ಸಾಮಾನ್ಯವಾಗಿ, ಈವರೆಗೆ ಕನ್ನಡ ವಿದ್ವಾಂಸರು ಪ್ರಸಿದ್ಧ ಮತ್ತು ಜನಪ್ರಿಯ ಕ್ಷೇತ್ರಗಳಲ್ಲಿ ದುಡಿಯುತ್ತ ಬರುವಲ್ಲಿ,ಅಭ್ಯಾಸದ ಅನೇಕ ಕ್ಷೇತ್ರಗಳು ಉಪೇಕ್ಷೆಗೆ ಗುರಿಯಾಗುತ್ತ ಬಂದವು. ಇಂಥ ಕ್ಷೇತ್ರಗಳನ್ನು ಹುಡುಕಿ, ದುಡಿಯುವ ಮೂಲಕಕನ್ನಡದ ಕೆಲವು ಕೊರತೆಗಳನ್ನು ತುಂಬಿಕೊಡಲಾಗಿದೆ.
ಗ್ರಂಥ ಸಂಪಾದನೆಗೆ ಸಂಬಂಧಿಸಿದಂತೆ ಹೆಳುವುದಾದರೆ, ರಸನಿಷ್ಠಕೃತಿಗಳ, ಸಾಹಿತ್ಯಶಾಸ್ತ್ರಕೃತಿಗಳ ಸಂಪಾದನೆ ನಮ್ಮಲ್ಲಿ ವಿಪುಲವಾಗಿ ಬೆಳೆದು, ಇತರ ಕ್ಷೇತ್ರಗಳನ್ನು ಸಾಮಾನ್ಯವಾಗಿ ಕೈಬಿಟ್ಟಿರುವ ಸಂದಭ೯ದಲ್ಲಿ ಇಮ್ಮಡಿ ಚಿಕ್ಕಭೂಪಾಲನ ಸಾಂಗತ್ಯ, ನಿಂಬಸಾಮಂತ ಚರಿತೆ, ಸಿರುಮನ ಚರಿತೆ, ಗೊಲ್ಲ ಸಿರುಮನ ಚರಿತೆ, ಹೊಸ ಕುಮಾರರಾಮನ ಸಾಂಗತ್ಯ, ಕೊಮಾರರಾಮಯ್ಯನ ಚರಿತೆ ಇತ್ಯಾದಿ ರಾಜಕೀಯ ಕ್ಷೇತ್ರದ, ಸಿದ್ಧಮಂಕ ಚರಿತೆ, ತಗರ ಪವಾಡ ಇತ್ಯಾದಿ ಸಾಮಾಜಿಕ ಕ್ಷೇತ್ರದ ಕಾವ್ಯಗಳನ್ನು ಶೋಧಿಸಿ ಪರಿಷ್ಕರಿಸಿ, ಪ್ರಕಟಿಸಲಾಗಿದೆ. ಶರಣರ ಸ್ವರ ವಚನ, ಜೈನರ ಹಾಡು ಮತ್ತು ನೋಂಪಿಯ ಕಥೆಗಳು - ಈ ಉಪೇಕ್ಷಿತ ಪ್ರಕಾರಗಳನ್ನು ವಿಫುಲ ಪ್ರಮಾಣದಲ್ಲಿ ಬೆಳಕಿಗೆ ತರಲು ಪ್ರಯತ್ನಿಸಲಾಗಿದೆ.
ಈ ವರೆಗೆ ವಿದ್ವಾಂಸರು ದಾಖಲು ಸಾಹಿತ್ಯದ ಅಂಗವಾಗಿ ಶಾಸನಗಳನ್ನು ಪ್ರಕಟಿಸುತ್ತ ಬಂದಿದ್ದರು, ಇದಕ್ಕೆ ಪೂರಕವೆಂಬಂತೆ'ಕನಾ೯ಟಕದ ಕೈಫಿಯತಗಳು'ಬೃಹತ ಕೃತಿಯನ್ನು ಸಂಪಾದಿಸಿ ಪ್ರ್ಕಟಿಸಿದ್ದಾರೆ.
