ಸಂಪಾದಿತ ಅಭಿನಂದನ ಗ್ರಂಥಗಳು

ಸಂಪಾದಿತ ಅಭಿನಂದನ ಗ್ರಂಥಗಳು: 

ಬೆಳ್ವೂಲ:

belvalaಇದು ಡಾ. ಆರ್.ಸಿ.ಹಿರೇಮಠ ಅವರ ಬದುಕು-ಬರಹ-ವಿದ್ವತ್ತನ್ನು ಗೌರವವಿಸುವ ದೃಷ್ಟಿಯಿಂದ ಡಾ.ಎಂ.ಎಂ.ಕಲಬುರ್ಗಿ ಮತ್ತು ಡಾ. ಎಂ.ಎಸ್. ಸುಂಕಾಪುರ ಅವರು ಕೂಡಿ ಸಂಪಾದಿಸಿದ ಅಭಿನಂದನ ಗ್ರಂಥ. ೧೯೭೭ ಆರ್.ಸಿ. ಅವರಿಗೆ ೬೦ ತುಂಬಿದ ಸಂದರ್ಭ ಇದು ಅರ್ಥಪೂರ್ಣವಾಗುವಂತೆ 'ತೆನೆ' ಹೆಸರಿನ ಅಡಿಯಲ್ಲಿ ನಾಲ್ಕು ವಿಭಾಗಗಳನ್ನು ಸೃಷ್ಟಿಸಿಕೊಂಡು ಕ್ರಮವಾಗಿ ಅವರ ಬದುಕು-ಬರಹ, ಸಾಹಿತ್ಯ-ಧರ್ಮ, ಶಾಸ್ತ್ರ-ವಿಚಾರ, ಇತಿಹಾಸ-ಜಾನಪದ ಕುರಿತು ಲೇಖನಗಳನ್ನು ಬರೆಯಿಸಲಾಗಿದೆ. ಹಿರಿಯ ತಲೆಮಾರಿನ ಲೇಖಕರು ಬರೆದ ಬರಹಗಳ ಚಿಂತನಾಕ್ರಮವನ್ನು ಇಲ್ಲಿ ನೋಡಬಹುದು. (ಪ್ರ. ಡಾ. ಆರ್.ಸಿ.ಹಿರೇಮಠ ಸನ್ಮಾನ ಸಮಿತಿ, ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ , ಧಾರವಾಡ-೧೯೮೧).

 

 

ಸಾರಂಗಶ್ರೀ :

sarangashriಸಿಂದಗಿ ಸಾರಂಗ ಮಠದ ಶ್ರೀ ಚನ್ನವೀರಮಹಾಸ್ವಾಮಿಗಳ ಜನ್ಮಶತಮಾನೋತ್ಸವ ಸ್ಮರಣ ಸಂಪುಟ ಇದಾಗಿದ್ದು, ಡಾ.ಎಂ.ಎಂ.ಕಲಬುರ್ಗಿಯವರು ಇದನ್ನು  ಸಂಪಾದಿಸಿದ್ದಾರೆ. ಇಪ್ಪತೈದು ವಿದ್ವಾಂಸರಿಂದ ೨೫ ವೀರಶೈವ ಅರಸು ಮನೆತನಗಳ ಇತಿಹಾಸವನ್ನು ಬರೆಯಿಸಿ ಇದೊಂದು ಅತ್ಯಂತ ಉಪಯುಕ್ತ 'ಸಂಪುಟ'ವಾಗುವಂತೆ ಅವರು ಶ್ರಮಿಸಿದ್ದಾರೆ.  'ಪ್ರಸ್ತಾವನೆ'ಯಲ್ಲಿ ಸಾರಂಗಮಠ ಪರಂಪರೆ ಮತ್ತು ಇತಿಹಾಸದ ಮೇಲೆ ಬೆಳಕು ಬೀರುವ ಅನೇಕ ಸಂಗತಿಗಳನ್ನು ವಿವರಿಸಿದ್ದಾರೆ. ಆರಂಭದ ಗುರುವಂದನದಲ್ಲಿಯ 'ಸಾರಂಗಮಠಾಧೀಶ್ವರರು'(ಫ.ಗು.ಹಳಕಟ್ಟಿ), 'ಶ್ರೀ ಚೆನ್ನವೀರಮಹಾಸ್ವಾಮಿಗಳು'(ಬಿ.ಎಂ.ಪಾಟೀಲ) ಈ ಎರೆಡು ಲೇಖನಗಳನ್ನು ಬಿಟ್ಟರೆ ಇನ್ನುಳಿದವುಗಳು ವೀರಶೈವ ಅರಸು ಮನೆತನಗಳ ಇತಿಹಾಸವನ್ನು ತೆರೆದಿಟ್ಟಿವೆ. (ಪ್ರ. ಪೂಜ್ಯ ಶ್ರೀ ಚನ್ನವೀರ ಸ್ವಾಮೀಜೀ ಪ್ರತಿಷ್ಟಾನ ಸಾಂರಂಗಮಠ, ಸಿಂದಗಿ-೧೯೯೬).

