷ್ಟ ಸ್ಥಾನವಿದೆ. ವಿಜಯನಗರ-ಕೆಳದಿ-ಮುಸಲ್ಮಾನ-ಮರಾಠಾ-ಪೋರ್ತುಗೀಜ ಹೀಗೆ ಅನ್ಯ ರಾಜ್ಯ, ಅನ್ಯ ಭಾಷೆ, ಅನ್ಯ ಸಂಸ್ಕೃತಿ ಆಡಲಿತ ಮಧ್ಯಯೂ ತಲೆಯೆತ್ತಿ ಬದುಕಿದ್ದ ಈ ಮನೆತನದ ಇತಿಹಾಸ, ಈ ಕೃತಿ ಪ್ರಕಟವಾಗುವವರೆಗೂ ಅಲಕ್ಷಿತವಾಗಿಯೆ ಇದ್ದಿತು. ಧಾರವಾಡದಲ್ಲಿ 'ವೀರಶೈವ ಅಧ್ಯಯನ ಸಂಸ್ಥೆ'ಯ ಆಶ್ರಯದಲ್ಲಿ ಮೂರುದಿನಗಳ ಪರ್ಯಂತ (೩, ೪ ಹಾಗೂ ೫ ನ ನವೆಂಬರ ೧೯೯೦) ವಿಚಾರ ಸಂಕಿರಣವಂದನ್ನು ಏರ್ಪಡಿಸಿ ಆ ಸಂದರ್ಭದಲ್ಲಿ ಮಂಡಿತವಾದ ಪ್ರಬಧಗಳನ್ನು ಡಾ.ಎಂ.ಎಂ.ಕಲಬುರ್ಗಿ ಹಾಗೂ ಡಾ.ಅ. ಸುಂದರ ಅವರು ಸಂಪಾದಿಸಿ ಪುಸ್ತಕರೂಪದಲ್ಲಿ ಪ್ರಕಟಿಸಿದುದರ ಫಲವಾಗಿ ಪ್ರಸ್ತುತ ಅರಸು ಮನೆತನದ ಇತಿಹಾಸ-ಸಂಸ್ಕೃತಿ ಬೆಳಕು ಕಾಣುವಂತಾಯಿತು. (ಪ್ರ. ವೀರಶೈವ ಅಧ್ಯಯನ ಸಂಸ್ಥೆ, ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಗದಗ-೧೯೯೫).

 

ಭಾರತ ಸ್ವಾತಂತ್ರ್ಯ ಮತ್ತು ಕನಾ೯ಟಕ ಏಕೀಕರಣ- ಲಿಂಗಾಯತರ ಪಾತ್ರ :

sampadane_1

ಈ ಕೃತಿಯನ್ನು ಡಾ.ಎಂ.ಎಂ.ಕಲಬುರ್ಗಿ ಹಾಗೂ ಡಾ.ಎಸ್.ಎಚ್.ಪಾಟೀಲ ಅವರು ಸಂಪಾದಿಸಿದ್ದಾರೆ. "ಭಾರತ ಚರಿತ್ರೆಯಲ್ಲಿ ಐತಿಹಾಸಿಕವೆನಿಸಿದ ಸ್ವಾತಂತ್ರ್ಯ ಚಳುವಳಿ, ಕರ್ನಾಟಕ ಚರಿತ್ರೆಯಲ್ಲಿ ಐತಿಹಾಸಿಕವೆನಿಸಿದ ಏಕೀಕರಣ ಚಳುವಳಿಗಳಲ್ಲಿ ...ದೊಡ್ಡ ಸಮಾಜದ ಲಿಂಗಾಯತರು ವಹಿಸಿದ ಪಾತ್ರವೇನು? ಎಂಬ ಪ್ರಶ್ನೆಗೆ ಉತ್ತರ ಈ ಕೃತಿ (ಸಂಪಾದಕೀಯ) ಎಂದಿದ್ದಾರೆ ಸಂಪಾದಕರು. ಭಾರತ ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕ ಏಕೀಕರಣ ಹೋರಾಟಗಳಲ್ಲಿ ಇಲ್ಲಿಯ ಲಿಂಗಾಯತರು ವಹಿಸಿದ ಪಾತ್ರದ ಕುರಿತು ತಲಾ ನಾಲ್ಕು ನಾಲ್ಕು ಲೇಖನಗಳನ್ನು ಈ ಕೃತಿಯಲ್ಲಿ ಸಂಗ್ರಹಿಸಲಾಗಿದೆ. ಈ ಲೇಖನಗಳು ಮುಂಬಯಿ, ಮೈಸೂರು, ಹೈದ್ರಾಬಾದ ಮತ್ತು ಮದ್ರಾಸ ಭಾಗಗಳ ಕರ್ನಾಟಕದಲ್ಲಿ ನಡೆದ ಪ್ರಸ್ತುತ ಎರಡು ಚಳುವಳಿಗಳ ಸ್ವರೂಪವನ್ನು ಕಟ್ಟಿಕೊಟ್ಟಿವೆ. (ಪ್ರ. ವೀಶೈವ ಅಧ್ಯಯನ ಸಂಸ್ಥೆ, ಶ್ರೀ ಜಗದ್ಗುರು ತೋಂಟ್ದಾರ್ಯ ಸಂಸ್ಥಾನಮಠ, ಡಂಬಳ-ಗದಗ-೧೯೯೮).

 

ಮಡಿವಾಳಪ್ಪ ಸಾಸನೂರ-ಬರೆಹ:

madivalappa sasnur