ಕನ್ನಡದಲ್ಲಿ ಗ್ರಂಥಸಂಪಾದನಾ ಕಾಯ೯ಕ್ಕೆ ಸುಮಾರು ಒಂದು ನೂರು ವಷ೯ದ ಇತಿಹಾಸವಿದೆ. ಈ ಅವಧಿಯಲ್ಲಿ ಎಲ್ಲ ವಿದ್ವಾಂಸರು ಮಾಗ೯ಸಾಹಿತ್ಯ ಸಂಪಾದನೆಗೆ ರೂಪಿಸಿಕೊಂಡ ನಿಯಮಗಳನ್ನೇ ದೇಶಿಸಾಹಿತ್ಯಕ್ಕೂ ಅನ್ವಯಿಸುತ್ತ ಬಂದಿರುವುದರಿಂದ , ದೇಶಿಸಹಿತ್ಯ ಸಂಪಾದನೆಗೆ ಅನ್ಯಾಯವಾಗಿದೆಯೆಂದು ಆಧಾರ ಸಹಿತ ಹೇಳಿ, ಹೊಸ ನಿಯಮಗಳನ್ನು ಸೂಚಿಸಿದ್ದಾರೆ. ಇದಲ್ಲದೇ ಮೂಲತಃ ಶ್ರವಣ ಸಂಸ್ಕೃತಿಯಲ್ಲಿ ಹುಟ್ಟಿದ ದೇಶಿ ಸಾಹಿತ್ಯಕೃತಿಗಳ ಸಂಧಿಯ ಆರಂಭದಲ್ಲಿದ್ದ ರಾಗ-ತಾಳಗಳನ್ನು ವಾಚನ ಸಂಸ್ಕೃತಿಯ ಪಾಶ್ಚಿಮಾತ್ಯರು ಸಹಜವಗಿಯೆ ಕೈಬಿಟ್ಟಿದ್ದು, ಅದನ್ನೇ ನಾವು ಅನುಸರಿಸುತ್ತಾ ಬಂದಿದ್ದೆವೆ. ಈಗ ರಾಗ-ತಾಳಗಳನ್ನಿಟ್ಟು ಅವುಗಳನ್ನು ಮುದ್ರಿಸಬೇಕೆಂಬುದು ಇವರ ಪ್ರತಿಪಾದನಯಾಗಿದೆ.ಹೀಗೆ ಹೊಸ ವಿಚಾರಗಳನ್ನು ಮಂಡಿಸಿದುದಲ್ಲದೆ, ಹರಿಹರನ ಸಮಗ್ರ ರಗಳೆ, ಅನೇಕ ಐತಿಹಾಸಿಕ ಕಾವ್ಯಗಳನ್ನು ಸಂಪಾದಿಸಿದ್ದಾರೆ. 'ಸಮಗ್ರ ವಚನ ಸಾಹಿತ್ಯ ಸಂಪುಟ'ಗಳ ಸಂಪಾದನೆ ಮತ್ತು ಪ್ರಕಟನೆ ಒಂದು ಐತಿಹಾಸಿಕ ಘಟನೆಯೆನಿಸಿದೆ. ಗದುಗಿನ'ಲಿಂಗಾಯತ ಅಧ್ಯಯನಸಂಸ್ಥೆ'ಯ ಮೂಲಕ ಆರಂಭಿಸಿದ 'ಸಮಗ್ರ ಲಿಂಗಾಯತ ಪ್ರಾಚೀನ ಅಪ್ರಕಟಿತ ಸಾಹಿತ್ಯ ಪ್ರಕಟನ ಯೋಜನೆ' ಇನ್ನೊಂದು ಐತಿಹಾಸಿಕ ಘಟನೆಯಾಗಿದೆ. ಮೈಸೂರಿನ ಸುತ್ತೂರು ಮಠದ ಮೂಲಕ ಕೈಗೆತ್ತಿಕೊಂಡಿದ್ದ 'ಸಮಗ್ರ ಸ್ವರವಚನ ಸಾಹಿತ್ಯ ಪ್ರಕಟನ ಯೋಜನೆ'ಯ ಮೂಲಕ ಪ್ರಕಟವಾದ ೧೦ ಸಂಪುಟಗಳನ್ನು ಇಲ್ಲಿ ನೆನೆಯಬಹುದಾಗಿದೆ. 'ಕನಾ೯ಟಕದ ಕೈಫಿಯತ್ತುಗಳು' ಕೃತಿ ದಾಖಲುಸಾಹಿತ್ಯ ಸಂಪಾದನೆಗೆ ಒಂದು ದೊಡ್ಡ ನಿದಶ೯ನವಾಗಿದೆ.