 


ವಜ್ರಕುಸುಮ:

vajra kusumaಸಾಸನೂರು ಕುಟುಂಬದ ಕೀರ್ತಿಧ್ವಜವು ರಾಜ್ಯಮಟ್ಟದಲ್ಲಿ ರಾರಾಜಿಸುವಂತೆ ಮಾಡಿದ ಮಹನೀಯರಲ್ಲೊಬ್ಬರಾದ ಬಿ.ಟಿ.ಸಾಸನೂರ ಅವರ ಘನ ವ್ಯಕ್ತಿತ್ವವನ್ನು ಅಭಿನಂದಿಸಲು ಡಾ. ಎಂ.ಎಂ. ಕಲಬುರ್ಗಿಯವರು ಸಂಪಾದಿಸಿದ ಗ್ರಂಥವಿದು. ಇದನ್ನು ಕುರಿತು ಅವರು, 'ನಿಮ್ಮ ನೆನೆದಾಗಲೇ ಉದಯ' ಎನ್ನುವ ಪ್ರಾಸ್ತಾವಿಕ ಮಾತುಗಳಲ್ಲಿ ಹೀಗೆ ಹೇಳಿದ್ದಾರೆ; "ವಜ್ರಕುಸುಮ ಈ ಗೌರವ ಗ್ರಂಥದ ಹೆಸರು. ಇದಕ್ಕೆ ಪ್ರೊ.ಬಿ.ಟಿ.ಸಾಸನೂರ ಅವರು ವಜ್ರದಷ್ಟು ಕಠಿಣ, ಕುಸುಮದಷ್ಟು ಕೋಮಲ. ಈ ಗ್ರಂಥ ಎರೆಡು ಭಾಗಗಳನ್ನು ಒಳಗೊಂಡಿದೆ: ಸಾಸನೂರದರ್ಶನ, ಶಾಸ್ತ್ರದರ್ಶನ. ಶಾಸ್ತ್ರದರ್ಶನದಲ್ಲಿ ಮತ್ತೆ ಎರೆಡು ಭಾಗಗಳಿವೆಃ ಪ್ರಾಚಿನ ಶಾಸ್ತ್ರದರ್ಶನ, ಆಧುನಿಕ ಶಾಸ್ತ್ರದರ್ಶನ. ಈ ವಿಭಾಗಗಳ ಉದ್ದೇಶ, ಸಾಸನೂರಾವರನ್ನು ಅವರು ಪ್ರೀತಿಸುತಿದ್ದ ಸಾಹಿತ್ಯ ಸಂಬಧಿ ಶಾಸ್ತ್ರಗಳನ್ನು ಅರ್ಥಮಾಡಿಕೊಳ್ಳುವುದಾಗಿದೆ.....ಸಾಸನೂರ ದರ್ಶನ' ಬಿ.ಟಿಯವರ ಸಮಗ್ರ ಬದುಕನ್ನು ಕುರಿತ ಸುದೀರ್ಘ ಲೇಖನದಿಂದ ಆರಂಭವಾಗುತ್ತದೆ. ಆಮೇಲೆ ಅವರ ಒಡನಾಟದಲ್ಲಿ ಸಂಬಧಿಸಿದ ಘಟನೆಗಳ ಚಿತ್ರಗಳನ್ನು ಒಳಗೊಂಡ ೫೦ ಜನ ಆತ್ಮೀಯರು ಬಿಡಿಸಿದ ಲೇಖನಗಳಿವೆ. ಎರಡನೆಯ ಭಾಗದಲ್ಲಿ ಬಿ.ಟಿ.ಯವರಿಗೆ ಪ್ರೀಯವಾದ 'ಸಾಹಿತ್ಯಶಾಸ್ತ್ರ' ಪರಿವಾರದ ಪ್ರಬಂಧಗಳಿವೆ. ಅಭ್ಯಾಸಿಗಳಿಗೆ ಒಂದು ಆಕರ ಗ್ರಂಥ ರೂಪಗೊಳ್ಳಬೇಕೆಂಬ ಆಸೆಯನ್ನು ಈಡೇರಿಸಿದ ಸಮಾಧಾನ ನಮ್ಮದಾಗಿದೆ". ಈ ಮಾತುಗಳನ್ನು ಈ ಸಂಪುಟ ಸಾಕ್ಷೀಕರಿಸುತ್ತದೆ. (ಪ್ರ. ಬಿ.ಟಿ.ಸಾಸನೂರ ಅಭಿನಂದನ ಸಮಿತಿ, ವಿಜಾಪೂರ-೨೦೦೩).

