ಶೈಕ್ಷಣಿಕ ಕ್ಷೇತ್ರ

ಶೈಕ್ಷಣಿಕ ಕ್ಷೇತ್ರ

ನನ್ ನಮಸ್ಕಾರ ನಿಮಗ

*
ಹೊಂಟೀನಿ ಇಂದ ಹೊರಗ ನನ್ ನಮಸ್ಕಾರ ನಿಮಗ

ಸುಡು ನೀರ ಕಡಲ ಒಡಲಾಗ ಈಸಿದ ಮೀನ
ಇಲ್ಲಿ ಬದುಕಿತ್ತ ಇಲ್ಲಿ ಬದುಕಿತ್ತ ಇಲ್ಲಿ ಬದುಕಿತ್ತ ತೀರ್ಥದೊಳಗ
ನಿಮ್ ನೆದರ ನೆರಳ ಕೆಳಗ ನಿಮ್ ನೆದರ ನೆರಳ ಕೆಳಗ ಪಡೆದಿತ್ತ ದೊಡ್ಡ ಬಳಗ 

ನಿಮ್ ಚಂದ್ರದೃಷ್ಟಿಯ ಸೆಳೆತದಿಂದ ಉಕ್ಕುತ್ತ ಜಲಧಿ
ಉಕ್ಕುತ್ತ ಜಲಧಿ ಉಕ್ಕುತ್ತ ಜಲಧಿ ಉಕ್ಕುತ್ತ ಬಂತ ಇತ್ತ
ಕೊಟ್ಟಿತ್ತ ಅಡಿಗೆ ಮುತ್ತ ಕೊಟ್ಟಿತ್ತ ಅಡಿಗೆ ಮುತ್ತ ಆ ಸುಖಾ ಅದಕ ಗೊತ್ತ

ನಿಮ್ ಚರಣದಲ್ಲಿ ನಮ್ ಹರಣಗಂಧ ತೇದೀವಿ ಗಂಧ 
ತೇದೀವಿ ಗಂಧ ತೇದೀವಿ ಗಂಧ ತೇದೀವಿ ಇರಲಿ ಕರುಣ
ಮರಿಬ್ಯಾಡ್ರಿ ನಿಮ್ಮ ಮಗನ ಮರಿಬ್ಯಾಡ್ರಿ ನಿಮ್ಮ ಮಗನ
ಇದೋ ತಾಯಿ ನಿಮಗ ಶರಣ 

ಬ್ಯಾಸಗಿಯ ಹಳ್ಳ ಹಳಿನೆನಪ ನೆನೆದು
ನಡದ್ಹಾಂಗ ಮುಂದ ನಡದ್ಹಾಂಗ ಮುಂದ ನಡದ್ಹಾಂಗ ಮುಂದ 
ನಾ ನಡದೆ ನುಂಗಿ ತಾಪ ಬರೆದಿಡಾ ನನ್ನ ರೂಪ ಬರೆದಿಡಾ ನನ್ನ ರೂಪ
ಹಚ್ಚಿಡಾ ನೆನಪ ದೀಪ 

ಮಾಬಳೇಶ್ವರದ ಗಿರಿಯ ಶಿಖರದ ಲಿಂಗ
ಸ್ಥಾವರ ಲಿಂಗ ಸ್ಥಾವರ ಲಿಂಗ ಸ್ಥಾವರ ಲಿಂಗ ದೀರ್ಘದಂಡ ಇದೋ ನಿನಗ
ದೀರ್ಘದಂಡ ಇದೋ ನಿನಗ ದೀರ್ಘದಂಡ ಉದ್ದಂಡ ದೀರ್ಘದಂಡ.|

                                                                             kalburgi_sign