ಸಾಂಸ್ಥಿಕ ಪ್ರಜ್ಞೆ

ಸಾಂಸ್ಥಿಕ ಪ್ರಜ್ಞೆ:

ಡಾ. ಎಂ. ಎಂ. ಕಲಬುರ್ಗಿಯವರು ಅನೇಕ ಸಂಘ - ಸಂಸ್ಥೆಗಳಿಗೆ ಸಾಹಿತ್ಯಿಕವಾಗಿ, ಸಾಮಾಜಿಕವಾಗಿ ಮಾರ್ಗದರ್ಶನ ನೀಡುತ್ತ ಭಾಷಣ - ಬರಹಗಳ ಮೂಲಕ ಅಸತ್ಯ, ಅನ್ಯಾಯ, ಮೂಢಾಚಾರಗಳನ್ನು ಖಂಡಿಸುತ್ತ, ಶರಣರು ಕಂಡ ಸಮಾನತೆಯ - ಸದಾಚಾರದ ಸ್ವಸ್ಥಸಮಾಜ ನಿರ್ಮಾಣವಾಗಬೇಕೆಂದು ಸಾಮಾಜಿಕರಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯದಲ್ಲಿ ತೊಡಗಿದ್ದರು.

ಅವರ ಮಾರ್ಗದರ್ಶನದಲ್ಲಿ ಅಸ್ತಿತ್ವಕ್ಕೆ ಬಂದಿರುವ ಮತ್ತು ಸಾಹಿತ್ಯ ಪ್ರಕಟಣ ಮಣಿಹಕ್ಕೆ ತೊಡಗಿದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸಂಸ್ಥೆಗಳು -

 •   "ವೀರಶೈವ (ಲಿಂಗಾಯತ) ಅಧ್ಯಯನ ಸಂಸ್ಥೆ", ತೋಂಟದಾರ್ಯ ಮಠ, ಗದಗ.
 •  " ಪ್ರಭುದೇವರ ಜನಕಲ್ಯಾಣ ಸಂಸ್ಥೆ ", ಶ್ರೀ ಪ್ರಭುದೇವರ ಸಂಸ್ಥಾನಮಠ, ಸೊಂಡೂರು.
 •  " ವೀರಶೈವ (ಲಿಂಗಾಯತ) ಅಧ್ಯಯನ ಅಕಾಡೆಮಿ" , ನಾಗನೂರು ರುದ್ರಾಕ್ಷಿಮಠ, ಬೆಳಗಾವಿ.
 •  " ಮಲೆನಾಡು ವೀರಶೈವ ಅಧ್ಯಯನ ಸಂಸ್ಥೆ ", ಆನಂದಪುರ ಮಠ, ಶಿವಮೊಗ್ಗ.
 •  " ಶರಣ ಸಂಸ್ಕೃತಿ ಅಕಾಡೆಮಿ",  ಶಿವಲಿಂಗೇಶ್ವರ ಮಠ, ನಿಡಸೋಸಿ.
 •  " ಬಸವೇಶ್ವರ ಅಧ್ಯಯನ ಸಂಸ್ಥೆ", ಕೊಡೆಕಲ್ಲ.
 •  " ಸಮಗ್ರ ಸ್ವರ ವಚನ ಸಾಹಿತ್ಯ" ಪ್ರಕಟಣಮಾಲೆ,  ಸುತ್ತೂರು ಮಠ, ಮೈಸೂರು.
 •  " ಪೂಜ್ಯ ಶ್ರೀ ಚನ್ನವೀರಸ್ವಾಮೀಜಿ ಪ್ರತಿಷ್ಠಾನ" ಸಾರಂಗಮಠ, ಸಿಂದಗಿ.
 •  " ಗದಗ ವೀರಶೈವ ಅಧ್ಯಯನ ವೇದಿಕೆ", ಜಂಬಗಿಮಠ.
 •  ಬೀದರಿನ ಬಾಲ್ಕಿ ಮಠ
 •  ಚಿತ್ರದುರ್ಗದ ಮುರಘಾಮಠ
 •  ಬೆಳಗಾವಿಯ ಕೆ ಎಲ್ ಇ ಸಂಸ್ಥೆ
 •  ವಿಜಯಪುರದ ಬಿ ಎಲ್ ಡಿ ಇ ಸಂಸ್ಥೆ
 •  ಧಾರವಾಡದ ದ ರಾ ಬೇಂದ್ರೆ ಟ್ರಸ್ಟ್
 •  ಬೆಳಗಾವಿಯ ಬಸವರಾಜ ಕಟ್ಟೀಮನಿ ಟ್ರಸ್ಟ್
 •  ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ

ಇನ್ನೂ ಅನೇಕ ಮಠ ಮಾನ್ಯಗಳು, ಸಂಘ ಸಂಸ್ಥೆಗಳು ಇವರ ಮಾರ್ಗದರ್ಶನಕ್ಕಾಗಿ ಹಾತೊರೆಯುತ್ತಿದ್ದವು.
ಯಾವ ಯೋಜನೆ ಯಾರಿಂದ ಸಾಧ್ಯ ? ಅದಕ್ಕೆ ಹಣಕಾಸಿನ ಮೂಲಗಳನ್ನು ಹೇಗೆ ಹುಡುಕಬೇಕು ? ಅದನ್ನು ಅರ್ಥಪೂರ್ಣವಾಗಿ ಮುಗಿಸಲು ಎಂಥವರ ಸಹಭಾಗಿತ್ವ ಸರಿ ? ಎಂದು ಯೋಚಿಸಿ, ತೂಗಿ ಅಳೆದು ನೋಡಿ ಆಯ್ಕೆ ಮಾಡಿ ಕೊಡುವುದರಲ್ಲಿ ಕಲಬುರ್ಗಿಯವರು ನಿಷ್ಣಾತರಿದ್ದರು.