ಗ್ರಂಥಸಂಪಾದನ ಶಾಸ್ತ್ರ:
ಬಸವಣ್ಣನವರ ವಚನಗಳು:
ಬಾಲರಾಮನ ಸಾಂಗತ್ಯ :
ಹೊಸ ಕುಮಾರರಾಮನ ಸಾಂಗತ್ಯ:
ಡಾ.ಎಂ.ಎಂ.ಕಲಬುರ್ಗಿ ಮತ್ತು ಡಾ. ವೀರಣ್ಣರಾಜೂರ ಕೂಡಿ ಸಂಪಾದಿಸಿದ ಕೃತಿಯಿದು. ಮೇಲುಕೋಟೆಯ 'ಸಂಸ್ಕೃತ ಸಂಶೋಧನ ಸಂಸತ್'ನಲ್ಲಿ ದೊರೆತ ತಾಳೆಗರಿ ಪ್ರತಿಯ ಆಧಾರದಲ್ಲಿ 'ಹಳೆಯ ಕುಮಾರರಾಮನ ಸಾಂಗತ್ಯ'ವನ್ನು ಪ್ರಕಟಗೊಳಿಸುವಂತೆ ಕಂಪಲಿಯ ಶ್ರೀ ದೊಡ್ಡನಗೌಡರ ಮನೆಯಲ್ಲಿ ದೊರೆತ ಕಾಗದ ಪ್ರತಿಯ ಆಧಾರದಿಂದ 'ಹೊಸ ಕುಮಾರರಾಮನ ಈ ಸಾಂಗತ್ಯ ಕಾವ್ಯವನ್ನು ಪರಿಷ್ಕರಿಸಿ ಪ್ರಕಟಿಸಲಾಗಿದೆ. ೧೨ ಸಂಧಿ, ೨೪೮೯ ಪದ್ಯಗಳನ್ನು ಒಳಗೊಂಡಿರುವ ಈ ಕಾವ್ಯದ ಕರ್ತೃವು ಯಾರೆಂಬುದು ತಿಳಿದಿಲ್ಲ. ಯುದ್ಧದ ಭೀಕರತೆ, ಅದರೀಂದ ಸಾಮಾನ್ಯ ಜನವರ್ಗದ ಮೇಲಾಗುವ ಪರಿಣಾಮ, ರಾಜಸತ್ತಾಯುಗದ ಶೌರ್ಯ, ಸುಳಿತಾಳನ ಮಗಳು ಬಾಚಮ್ಮ ಬಯಸುವ ಪ್ರೀತಿಯ ವೈಫಲ್ಯ, ಕಂಪಿಲನ ಕಿರಿಯ ರಾಣಿ ರತ್ನಾಜಿ ತೋರುವ ಪ್ರೇಮ ವಿಕಾರ, ಜೀವಹಂತಕಿಯಾಗಿ ವರ್ತಿಸುವ ಮಾದಿಗಿತ್ತಿ- ಈ ಎಲ್ಲ ಘಟನಾವಳಿಗಳನ್ನು 'ಕೇಂದ್ರಪ್ರಜ್ಞೆ'ಯಾಗಿಸಿಕೊಂಡು' ಈ ಹೊಸ ಕುಮಾರರಾಮನ ಸಾಂಗತ್ಯ'ಬೆಳೆದು ನಿಲ್ಲುತ್ತದೆ. ಈ ರೀತಿಯ ಕಥೆಗೆ 'ಕುಮಾರರಾಮನೇ ಮೊದಲಿಗ'ಎಂದೂ ಒಂದರ್ಥದಲ್ಲಿ ಸೋಮೇಶ್ವರದೇವಾಲಯದ ಹಸ್ತಪ್ರತಿಯ ವಿಸ್ತೃತರೂಪ ದೊಡ್ಡನಗೌಡರ ಕಾಗದಪ್ರತಿಯ ಪಠ್ಯವಾಗಿದೆಯೆಂದೂ ಸಂಪಾದಕರು ಗುರುತಿಸುತ್ತಾರೆ. (ಪ್ರ. ಪ್ರಸಾರಾಂಗ ಕನ್ನಡವಿಶ್ವವಿದ್ಯಾಲಯ, ಹಂಪಿ- ೨೦೦೦).