ಸಂಪಾದನ ಶಾಸ್ತ್ರ:
ಬಸವಮಾಗ೯ ೧-೨-೩:
ಏಕೋತ್ತರ ಶತಸ್ಥಲ:
ಡಾ. ಎಂ.ಎಂ. ಕಲಬುರ್ಗಿ ಹಾಗೂ ಡಾ. ವೀರಣ್ಣ ರಾಜೂರ ಇವರ ಸಂಯುಕ್ತ ಪರಿಶ್ರಮದ ಫಲವಾಗಿ ಈ ಕೃತಿ ಪ್ರಕಟಗೊಂಡಿದೆ. ಸಂಪಾದಕರು ಹೇಳಿರುವಂತೆ ವಚನಗಳ ಸೃಷ್ಟಿ ಸಾಂದರ್ಭ, ಸಂಗ್ರಹ ಸಂದರ್ಭ, ಸಂಪಾದನಾ ಸಂದರ್ಭ, ಸಂಕಲನ ಸಂದರ್ಭ ಮತ್ತು ಪಾಠಪರಿಕ್ಷಣ ಹೀಗೆ೫ ಮುಖ್ಯ ಪುಟಗಳನ್ನು ವಚನ ಸಾಹಿತ್ಯ ಇತಿಹಾಸದಲ್ಲಿ ಕಲ್ಪಿಸಿಕೊಳ್ಳಬಹುದಾಗಿದೆ.'ಏಕೋತ್ತರ ಶತಸ್ಥಲ'ಗ್ರಂಥವು ವಚನಗಳ ಸಂಕಲನ ಸಂದರ್ಭದ ಸೃಷ್ಟಿಯಾಗಿದೆ. "ಅಂಗವು ಷಟ್ಸ್ಥಲಗಳ ಮೂಲಕ ಲಿಂಗವಾಗುವ ಅಂಗಷಟ್ಸ್ಥಲವನ್ನು ಮತ್ತು ಲಿಂಗವು ಷಟ್ಸ್ಥಲಗಳನ್ನು ಆಚರಿಸುತ್ತ ಮಹಾಲಿಂಗದಲ್ಲಿ ಸಮರಸವಾಗುವ 'ಲಿಂಗಷಟ್ಸ್ಥಲ'ಗಳನ್ನು ಪ್ರತಿಪಾದಿಸುವುದೇ ಏಕೋತ್ತರ ಷಟ್ಸ್ಥಲ ಸಿದ್ದಾಂತದ ವಿಷಯವಾಗಿದೆ." 'ಅಂಗಷಟ್ಸ್ಥಲ' ೪೪, ಲಿಂಗಷಟ್ಸ್ಥಲದಲ್ಲಿ ೫೭ ಸ್ಥಲಗಳನ್ನು ಕಲ್ಪಿಸಲಾಗಿದ್ದು, ಇವು ನೂರೊಂದು ಸ್ಥಲಗಳಾಗುವುದರಿಂದ ಈ ಕೃತಿಯನ್ನು 'ಏಕೋತ್ತರ ಶತಸ್ಥಲ'ವೆನ್ನಲಾಗುತ್ತದೆ. 'ಅಂಗಸ್ಥಲ'ವು (೧) ಭಕ್ತ (೨) ಮಾಹೇಶ್ವರ (೩) ಪ್ರಸಾದಿ(೪) ಪಾಣಲಿಂಗ (೫) ಶಿರಣ (೬) ಐಕ್ಯವೆಂಬ ಆರು ವಿಭಾಗಗಳನ್ನು ಮತ್ತು 'ಲಿಂಗಸ್ಥಲ'ವು (೧) ಆಚಾರಲಿಂಗ (೨) ಗುರುಲಿಂಗ (೨) ಗುರುಲಿಂಗ (೩) ಶಿವಲಿಂಗ (೪) (ಜಂಗಮಲಿಂಗ) (೫) ಪ್ರಸಾದಲಿಂಗ (೬) ಮಹಾಲಿಂಗವೆಂಬ ಆರು ವಿಭಾಗಗಳನ್ನು ಒಳಗೊಂಡಿರುವುದಲ್ಲದೆ, ಈ ವಿಭಾಗಗಳು ಕ್ರಮವಾಗಿ ೪೪ ಮತ್ತು ೫೭ ಉಪಪ್ರಧೇದಗಳಲ್ಲಿ 'ವಿಷಯ'ವನ್ನು ನಿರೂಪಿಸುತ್ತವೆ. 'ಪ್ರಸ್ತಾವನೆ'ಯಲ್ಲಿ ಸಂಪಾದಕರು ಗ್ರಂಥಕರ್ತೃ, ಅವನ ಕಾಲ ಮುಂತಾದ ವಿಷಯಗಳ ಕುರಿತು ತತ್ಪೂರ್ವದ ವಿವಾದಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿರುವುದು ಗಮನಾರ್ಹವಾಗಿದೆ.
ಬಸವಣ್ಣನವರ ವಚನ ಸಂಪುಟ:
೧೮೮೯, ಮೊದಲು ಪ್ರಕಟವಾದ ವಚನಗ್ರಂಥ;(೧೮೮೩) 'ಅಪ್ರಮಾಣ ಕೂಡಲಸಂಗಮದೇವಾ' ಮುದ್ರಿಕೆಯ "ಶಿವರತ್ನಪ್ರಕಾಶ"ವೆಂಬುದು. ಮುಂದೆ (೧೮೮೯), 'ಬಸವಣ್ಣನವರ ಶಟಸ್ಥಲ ವಚನ ಸಂಪುಟ' ಪ್ರಕಟಗೊಂಡು ವಚನಸಾಹಿತ್ಯ ಪ್ರಕಟನೆಗೆ ಒಂದು ಸರಿಯಾದ ನೆಲೆಗಟ್ಟನ್ನು ಒದಗಿಸಿದವು. ನಂತರ ಸರಿಯಾಗಿ ಒಂದು ಶತಮಾನ ಕಳೆಯುವ ಹೊತ್ತಿಗೆ(೧೯೮೮), ಡಾ. ಎಂ.ಎಂ.ಕಲಬುರ್ಗಿಯವರು 'ಸಮಗ್ರ ವಚನ ಸಾಹಿತ್ಯದ ಜನಪ್ರಿಯ ಆವೃತ್ತಿ ಪ್ರಕಟನೆ ಯೋಜನೆ' ರೂಪಿಸಿ, ತಾವೇ ಪ್ರಧಾನ ಸಂಪಾದಕರ ಹೊಣೆಹೊತ್ತು ಇತರ ಸಂಪಾದಕರನ್ನೊಳಗೊಂಡ ಯೋಜನೆಯನ್ನು ಕರ್ನಾಟಕ ಸರಕಾರದ ಅನುದಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಹಕಾರದೊಂದಿಗೆ ಯಶಸ್ವಿಗೊಳಿಸಿದರು. ೧೫ ಸಂಪುಟ, ಇಪ್ಪತ್ತು ಸಾವಿರ ವಚನ, ಹತ್ತು ಸಾವಿರ ಪುಟಗಳ ಸಮಗ್ರ ವಚನ ಸಾಹಿತ್ಯವನ್ನು ಪ್ರಥಮಬಾರಿಗೆ ಪ್ರಕಟಿಸಲಾಯಿತು. ಬಸವಣ್ಣ, ಪ್ರಭುದೇವ, ಚೆನ್ನಬಸವಣ್ಣ, ಸಿದ್ಧರಾಮೇಶ್ವರ, ಶಿವಶರಣೆಯರ ವಚನಗಳನ್ನೊಳಗೊಂಡ ಐದು ಸಂಪುಟಗಳು, ಬಸವ ಸಮಕಾಲೀನ ಶರಣರ ವಚನಗಳ ನಾಲ್ಕು ಸಂಪುಟಗಳು, ಬಸಓತ್ತರ ಕಾಲೀನ ಶರಣರ ವಚನಗಳ ಐದು ಸಂಪುಟಗಳು ಮತ್ತು ಒಂದು ವಚನ ಪರಿಭಾಷಾಕೋಶವನ್ನೊಳಗೊಂಡ ಸಂಪುಟಗಳು ಇವಾಗಿವೆ. ಈ ಸಂಪುಟಗಳಲ್ಲಿ 'ಬಸವಣ್ಣನವರ ವಚನ ಸಂಪುಟ- ೧ ,ಮೊದಲನೆಯದು. 'ಇಲ್ಲಿ ಷಟಸ್ಥಲದ ವಚನ ಮತ್ತು ಹೆಚ್ಚಿನ ವಚನಗಳು ಎಂಬ ಎರೆಡು ವಿಭಾಗಗಳಿದ್ದು, ಕ್ರಮವಾಗಿ ಅವುಗಳನ್ನು ಕಾಂಡ: ಒಂದು ಕಾಂಡ: ಎರೆಡು ಎಂದು... ಪ್ರತ್ತೇಕವಾಗಿಯೆ ಸಂಪಾದಿಸಿ ಕೊಡಲಾಗಿದೆ. ಒಂದನೆಯ ಕಾಂಡದಲ್ಲಿ ೯೬೦, ಎರಡನೆಯ ಕಾಂಡದಲ್ಲಿ ೪೫೪ ಹೀಗೆ ಒಟ್ಟು ೧೪೧೪ ವಚನಗಳು ಸೇರಿವೆ. ವಚನ ಸಾಹಿತ್ಯದ ಪರಿಷ್ಕರಣ ಕಾರ್ಯ ತುಂಬಾ ಜಟಿಲವಾದುದು: ೧ ಎಲ್ಲ ಶರಣರ ಎಲ್ಲ ವಚನಗಳನ್ನು ಎಲ್ಲ ಪ್ರಾಚೀನ ಆಕರಗಳಿಂದ ಸಂಗ್ರಹಿಸುವುದು, ೨. ಪ್ರಕ್ಷಿಪ್ತವಾಗಿರಬಹುದುದಾದ ವಚನಕಾರರನ್ನು, ವಚನಗಳನ್ನು ಕೈಬಿಡುವುದು, ೩. ನಿಜವಚನಗಳ ಪಾಠಗಳನ್ನು ಪರಿಷ್ಕರಿಸುವುದು"- ಇಂಥ ಪರಿಶ್ರಮ ಬೇಡುವ ಕಾರ್ಯಕ್ಕೆ ಒಂದು ಮಾದರಿ ಎಂಬಂತೆ ಪ್ರಸ್ತುತ ಕೃತಿಯನ್ನು ಡಾ. ಕಲಬುರ್ಗಿಯವರು ಸಂಪಾದಿಸಿ ಕೊಟ್ಟಿದ್ದಾರೆ. (ಪ್ರ. ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು- ಪ್ರಥಮ ಮುದ್ರಣ ೧೯೯೩, ದ್ವಿತಿಯ ಪರಿಷ್ಕೃತ ಮುದ್ರಣ ೨೦೦೧).