ಹಳೆಯ ಕುಮಾರರಾಮನ ಸಾಂಗತ್ಯ

ಗ್ರಂಥಸಂಪಾದನ ಶಾಸ್ತ್ರ:

ಹಳೆಯ ಕುಮಾರರಾಮನ ಸಾಂಗತ್ಯ:

haleya kumararamana sangatya

ಕುಮಾರರಾಮನನ್ನು ಕುರಿತಂತೆ ಈ ವರೆಗೆ ಕನ್ನಡದಲ್ಲಿ ೫ ಕೃತಿಗಳು ರಚನೆಗೊಂಡಿವೆ. ಇವುಗಳಿಗೆ ಈ ಹಳೆಯ ಕುಮಾರರಾಮನ ಸಾಂಗತ್ಯವೇ ಹೆಚ್ಚೂಕಡಿಮೆ ಮೂಲ ಮಾತೃಕೆಯಂತಿದೆ. ಹೊಸ ಕುಮಾರರಾಮನ ಸಾಂಗತ್ಯ, ಕೊಮಾರರಾಮನ ಚರಿತೆಗಳಂತೂ ಪ್ರಸ್ತುತ ಕೃತಿಗೆ ಹೆಚ್ಚು ನಿಷ್ಠವಾಗಿವೆ, ಋಣಿಯಾಗಿವೆ. ಸಂಪಾದಕರು ಹೇಳುವಂತೆ "ಕುಮಾರರಾಮನ ಜೀವನ ಗತಿಯನ್ನು ಸಾಹಿತ್ಯ ಕೃತಿಯನ್ನಾಗಿಸಿದವನು ಪಾಂಚಾಳ ಗಂಗಯ್ಯ. ಕುಮಾರರಾಮ ಯುದ್ಧದಲ್ಲಿ ಸೋತುದು ಅವನು ಬಲಹೀನನಾಗಿರುವುದಕ್ಕಲ್ಲ, ಅದಕ್ಕೆ ಪ್ರಮುಖ ಕಾರಣ ಅವನ ಸೈನ್ಯದಲ್ಲಿದ್ದ ಬಹುಸಂಖ್ಯೆಯ ತೆಲುಗರ ಸಮಯ ಸಾಧಕ ತಂತ್ರ. ಇವರು ಯುದ್ಧದ ಕೊನೆಯ ಸುತ್ತಿನಲ್ಲಿ ಮುಸಲ್ಮಾನ ಸೈನ್ಯದೊಂದಿಗೆ ನಡೆಸಿದ ಒಳಸಂಚು ಕಾರಣವಾಗಿ ಕನ್ನಡಿಗರು ಕುಮಾರರಾಮನನ್ನು ಕಳೆದುಕೊಂಡು ಸೋಲುವಂತಾಯಿತು. ಇದನ್ನು ಗಮನಿಸಿದರೆ 'ಯುದ್ಧ'ವು ಹಿಂದೂ, ಮುಸಲ್ಮಾನರ ನಡುವಿನ ಯುದ್ಧದಂತೆ ತೋರಿದರೂ ನಿಜದಲ್ಲಿ ಗಡಿಪ್ರದೇಶದ ಕನ್ನಡಿಗ-ತೆಲುಗರ ಯುದ್ಧವಾಗಿದೆ ಎನ್ನುತ್ತಾರೆ. ಇದು ಕುಮಾರರಾಮನ ಎರಡುಸಲದ ಯುದ್ಧದ ಗೆಲುವು, ಮೂರನೆಯ ಸಲದ ಯುದ್ಧದ ಸೋಲು ನಿರ್ದೇಶಿಸುವಂತಿದೆ. ೧೦ ಸಂಧಿಗಳಲ್ಲಿ ಈ ಕಾವ್ಯದ ಪಠ್ಯ ನಿರೂಪಿತವಾಗಿದೆ. (ಪ್ರ. ಸಪ್ನ ಬುಕ್ ಹೌಸ, ಬೆಂಗಳೂರು-೨೦೦೮).

ಚನ್ನಬಸವಣ್ಣನವರ ಷಟ್ ಸ್ಥಲ ವಚನ ಮಹಾಸಂಪುಟ:

shtstala maha samputa

 

 

 

 

 

 

ತೋಂಟದ ಸಿದ್ದೇಶ್ವರ ಭಾವರತ್ನಾಭರಣಸ್ತೋತ್ರ :

bhavaratnabharana sutra