ಕನಾ೯ಟಕ ಕಾಲೇಜು

ಶೈಕ್ಷಣಿಕ ಕ್ಷೇತ್ರ:

ಕನಾ೯ಟಕ ಕಾಲೇಜು:

kcdಉತ್ತರ ಕನಾ೯ಟಕದ ಉನ್ನತ ಪರಂಪರೆಯ ಮಹಾವಿದ್ಯಾಲಯವಿದು. ವಿ.ಕೆ.ಗೋಕಾಕ, ಮೆನೆಝಿಸ್, ಮಾಳವಾಡ ಮೊದಲಾದ ಪ್ರಸಿದ್ಧರು ಪ್ರಿನ್ಸಿಪಾಲರಾಗಿದ್ದ ಈ ವಿದ್ಯಾಸಂಸ್ಥೆಯಲ್ಲಿ ಅಧ್ಯಾಪಕನಾಗಿ ವೃತ್ತಿ ಆರಂಭಿಸಿದರು (೧೯೬೨), ಇವರು ವಿಸ್ತಾರವಾಗಿ ಬೆಳೆಯಲು ಅವಕಾಶವಾಯಿತು .  ಇಲ್ಲಿ ಇವರ ಸಮಗ್ರ ಶಕ್ತಿ ಮತ್ತು ಆಸಕ್ತಿಗಳು, ಅದ್ಯಯನ, ಅಧ್ಯಾಪನ ವಿಷಯಗಳು ಪೋಷಿಸಲ್ಪಟ್ಟವು. ವಗ೯ ಕೋಣೆಯ ಬೋಧನ- ಗ್ರಂಥಾಲಯ ವಾಚನಗಳು ಇವರ ಇಲ್ಲಿಯ ಹವ್ಯಾಸಗಳಾಗಿದ್ದವು. ಇಲ್ಲಿ ಇವರ ಅದ್ಯಾಪನ ಕಲೆಗೆ ಸರಿಯಾದ ಚೌಕಟ್ಟು ಪ್ರಾಪ್ತವಾಯಿತು. "ಗ್ರಂಥಾಲಯದಲ್ಲಿ ಕಲಬುಗಿ೯ಯವರು ಒಂದೊಂದು ಪುಸ್ತಕ ಓದುವದಿಲ್ಲ ಒಂದೊಂದು ಪುಸ್ತಕ ಕಪಾಟು ಓದುತ್ತಾರೆ" ಎಂದು ಇವರು ವಿದ್ಯಾಥಿ೯ಗಳು ಮಾತನಾಡುವ ರೀತಿಯಲ್ಲಿ ಈ ಬೃಹತ್ ಪುಸ್ತಕ ಭಾಂಡಾರವನ್ನು ಬಳಸಿಕೊಂಡರು. ಈ ವ್ಯಾಪಕ ಅಧ್ಯಯನ ಭವಿಷ್ಯದ ಇವರ ಬೆಳವಣಿಗೆಗೆ ಮೂಲಧನವಾಗಿ ಪರಿಣಮಿಸಿತು. ಈ ಹಂತದಲ್ಲಿಯೇ ಇವರು ಬರಣಿಗೆ ಮತ್ತು ಸಾಹಿತ್ಯಿಕ ಸಂವಾದಗಳಲ್ಲಿ ತೊಡಗಿಸಿಕೊಳ್ಳಲಾರಂಭಿಸಿದರು. 

"೧೯೬೨ ರಿಂದ ೧೯೬೬ರ ವರೆಗಿನ ಕರ್ನಾಟಕ ಕಾಲೇಜಿನ ಅಧ್ಯಾಪಕ ವೃತ್ತಿ, ನನ್ನ ಜೀವಮಾನದ ಸಾಧನೆಯ ಅಡಿಗಲ್ಲು, ಆ ಅವಧಿಯಲ್ಲಿ ನಾನು ರೂಢಿಸಿಕೊಂಡ ಬೋಧನವಿಧಾನ, ಬಳಸಿಕೊಂಡ ಸಮೃದ್ಧ ಗ್ರಂಥಾಲಯ ಭವಿಷ್ಯದಲ್ಲಿ ನನ್ನ ಬಾಳಿನ ಬುತ್ತಿಯಾದವು. ಇಂದಿಗೂ ಆ ಕೆಂಪು ಇಟ್ಟಿಗೆಯ ಭವ್ಯಕಟ್ಟಡ ಕಂಡಾಗಲೆಲ್ಲ ಕೈಮುಗಿಯುವಷ್ಟು  ಕರಗಿಹೋಗುತ್ತೆನೆ. ಮುಗ್ದ ವಿದ್ಯಾರ್ಥಿಗಳು ನನ್ನನ್ನು ಪ್ರೀತಿಸುತಿದ್ದ ರೀತಿಗೆ ಈಗಲೂ ಧನ್ಯತೆಯನ್ನು ಅನುಭವಿಸುತ್ತೇನೆ."