ಲಿಂಗಾಯತ [ಉಪಪಂಗಡಗಳ ದಾಖಲೀಕರಣ]:
lingayataಈ ಗ್ರಂಥದ ಪ್ರಧಾನ ಸಂಪಾದಕರು  ಡಾ ಎಂ.ಎಂ.ಕಲಬುರ್ಗಿಯವರು.  ಮಹೇಶ ತಿಪ್ಪಶೆಟ್ಟಿ ಹಾಗೂ ಶಂಭು ಬಳಿಗಾರ ಸಂಪಾದಕರು. 'ಸಮಾಜವೆ ದೇವರು'ಎನ್ನುವ ಪ್ರಸ್ತಾವನೆ ರೂಪದ ಬರಹದಲ್ಲಿ ಡಾ. ಕಲಬುರ್ಗಿಯವರು "ಸಮಾಜದ ಉಪಪಂಗಡಗಳ ದಾಖಲೀಕರಣವೆಂಬ ಹೊಸ ಉಪಕ್ರಮ ನಮ್ಮಲ್ಲಿ ಬ್ರೀಟಿಷ ವಿದ್ವಾಂಸರಿಂದ ಮತ್ತು ಅವರ ಸರಕಾರದಿಂದ ಆರಂಭವಾಯಿತು. ಈ ಪರಂಪರೆಯಲ್ಲಿ ಬುಕ್ನನ್ ಅಂಥವರ ಪ್ರವಾಸಿ ದಿನಚರಿಗಳೂ, ಎಂಥೊವನ್ ಅಂಥವರ ಕೋಶಗಳೂ, ವೆಂಕಟರಂಗೋ ಕಟ್ಟಿಯಂಥವರ ಗೆಜೆಟಿಯರುಗಳೂ ಹುಟ್ಟಿಕೊಂಡಿದ್ದು, ಅವುಗಳಲ್ಲಿ ಆನುಷಂಗಿಕವಾಗಿ ಲಿಂಗಾಯತ ಸಮಾಜದ ದಾಖಲೀಕರಣಕ್ಕೆ ಎಡೆ ಲಭಿಸಿದೆ. ಆದರೆ ಈ ಸಮಾಜವನ್ನು ಕುರಿತು ಸ್ವತಂತ್ರ ಗ್ರಂಥ ಈ ವರೆಗೆ ಬೆಳಕು ಕಂಡಿರಲಿಲ್ಲ. ಈ ಕೊರತೆಯನ್ನು ಪ್ರಸ್ತುತ ಕೃತಿ ತುಂಬಿಕೊಡಲು ಯತ್ನಿಸಿದೆ" ಎಂದು ಹೇಳಿರುವುದು ಇಂದಿನ ಸನ್ನಿವೇಶದಲ್ಲಿ ಲಿಂಗಾಯತ ಸಮಾಜದ ಉಪ ಪಂಗಡಗಳ ಗಟ್ಟಿ ಆಧಾರಗಳನ್ನೊಳಗೊಂಡ ದಾಖಲೀಕರಣದ ಅವಶ್ಯಕತೆ ಎಷ್ಟಿದೆ ಎಂಬುದರ ದಿಕ್ಸೂಚಿಯಾಗಿದೆ. ಅಲ್ಲದೆ ಇಲ್ಲಿಯೇ ಅವರು "ಲಿಂಗಾಯತ ಒಳಪಂಗಡಗಳ ನಿರ್ದಿಷ್ಟ ಸಂಖ್ಯೆಯನ್ನು ನಿರ್ಣ್ಯಿಸುವುದು ಕಷ್ಟಸಾಧ್ಯ.... ಉಪಪಂಗಡಗಳ ಬಗ್ಗೆ ಬರೆಯುವುದು ತುಂಬಾ ಸೂಕ್ಷ್ಮವಿಷಯ ಇದನ್ನು ಅರ್ಥಮಾಡಿಕೊಂಡು, ಸಾಮಾನ್ಯವಾಗಿ ಆಯಾ ಉಪಪಂಗಡದ ವಿದ್ವಾಂಸರಿಂದಲೇ ಈ ಲೇಖನಗಳನ್ನು ಬರೆಯಿಸಿದ್ದಾರೆ...." ಎಂದು ಸ್ಪಷ್ಟಪಡಿಸಿದ್ದಾರೆ. ಸುಮಾರು ೨೫ ಉಪಪಂಗಡಗಳ ಚರಿತ್ರೆ ಮತ್ತು ಲಿಂಗಾಯತದೊಂದಿಗೆ ಅವು ತಮ್ಮನ್ನು ಗುರುತಿಸಿಕೊಂಡಿರುವ ಬಗೆಯನ್ನು ಇಲ್ಲಿ ೧. ಹೊರಸುತ್ತಿನ ಲಿಂಗಾಯತರು ೨. ಇನ್ನೂ ಹೊರಸುತ್ತಿನ ಲಿಂಗಾಯತರು ೩. ಒಳಸುತ್ತಿನ ಲಿಂಗಾಯತರು ೪. ಇನ್ನೂ ಒಳಸುತ್ತಿನ ಲಿಂಗಾಯತರು ಎಂಬ ವಿಂಗಡಿತ ಉಪಶೀರ್ಷಿಕೆಗಳ ಕ್ರಮದಲ್ಲಿ ಕಟ್ಟಿಕೊಡುವ ಪ್ರಥಮ ಪ್ರಯತ್ನವನ್ನು ಇಲ್ಲಿ ನೋಡಬಹುದಾಗಿದೆ. ಈ ಕೃತಿ ಪೂಜ್ಯ ಶ್ರೀ ಮ.ನಿ.ಪ್ರ. ಮಹಾಂತ ಸ್ವಾಮಿಗಳು ಚಿತ್ತರಗಿ ಸಂಸ್ಥಾನಮಠ -ಇಲಕಲ್ ಅವರ ವಜ್ರಮಹೋತ್ಸ್ವದ ಅಭಿನಂದನ ಸಂಪುಟವಾಗಿರುವುದರಿಂದ ಆರಂಭದಲ್ಲಿ ಶ್ರೀಗಳ ಬದುಕು-ಬರಹ-ಸಾಧನೆಗಳನ್ನು ಪರಿಚಯಿಸುವ ೬೬ ಪುಟಗಳ ವಿಸ್ತಾರವಾದ ಲೇಖನವಿದೆ. (ಪ್ರ. ಚಿತ್ತರಗಿ ಶ್ರೀ ವಿಜಯ ಮಹಾಂತೇಶ ಎಜುಕೇಶನ್ ಸೊಸಾಯಿಟಿ, ಇಲಕಲ -೨೦೦೯).