ಇತಿಹಾಸದ ಅಬ್ಯಾಸಿಗಳು ಈ ವರೆಗೆ ಪ್ರಸಿದ್ಧ ರಾಜಮನೆತನಗಳ ಅದ್ಯಯನಕ್ಕೆ ಗಮನಕೊಡುತ್ತ ಬಂದಿದ್ದರು. ಇದನ್ನು ಗಮನಿಸಿ, ಪ್ರಸಿದ್ಧ ರಾಜಮನೆತನಗಳವಿಚಾರ ಸಂಕೀಣ೯ ಕೈಗೊಂಡು, ಕೆಳದಿ ಸಂಸ್ಥಾನ, ಸಮಗ್ರ ಅಧ್ಯಯನ, ಸ್ವಾದಿ ಅರಸು ಮನೆತನ, ಬಿಳಗಿ ಅರಸು ಮನೆತನ, ಸಾರಂಗಶ್ರೀ ಹೆಸರಿನ ಕೃತಿಗಳನ್ನು ಸಂಪಾದಿಸಲಾಗಿದೆ. ಹೆಚ್ಚಿನದಾಗಿ ಕೆಳದಿ ಅರಸು ಮನೆತನ, ಹದಿನಾಡು ಅರಸು ಮನೆತನ, ಮಹಾನಾಡು ಅರಸು ಮನೆತನ ಇತ್ಯಾದಿಗಳ ಬಗ್ಗೆ ವಿಚಾರ ಸಂಕೀಣ೯ ಯೋಜಿಸಲ್ಪಟ್ಟು, ಪುಸ್ತಕ ಹೊರಬರುವಂತೆ ಮಾಡಲಾಗಿದೆ. ಇದಲ್ಲದೆ ಕರಾವಳಿ ಕನಾ೯ಟಕ, ಮೇಲೆ ಕನಾ೯ಟಕ, ಮೈಸೂರು ಕನಾ೯ಟಕ ಪ್ರದೇಶಗಳ ಸ್ಥ್ಯಳೀಯ ಅರಸು ಮನೆತನಗ ಚರಿತ್ರೆಯ ಸಂಪುಟಗಳನ್ನು ಬೆಳಕಿಗೆ ತರಲಾಗಿದೆ. ರಾಜಕೀಯ ಇತಿಹಾಸ ಕ್ಷೇತ್ರದ ಈ ದುಡಿಮೆಯನ್ನು ಗಮನಿಸಿ, ಇವರಿಗೆ ಸಂಡೂರಿನಲ್ಲಿ ಜರುಗಿದ 'ಇತಿಹಾಸ ಸಮ್ಮೇಳನ' ಅಧ್ಯಕ್ಷ ಗೌರವ ನೀಡಲಾಗಿತ್ತು.
ಪಿ.ಎಚ್.ಡಿ. ವಿದ್ಯಾಥಿ೯ಗಳಿಗೆ ಕೊಡೆಕಲ ಬಸವಣ್ಣ, ಪ್ರಾಚೀನ ಕನಾ೯ಟಕದ ವತ೯ಕವಗ೯ ಇತ್ಯಾದಿ ವಿಷಯಗಳನ್ನು ಕೊಡುವುದರ ಮೂಲಕ ಸಂಶೋಧನ ಕ್ಷೇತ್ರದ ಅನೇಕ ಮುಚ್ಚಿದ ಬಾಗಿಲು ತೆರೆದುಕೊಂಡವು.
