ಫ ಗು ಹಳಕಟ್ಟಿ ಆತ್ಮಚರಿತ್ರೆ

ಗ್ರಂಥಸಂಪಾದನ ಶಾಸ್ತ್ರ:

ಡಾ. ಫ.ಗು. ಹಳಕಟ್ಟಿ ಆತ್ಮಚರಿತ್ರೆ:

f g halakatti atma  charitre

 

 

 

 

 

 

ಡಾ. ಫ.ಗು. ಹಳಕಟ್ಟಿ ಸಮಗ್ರ ಸಾಹಿತ್ಯ ಸಂಪುಟ-೫:

f g halakatti samagra sahitya

ವಿಜಯಪುರದ ಬಿ.ಎಲ್.ಡಿ.ಇ. ಸಂಸ್ಥೆಯು 'ಡಾ.ಫ.ಗು.ಹಳಕಟ್ಟಿ ಸ್ಮಾರಕ ಭವನ' ನಿರ್ಮಿಸಿ ೨ ಜುಲೈ ೨೦೦೩ರಂದು ಅದರ ಉದ್ಘಾಟನೆಯನ್ನು ನೆರವೇರಿಸಿತು. ಈ ಸಮಾರಂಭದ ಅಥಿತಿಯಾಗಿ ಡಾ. ಎಂ.ಎಂ.ಕಲಬುರ್ಗಿಯವರು ಭಾಗವಹಿಸಿದ್ದರು. ಆಗ ಅವರಿಗೆ ಹೊಳೆದದ್ದು ಫ.ಗು.ಹಳಕಟ್ಟಿಯವರ ಸಮಗ್ರ ಸಾಹಿತ್ಯ ಪ್ರಕಟನ ಯೋಜನೆ; ತಾವೇ ಪ್ರಧಾನ ಸಂಪಾದಕತ್ವ ಹೊಣೆಹೊತ್ತು ೧೫ ಸಂಪಾದಕರ ಮೂಲಕ ೧೫ ಸಂಪುಟಗಳಲ್ಲಿ ಪ್ರಕಟಿಸಿ (೨೦೦೭)ದರು. ಈ ಯೋಜನೆಯ ಒಂದು ಮಾದರಿ ಸಂಪುಟವೆಂಬಂತೆ ಕಲಬುರ್ಗಿಯವರ ಸಂಪಾದಕತ್ವದಲ್ಲಿ ಪ್ರಸ್ತುತ ಸಂಪುಟ ಪ್ರಕಟನೆಗೊಂಡಿದೆ. ಫ.ಗು.ಹಳಕಟ್ಟಿರು ಈ ಮುಂಚೆಯೆ ಪ್ರಕಟಿಸಿದ್ದ 'ವಚನಶಾಸ್ತ್ರಸಾರ'ದ ನಾಲ್ಕು ಆವೃತ್ತಿಗಳಲ್ಲಿ ಉಳಿದುಕೊಂಡು ಬಂದಿದ್ದ ಮುದ್ರಣ ದೋಷಗಳನ್ನು ತಿದ್ದಿ- ಪರಿಷ್ಕರಿಸಿದ ೫ ನೆಯ ಆವೃತ್ತಿ ಇದಾಗಿದೆ. ಪೂರ್ವಾರ್ಧ ಪೀಠಿಕಾಸ್ಥಲ, ಭಕ್ತಸ್ಥಲ, ಮಹೇಶ್ವರಸ್ಥಲಗಳನ್ನು; ಉತ್ತರಾರ್ಧವು ಪ್ರಸಾದಿಸ್ಥಲ, ಪ್ರಾಣಲಿಂಗಸ್ಥಲ, ಶರಣಸ್ಥಲ, ಐಕ್ಯಸ್ಥಲ ಮತ್ತು ಅನುಬಂಧವನ್ನು ಒಳಗೊಂಡಿದೆ. ವಚನಸಾಹಿತ್ಯ ಸಂಪಾದನೆ ಕ್ಷೇತ್ರದಲ್ಲಿ ಇದೊಂದು ಮೌಲಿಕ ಕೃತಿಯಾಗಿದೆ.(ಪ್ರ. ವಚನ ಪಿತಾಮಹ ಡಾ ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರ , ಬಿ.ಎಲ್.ಡಿ.ಇ. ಸಂಸ್ಥೆ, ವಿಜಾಪುರ-೨೦೦೭).

ಮಡಿವಾಳಪ್ಪಾ  ಸಾಸನೂರ - ಬದುಕು- ಬರಹ:

madivalappa sasnur

 

 

 

 

 

 

ವಚನಶಾಸ್ತ್ರಸಾರ ಭಾಗ-೧ :

vachana shastra sara

ತಾತ್ವಿಕ ಕ್ರಮದಲ್ಲಿ ಒಗ್ಗೂಡಿಸಿಕೊಂಡು ಓದಬೇಕಿದ್ದ ವಚನಗಳನ್ನು ಪಲ್ಲಟಿತ ಸ್ಥಿತಿಯಲ್ಲೇ ಓದಿಕೊಂಡು ಅವುಗಳ ಸಮಗ್ರೀಕೃತ ಅರ್ಥಕ್ಕೆ ಭಂಗತರುತಿದ್ದುದನ್ನು ಗಮನಿಸಿದ ಫ.ಗು.ಹಳಕಟ್ಟಿಯವರು ಅವುಗಳನ್ನು ಷಟಸ್ಥಲಗಳಿಗನುಸಾರವಾಗಿ ಹೊಂದಿಸಿ ೧೯೨೩ರಲ್ಲಿ ಮೊದಲ ಆವೃತ್ತಿ ಪ್ರಕಟಿಸಿದರು. ಇದರ ೨ನೇ ಆವೃತ್ತಿಯು (ಪೂರ್ವಾರ್ಧ ೧೯೩೧ರಲ್ಲಿ, ಉತ್ತರಾರ್ಧ ೧೯೩೩ರಲ್ಲಿ) ಪ್ರಕಟವಾಯಿತು. ಡಾ.ಎಂ.ಎಂ.ಕಲಬುರ್ಗಿ ಮತ್ತು ಡಾ.ವೀರಣ್ಣ ರಾಜೂರ ಅವರು ಸೇರಿಕೊಂಡು ಪರಿಷ್ಕೃತ ಮೂರನೆಯ ಆವೃತ್ತಿಯನ್ನು (೧೯೮೧)ಪ್ರಕಟಿಸಿದರು. ಇವರು ಪರಿಷ್ಕರಣೆಗೆ ತಾವು ಅನುಸರಿಸಿದ ಕ್ರಮದ ಬಗ್ಗೆ, ಅದರ ಫಲವಾಗಿ ಮೊದಲಿನ ಆವೃತ್ತಿಗಿಂತ ಶುದ್ಧವೂ ಸುಂದರವೂ ಆಗಿರುವ ಬಗ್ಗೆ ವಿನಂಮ್ರವಾಗಿ ಹೇಳಿಕೊಂಡಿದ್ದಾರೆ. (ಪ್ರ ವೀಶೈವ ಅಧ್ಯಯನ ಸಂಸ್ಥೆ, ಶ್ರೀ ಜಗದ್ಗುರು ತೋಂಟ್ದಾರ್ಯ ಸಂಸ್ಥಾನಮಠ, ಡಂಬಳ-ಗದಗ-೧೯೯೯).