ಶರಣಶ್ರೀ
ಕರ್ನಾಟಕದ ಪ್ರತಿಷ್ಟಿತ ಮತ್ತು ಪ್ರಾಚೀನ ಮಠಗಳಲ್ಲಿ ಚಿತ್ರದುರ್ಗದ ಶ್ರೀ ಮುರುಘಾಮಠವೂ  ಒಂದು. ಈ ಶ್ರೀ ಮಠದ ಪೀಠಾದಿಪತಿ ಡಾ. ಶಿವಮೂರ್ತಿ ಶಿವಶರಣರ ಶೂನ್ಯ ಪೀಠಾರೋಹಣ ಬೆಳ್ಳಿಹಬ್ಬ ಸಂಧರ್ಬದ ಸಂಭಾವನಾ ಗ್ರಂಥವಿದು. ಈsharanashri ಗ್ರಂಥದ ಪ್ರಧಾನ ಸಂಪಾದಕರು ಡಾ.ಎಂ.ಎಂ.ಕಲಬುರ್ಗಿಯವರು. ಇವರ ಸಲಹೆ -ನಿರ್ದೇಶನದಂತೆ ಈ ಬೃಹದ್ಗ್ರ್ಂಥ ರೂಪಗೊಂಡಿದೆ. ಸಂಪಾದಕ ಡಾ. ಟಿ.ಆರ್. ಚಂದ್ರಶೇಖರ ಅವರು "ಶರಣಶ್ರೀ ಕೇವಲ ಒಂದು ಸಂಪಾದನ ಕೃತಿಯಲ್ಲ, ಇದು ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದ ಚಾರಿತ್ರಿಕ ಕೋಶ". ಈ ಕೃತಿಯು ೧. ಸ್ವಾತ್ಂತ್ರ್ಯಪೂರ್ವದಲ್ಲಿ ವಿದೇಶಿ ವಿದ್ವಾಂಸರು, ಅಧಿಕಾರಿಗಳು ಮತ್ತು ಪಾದ್ರಿಗಳು ಕಂಡಂತೆ ಲಿಂಗಾಯತ ೨. ಕರ್ನಾಟಕ ಸ್ವಾತಂತ್ರ್ಯಪೂರ್ವ ಜಿಲ್ಲಾ ಗೆಜೆಟಿಯರುಗಳಲ್ಲಿ ಲಿಂಗಾಯತ ೩. ಸಮಾಜ ವಿಜ್ಞಾನಿಗಳ ದೃಷ್ಟಿಯಲ್ಲಿ ಲಿಂಗಾಯತರು ೪. ಇತಿಹಾಸ ೫. ಅಭಿನಂದನೆ-ಅಭಿವಂದನೆ ಎಂಬ ಐದು ಭಾಗಗಳನ್ನು ಒಳಗೊಂಡಿದೆ. ಸ್ವಾತಂತ್ರಪೂರ್ವದ ಬ್ರಿಟೀಷ್ ಅಧಿಕಾರಿಗಳು, ವಿದ್ವಾಂಸರು, ಧಾರ್ಮಿಕ ಪ್ರತಿನಿಧಿಗಳು, ಪ್ರವಾಸಿಗರು ಅಂದಿನ ಕರ್ನಾಟಕದಲ್ಲಿ ಕೈಗೊಂಡ ಕ್ಷೇತ್ರಕಾರ್ಯ- ಚರ್ಚೆ-ಅಧ್ಯಯನ-ಜಾತಿ-ಬುಡಕಟ್ಟು ಜನಾಂಗಗಳೀಂದ ಪಡೆದ ಮಾಹಿತಿಗಳಿಂದ ಸಿದ್ಧಪಡಿಸಿದ ಗೆಜೆಟಿಯರ್, ವರದಿ, ದಾಖಲೆಗಳು ಲಿಂಗಾಯತಧರ್ಮ- ಸಮಾಜ- ಇತಿಹಾಸ-ಪರಂಪರೆ-ಸಂಸ್ಕೃತಿ ಕುರಿತ ವಿಷಯ-ವಿವರಗಳನ್ನು ಒಳಗೊಂಡಿರುವ ಅಪರೂಪದ ಗ್ರಂಥ ಇದಾಗಿದೆ" ಎಂದಿದ್ದಾರೆ. (ಪ್ರ. ಶುನ್ಯ ಪೀಠಾರೋಹಣ ಬೆಳ್ಳಿಹಬ್ಬ ಆಚರಣೆ ಸಮಿತಿ, ಶ್ರೀ ಮುರುಘಾಮಠ, ಚಿತ್ರದುರ್ಗ- ೨೦೧೫).