ಕುಲಪತಿ ಹುದ್ದೆಯಿಂದ ನಿವೃತ್ತರಾಗುತ್ತಲೇ ಕನಾಟಕದ ಗಡಿಯಾಚೆಯ ಕನ್ನಡ ಸಂಸ್ಕೃತಿಶೋಧದತ್ತ ಇವರ ಗಮನ ಹರಿಸಿ, ವಿದ್ವಾಂಸರ ನೆರವಿನಿಂದ ಪೂರೈಸಬೇಕಾದಾನುವಾದ ಕಾಯ೯ಗಳ ವಿಚಾರಮಾಡಿ, ಇಂಗ್ಲಿಷ ಭಾಷೆಯ 'ಮಿಥಿಲಾ ಅಂಡರ ಕನಾ೯ಟಾಸ' ಮತ್ತು 'ಸೇನಾಸ ಆಫ ಹಿಮಾಚಲ ಪ್ರದೇಶ'- ಕನ್ನಡ ಅರಸರಿಗೆ ಸಂಬಧಪಟ್ಟ ಈ ಎರೆಡು ಗ್ರಂಥಗಳನ್ನು ಸದಾನಂದ ಕನವಳ್ಳಿಯವರ ಮೂಲಕ ಕನ್ನಡಕ್ಕೆ ಅನುವಾದ ಮಾಡಿಸಿ, ಪ್ರಕಟವಾಗುವಂತೆ ನೋಡಿಕೊಂಡರು. ಇದೇ ರೀತಿ ಮಹಾರಾಷ್ಟ್ರ ಮತ್ತು ಕನಾ೯ಟಕಗಳ ಸಾಂಸ್ಕೃತಿಕ ಸಂಬಂಧವನ್ನು ಇನ್ನೂ ಸ್ಪಷ್ಟಪಡಿಸ ಬಯಸಿ, ಒಂದು ಯೋಜನೆಯೆಂಬಂತೆ ಮಹಾರಾಷ್ಟ್ರದ ಹಿರಿಯ ತಲೆಮಾರಿನ ಸಂಶೋಧಕರಾದ ಶ್ರೀ ರಾ.ಚಿ.ಡೇರೆ ಅವರ ಐದು ಪುಸ್ತಕಗಳನ್ನು ಶ್ರೀ ಪೋಕಳೆ, ಶ್ರೀ ಮರಾಠೆ, ಶ್ರೀ ಗಾಯಕವಾಡ ಅವರ ಮೂಲಕ ಕನ್ನಡಕ್ಕೆ ಅನುವಾದ ಮಾಡಿಸಲಾಗಿದೆ. ಇದರ ಫಲವಾಗಿ ಲಜ್ಜಾಗೌರಿ, ಶ್ರೀ ವಿಠಲ, ನಾಥಸಂಪ್ರದಾಯ, ದತ್ತ ಸಂಪ್ರದಾಯ, ಖಂಡೋಬಾಃದೇಶಿ ದೈವತ ಹೆಸರಿನ ಗ್ರಂಥಗಳು ಕನ್ನಡಕ್ಕೇ ಬಂದವು. ಬಳಿಕ ಆಂದ್ರಪ್ರದೇಶ ಮತ್ತು ಕನಾ೯ಟಕಗಳ ಸಾಂಸ್ಕೃತಿಕ ಸಂಬಂಧವನ್ನು ಇನ್ನೂ ಸ್ಪಷ್ಟಪಡಿಸ ಬಯಸಿ ಕೈಗೊಂಡ ಐದು ಪುಸ್ತಕಗಳ ಅನುವಾದಯೋಜನೆಯ ಅಂಗವಾಗಿ ಶ್ರೀಶೈಲ, ಶುಧಶೈವಃ ಕಣ್ಮರೆಯಾದ ಒಂದು ಶೈವ ಸಂಪ್ರದಾಯ ಹೆಸರಿನ ಎರೆಡು ಪುಸ್ತಕಗಳು ಅಚ್ಚಾಗುತ್ತಲಿವೆ. ಇನ್ನೂ ಮೂರು ಪುಸ್ತಕಗಳು ಪ್ರಕಟವಾದರೆ ಈ ಯೋಜನೆಯು ಪೂಣ೯ಗೊಳ್ಳುತ್ತದೆ. ಇದೇ ರೀತಿ ತಮಿಳುನಾಡು- ಕನಾ೯ಟಕ, ಕೇರಳ- ಕನಾ೯ಟಕ, ಗುಜರಾತ- ಕನಾ೯ಟಕಗಳ ಸಂಬಂಧವನ್ನು ಕುರಿತಂತೆ ತಲಾ ಐದು ಕೃತಿಗಳನ್ನು ಅನುವಾದ ಮಾಡಿಸುವ ಯೋಜನೆ ಇವರ ಕೈಯಲ್ಲಿದೆ. ಈ ಕೆಲಸ ಪೂಣ೯ಗೊಂಡರೆ ಬೃಹತ ಕನಾ೯ಟಕದ ಒಂದು ಚಿತ್ರ ಕಣ್ಣುಮುಂದೆ ಬರುತ್ತದೆ. ಈ ದಾರಿಯಲ್ಲಿ ಎಡ್ವಡ೯ ಲೊರೆಂಜಿನ ಅವರ 'ಕಪಾಲಿಕಾಸ ಆಂಡ ಕಾಳಾಮುಖಾಸ' ಗ್ರಂಥವನ್ನು ವಿರುಪಾಕ್ಷ ಕುಲಕಣಿ೯ ಅವರ ಮೂಲಕ ಕನ್ನಡಕ್ಕೆ ಅನುವಾದ ಮಾಡಲಾಗಿದೆ.
ಇದೇ ರೀತಿ ಕನ್ನಡ ಕೃತಿಗಳು ಬೇರೆ ಭಾಷೆಗಳಲ್ಲಿ ಅನುವಾದಗೊಳ್ಳಬೇಕೆಂಬ ದೃಷ್ಟಿಯಿಂದ ಇವರ ಕನ್ನಡ ನಾಮವಿಜ್ಞಾನ ಕೃತಿಯನ್ನು 'ಕನ್ನಡ ಓನಾಮಾಸ್ಟಿಕ್ಸ್'ಹೆಸರಿನಿಂದ ಕನವಳ್ಳಿಯವರ ಮೂಲಕ ಇಂಗ್ಲಿಷಗೆ ಅನುವಾ ದ ಮಾಡಿಸಿದ್ದಾರೆ. ಇವರ 'ಕೆಟ್ಟಿತು ಕಲ್ಯಾಣ' ನಾಟಕ ಕೃತಿಯನ್ನು 'ಫಾಲ ಆಫ ಕಲ್ಯಾಣ' ಹೆಸರಿನಿಂದ ಬಸವರಾಜ ನಾಯ್ಕರ ಇಂಗ್ಲಿಷಗೆ ಅನುವಾದ ಮಾಡಿದ್ದು, ತಮಿಳು ಅನುವಾದ ಕಾಯ೯ ಮುಂದುವರೆದಿದೆ. ಇವರ 'ಮಹಾರಾಷ್ಟ್ರದ ಕನ್ನಡ ಶಾಸನಗಳು' ಮರಾಠಿಗೆ ಅನುವಾದಗೊಂಡು ಮುದ್ರಣ ಹಂತದಲ್ಲಿದೆ.
ಒಟ್ಟಾರೆ, ಕನ್ನಡಕ್ಕೆ ಅವಶ್ಯವಿರುವ ಮತ್ತು ಉಪೇಕ್ಷಿತವಾಗಿರುವ ಇಂಥ ಕೆಲಸಗಳ ಮೂಲಕ ಕನ್ನಡದ ಅಧ್ಯಯನಕ್ಷೇತ್ರವನ್ನು ವಿಸ್ತಾರಗೊಳಿಸಲಾಗಿದೆ.
ಉಪೇಕ್ಷಿತ ಕ್ಷೇತ್ರಗಳ ಕೃಷಿ