ಕಿತ್ತೂರು ಸಂಸ್ಠಾನ ಸಾಹಿತ್ಯ

ಗ್ರಂಥಸಂಪಾದನ ಶಾಸ್ತ್ರ:

ಕಿತ್ತೂರು ಸಂಸ್ಠಾನ ಸಾಹಿತ್ಯ -ಭಾಗ ೨೦:

kitturu samstana sahity

 

 

 

 

 

 

ಕಿತ್ತೂರು ಸಂಸ್ಠಾನ ಸಾಹಿತ್ಯ -ಭಾಗ ೩:

kittur samsthana sahitya

ಶಿಷ್ಟ ಹಾಗೂ ಜಾನಪದ ಕವಿಗಳು ಕಿತ್ತೂರು ಸಂಸ್ಥಾನದ ಚರಿತ್ರೆಯನ್ನು ದಾಖಲೆ, ಐತಿಹ್ಯ, ಕಲ್ಪನೆಗಳ ಬಲದಿಂದ ಅಲ್ಲಿಷ್ಟು ಇಲ್ಲಿಷ್ಟು ಪ್ರಕಟಿಸಿದ್ದು, ಚದುರಿದಂತಿದ್ದ ಈ ಸಾಹಿತ್ಯವು ಜನರ ಕಣ್ಣಿಗೆ ಬಿದ್ದುದು ತೀರ ಕಡಿಮೆ. ಇದನ್ನು ಗಮನಿಸಿದ್ದ ಡಾ. ಕಲಬುರ್ಗಿಯವರು ಹೀಗೆ ಅಜ್ಞಾತವಾಗಿ ಉಳಿದಿದ್ದ ಪ್ರಕಟಿತ ಸಾಹಿತ್ಯದ ಜೊತೆಗೆ ಇನ್ನೂ ಅಪ್ರಕಟಿತವಾಗಿದ್ದ ಸಾಹಿತ್ಯವನ್ನೂ ಸೇರಿಸಿ 'ಕಿತ್ತೂರು ಸಂಸ್ಥಾನ ಸಾಹಿತ್ಯ'ವನ್ನು ತುಂಬಾ ವ್ಯವಸ್ಥಿತವಾಗಿ ಮೂರು ಭಾಗಗಳಲ್ಲಿ ವಿಂಗಡಿಸಿ ಪ್ರತ್ಯೇಕ ಮೂರು(ಭಾಗ ೧,೨,೩) ಕೃತಿಗಳಲ್ಲಿ ಪ್ರಕಟಿಸಿ ಕಿತ್ತೂರು ಸಂಸ್ಥಾನ ಚರಿತ್ರೇಯ ಮೇಲೆ ಇನ್ನಿಷ್ಟು ಬೆಳಕು ಚಲ್ಲಲು ಶ್ರಮಿಸಿದ್ದಾರೆ. ಮೊದಲಿನ ಎರಡು ಕೃತಿಗಳನ್ನು ಇತರರನ್ನು ಸೇರಿಸಿಕೊಂಡು ಸಂಪಾದಿಸಿದ ಕಲಬುರ್ಗಿಯವರು, ಮೂರನೆಯದನ್ನು ತಾವೊಬ್ಬರೇ ಸಂಪಾದಿಸಿದ್ದಾರೆ. ಇವೆಲ್ಲಕ್ಕೂ ಅತ್ಯಂತ ಮೌಲಿಕವಾಗಿ 'ಪ್ರಸ್ತಾವನೆ'ಬರೆದಿದ್ದಾರೆ. ಸಂಸ್ಥಾನದ ಪ್ರಮುಖ ರಾಜ-ರಾಣಿಯರ ಚರಿತ್ರೆ, ಯುದ್ಧವೇಶ, ಪದಸಾಹಿತ್ಯ, ಪುರಾಣ, ಉತ್ಸವ, ಸರ್ ವಾಲ್ಟರ್ ಎಲಿಯಟ್ ರಚಿಸಿದ 'ಮಿಸಲೆನಿಯಸ್ ನಿಟ್ಸ್ ಆಫ್ ಸರ್ ವಾಲ್ಟರ್ ಎಲಿಯಟ್'ಕೃತಿಯ ಆಯ್ದ ಲೇಖನಗಳ ಇಂಗ್ಲೀಷ ಮೂಲದೊಂದಿಗೆ ಕನ್ನಡ ಅನುವಾದ ಮೊದಲಾದ ಮಹತ್ವದ ಸಂಗತಿಗಳನ್ನು ಒಳಗೊಂಡಿರುವ ಪ್ರಸ್ತುತ ಕೃತಿಗಳು ಕಿತ್ತೂರು ನಾಡಿನ ಸಾಹಿತ್ಯ-ಸಂಸ್ಕೃತಿಯ ಅಭ್ಯಾಸಕ್ಕೆ ಹೆಚ್ಚಿನ ಅವಕಾಶವನ್ನು ಒದಗಿಸುವಂತಿದೆ. (ಪ್ರ. ಲಿಂಗಾಯತ ಅಧ್ಯಯನ ಸಂಸ್ಥೆಃ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ, ಗದಗ-೧೯೯೯,೨೦೦೫,೨೦೧೫)