ಕಲ್ಯಾಣದೀಪ್ತಿ:

kalyanadiptiಇದು, ಬಾಲ್ಕಿ ಹಿರೇಮಠ ಸಂಸ್ಠಾನದ ಡಾ. ಬಸವಲಿಂಗ ಪಟ್ಟದ್ದೇವರ ಅಭಿನಂದನ ಗ್ರಂಥ. ಇದನ್ನು ಡಾ. ಎಂ.ಎಂ.ಕಲಬುರ್ಗ ಅವರ ಪ್ರಧಾನ ಸಂಪಾದಕತ್ವ ಮತ್ತು ಮಾರ್ಗದರ್ಶನದಲ್ಲಿ ಡಾ. ಗುರುಲಿಂಗಪ್ಪಾ ಧಬಾಲೆ ಅವರು ಸಂಪಾದಿಸಿದ್ದಾರೆ. ಈ ಗ್ರಂಥ ಕುರಿತು ಡಾ. ಕಲಬುರ್ಗಿಯವರು "ಉಪೇಕ್ಷಿತ ಜ್ಞಾನಕ್ಷೇತ್ರವನ್ನು ಬೆಳಕಿಗೆ ತರಬೇಕೆಂಬ ಉದ್ದೇಶದಿಂದ ....ಆರಂಭದಲ್ಲಿ ಶ್ರೀ ಮಠದ-ಶ್ರೀಗಳ ಸಾಧನೆ ಅಂತ್ಯದಲ್ಲಿ ಈ ಸಾಧನೆಗಳ ಸಮಗ್ರವಿವರ, ಮಧ್ಯದಲ್ಲಿ ಕಲ್ಯಾಣ ಕರ್ನಾಟಕದ ತತ್ವಕಾರರು ವಿಷಯ ಕುರಿತ ಅಭ್ಯಾಸಪೂರ್ಣ ಪ್ರಭಂಧಗಳನ್ನು ಸಂಯೋಜಿಸಲಾಗಿದೆ....ಈ ಸಾಹಿತ್ಯಪ್ರಕಾರದ ಬಿಡಿಯಾದ ಅಧ್ಯಯನ ಈವರೆಗೆ ಜರುಗಿದ್ದರೂ ಒಂದು ಸಮಗ್ರ ಅಧ್ಯಯನದ ಕೊರತೆ...ಉಳಿದುಕೊಂಡಿದ್ದಿತು. ಇದನ್ನು ಪೂರೈಸುವ ಉದ್ದೇಶದಿಂದ ಕಲ್ಯಾಣ ಕರ್ನಾಟಕದ ತತ್ವಪದಕಾರರು ಎಂಬ ವಿಷಯಕ್ಕೆ ಈ ಅಭಿನಂದನ ಗ್ರಂಥದಲ್ಲಿ ಅವಕಾಶ ಕಲ್ಪಿಸಿ ಕೊಡಲಾಗಿದೆ"ಎಂದಿದ್ದಾರೆ. ಅನುಬಂಧ ಸೇರಿದಂತೆ ಮೂರು ಭಾಗಗಳು ಈ ಕೃತಿಯಲ್ಲಿದ್ದು, ಅರವತ್ತು ಜನ ವಿದ್ವಾಂಸರ  ಲೇಖನಗಳನ್ನೊಳಗೊಂಡಿದೆ. (ಪ್ರ. ಪೂಜ್ಜ್ಯ ಶ್ರೀಮದ ಘನಲಿಂಗ ಚಕ್ರವರ್ತಿ ಡಾ. ಬಸವಲಿಂಗ ಪಟ್ಟದ್ದೇವರ ಅಭಿನಂದನ ಗ್ರಂಥ ಸಮೀತಿ, ಹಿರೇಮಠ ಸಂಸ್ಥಾನ, ಬಾಲ್ಕಿ-ಪು-೫೩೩).