ಸಂಕೀರ್ಣವಚನ ಸಂಪುಟ-೧:

೧೯೮೮ರಲ್ಲಿ 'ಸಮಗ್ರ ವಚನ ಸಾಹಿತ್ಯದ ಜನಪ್ರಿಯ ಆವೃತ್ತಿ ಪ್ರಕಟನ ಯೊಜನೆ' ರೂಪಿಸಿ ತುಂಬಾ ಜಟಿಲವಾದ ಆ ಕಾರ್ಯವನ್ನು ತಮ್ಮ ಪ್ರಧಾನ ಸಂಪಾದಕತ್ವದಲ್ಲಿ ಯಶಸ್ವಿಯಾಗಿ ನಿರ್ವಹಿಸಿದವರು ಡಾ. samkirna vachana samputaಕಲಬುರ್ಗಿಯವರು. ಸುಮಾರು ಇಪ್ಪತ್ತು ಸಾವಿರ ವಚನಗಳನ್ನು ಹದಿನೈದು ಸಂಪುಟಗಳಲ್ಲಿ ಸಮಗ್ರವಾಗಿ ಪ್ರಕಟಿಸಿದ ಮಹತ್ವದ ಯೋಜನೆಇದು. ಈ ಯೋಜನೆಯ ಆರನೆಯ ಸಂಪುಟವೇ ಕಲಬುರ್ಗಿಯವರು ಸಂಪಾದಿಸಿರುವ ಈ 'ಸಂಕೀರ್ಣವಚನ ಸಂಪುಟ -೧'. "ಸ್ವರವರ್ಣಗಳಿಂದ ಪ್ರಾರಂಭವಾಗುವ ಹೆಸರಿನ ಬಸವಯುಗದ ಎಲ್ಲ ಶರಣರ ಎಲ್ಲ ವಚನಗಳನ್ನು" ಈ ಸಂಪುಟದಲ್ಲಿ ನಿಜವಚನಗಳ ಪಾಠ ಶುದ್ಧಿಕರಣದೊಂದಿಗೆ ಪರಿಷ್ಕರಿಸಿ ಸಂಪಾದಿಸಲಾಗಿದೆ. ನಿಜ ವಚನಕಾರರ ಹೆಸರಿನಲ್ಲಿ ಸಿಗುವ ಪ್ರಕ್ಷಿಪ್ತ ವಚನಗಳನ್ನು ಆಕರಗಳ ವಿಶ್ವಾಸಾರ್ಹತೆಯ ಕೊರತೆಯಿಂದಾಗಿ ಇಲ್ಲಿ ನಿರಾಕರಿಸಲಾಗಿದೆ. ಈ ಪ್ರಕ್ರಿಯೆಗಾಗಿ ಫ.ಗು.ಹಳಕಟ್ಟಿ, ಚನ್ನಪ್ಪ ಉತ್ತಂಗಿ ಮೊದಲಾದ ವಿದ್ವಾಂಸರ ಆಕರಗಳನ್ನು ತೂಗಿ ಬಳಸಿಕೊಳ್ಳಲಾಗಿದೆ. ೨೪ ವಚನಕಾರರ ಒಟ್ಟು ೧೭೪೪ ವಚನಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಜೊತೆಗೆ ೧೧ ಜನ ವಚನಕಾರರ ಚರಿತ್ರೆಯ ಅಲಭ್ಯತೆ ಸೂಚಿಸಿ, ಮಿಕ್ಕ ೧೩ ಜನ ವಚನಕಾರರ ಸಂಕ್ಷಿಪ್ತ ಚರಿತ್ರೆಗಳನ್ನು ಕಟ್ಟಿಕೊಡಲಾಗಿದೆ. ವಿವಿಧ ಜಾತಿ, ವೃತ್ತಿ, ಅನುಭವಗಳ ಹಿನ್ನೆಲೆಯಿಂದ ಬಂದ ವೀರಶೈವ ತತ್ವಗಳನ್ನು ನಂಬಿ ಬದುಕಿದವರ ಧ್ವನಿ ವೈವಿಧ್ಯವನ್ನು ಇಲ್ಲಿಯ ವಚನಗಳು ಪ್ರಸ್ತುತಪಡಿಸುವದರಿಂದ ಈ ಸಂಪುಟ ವಿಶೇಷವೆನಿಸುತ್ತದೆ. (ಪ್ರ. ಕನ್ನಡ ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ (ಪ್ರಥಮ ಆವೃತ್ತಿ)೧೯೯೩, ಕನ್ನಡ ಪುಸ್ತಕ ಪ್ರಾಧಿಕಾರ ಕರ್ನಾಟಕ ಸರಕಾರ (ಪರಿಷ್ಕೃತ ಆವೃತ್ತಿ)೨೦೦೧).