ಬಸವ ಬೆಳಗು

ಬಸವ ಬೆಳಗು:

basava belagu

ಚಿತ್ತರಗಿಯ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನಮಠ, ಇಳಕಲ್ಲ ಪ್ರಕಟಿಸಿರುವ ತ್ರೈಮಾಸಿಕ ವಿಶೇಷ ಸಂಚಿಕೆ ಇದು. ಪ್ರೊ. ಸಿದ್ಧಣ್ಣ ಲಂಗೋಟಿಯವರು ಇದರ ಗೌರವ ಸಂಪಾದಕರು. ಇಲ್ಲಿ ಕಲಬುರ್ಗಿಯವರ ಬದುಕು-ಸಾಧನೆ ಮತ್ತು ಕೃತಿಪಟ್ಟಿಯನ್ನು ಒಳಗೊಂಡಂತೆ ಪ್ರೊ.ಲಂಗೋಟಿಯವರ ಲೇಖನ, 'ಮಹಾಮಾರ್ಗದ ರೂವಾರಿ....' ಹೆಸರಿನ ಡಾ. ರಾಜೂರ ಅವರ ಲೇಖನ, ಕಲಬುರ್ಗಿಯವರ ಹತ್ಯೆಯ ಕುರಿತು ಧಾರ್ಮಿಕ ಮುಖಂಡರು-ಮಠಾಧೀಶರು ವಿವಿಧ ಪತ್ರಿಕೆಗಳಿಗೆ ನೀಡಿದ ಪ್ರತಿಕ್ರಿಯೆ, ಸಾಹಿತಿಗಳು-ಕವಿಗಳು-ವಿದ್ವಾಂಸರು ವ್ಯಕ್ತಪಡಿಸಿದ ಅಭಿಪ್ರಾಯ, ಹೊಸದಿಲ್ಲಿಯ ಕೇಂದ್ರಸಾಹಿತ್ಯ ಅಕಾದೆಮಿ ಕೈಗೊಂಡ ನಿರ್ಣಯ, ಅಮೇರಿಕಾ- ಬ್ರಿಟನ್- ಪಾಕಿಸ್ತಾನ- ಬಾಂಗ್ಲಾದೇಶಗಳ ಪ್ರಸಿಧ ಪತ್ರಿಕೆಗಳು ತೋರಿದ ಪ್ರತಿಕ್ರಿಯೆ, ರಾಜಕೀಯ ದ್ಧುರೀಣರ ಹೇಳಿಕೆಗಳು, ಕುಟುಂಬದ ಸದಸ್ಯರು ಆಡಿದ ಮಾತುಗಳು, ಕಲಬುರ್ಗಿಯವರ ಗ್ರಾಮದ ಹಿರಿಯರ, ಆತ್ಮೀಯರ ಅನಿಸಿಕೆಗಳನ್ನು ವಿಂಗಡಿಸಿ  ಉಪಶೀರ್ಷಿಕೆಗಳಲ್ಲಿ ಸಂಗ್ರಹಿಸಿದ ಡಾ. ಕಲ್ಯಾಣಮ್ಮ ಲಂಗೋಟಿಯವರ ಸಂಕಲಿತ ಲೇಖನ ಹಾಗೂ ಕಲಬುರ್ಗಿಯವರನ್ನು ಕುರಿತು ಕೆಲವರು ನರೆದಿರುವ ಕವನಗಳನ್ನು ಈ ಸಂಚಿಕೆ ಒಳಗೊಂಡಿದೆ. (ಪ್ರ. ಚಿತ್ತರಗಿಯ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನಮಠ, ಇಳಕಲ್ಲ- ಸಂಪುಟ ೩೧, ಸಂಚಿಕೆ ೧. ಅಕ್ಟೋಬರ-ನವೆಂಬರ-ಡಿಸೆಂಬರ-೨೦೧೫).

ಕವಿಮಾರ್ಗ(ನಾಡೊಜ ಎಂ.ಎಂ.ಕಲಬಿರ್ಗಿ ವಿಶೇಷ ಸಂಚಿಕೆ ):

kavi marga

೧೯೮೭ರಲ್ಲಿ 'ವಿಮರ್ಶೆ'ಎನ್ನುವ ಹೆಸರಿನಲ್ಲಿ ಆರಂಭಗೊಂಡ ಈ ತ್ರೈಮಾಸಿಕ ಮರುವರ್ಷ 'ಕವಿಮಾರ್ಗ' ಎಂಬ ಬದಲಾದ ಹೆಸರಿನೊಂದಿಗೆ ೧೯೯೭ರ ವರೆಗೆ ಪ್ರಕಟಗೊಂಡು ನಿಂತುಬಿಟ್ಟಿತು. ಆದರೆ ಅಗಷ್ಟ ೩೦, ೨೦೧೫ರಂದು ದುಷ್ಕರ್ಮಿಗಳು ಸತ್ಯಶೋಧಕ, ಬಹುಶ್ರುತ ವಿದ್ವಾಂಸ ಡಾ. ಕಲಬುರ್ಗಿಯವರನ್ನು ಹತ್ಯೆಗೈದ ಘಟನೆ ಕಾರಣವಾಗಿ ಪ್ರಸ್ತುತ 'ಕವಿಮಾರ್ಗ' ಮರುಹುಟ್ಟು ಪಡೆದು, ಅದು ಡಾ. ಕಲಬುರ್ಗಿಯವರ ಬಹುಸ್ತರೀಯ ವಿದ್ವತ್ತು ಮತ್ತು ವ್ಯಕ್ತಿತ್ವವನ್ನು ಕಟ್ಟಿಕೊಡುವ ವಿಶೇಷ ಸಂಚಿಕೆ (ಸಂಪುಟ -೧೦, ಸಂಚಿಕೆ ೧, ೨ ಜನೆವರಿ-ಜೂನ್ - ೨೦೧೬)ಯಾಗಿ ರೂಪಗೊಂಡು ಪ್ರಕಟಗೊಂಡಿದೆ. ಒಟ್ಟು ೧೧ ಜನ ಲೇಖಕರು ಬರೆದ ಲೇಖನಗಳನ್ನು ಈ ಸಂಚಿಕೆ ಒಳಗೊಂಡಿದೆ. (ಪ್ರ. ಕವಿಮಾರ್ಗ ಪ್ರಕಾಶನ, ಕಲಬುರಗಿ-೨೦೧೬).

 

 

ಬಣಜಿಗ ಬಂಧು:

banajiga bamdhu

ಡಾ. ಎಂ.ಎಂ.ಕಲಬುರ್ಗಿಯವರನ್ನು ಕುರಿತು ಇತರರು ಬರೆದಿರುವ ನಾಲ್ಕು ಲೇಖನ, ಮೂರು ಕವಿತೆ ಮತ್ತು ಕಲಬುರ್ಗಿಯವರೇ ಬರೆದಿರುವ 'ಜಾತಿ ನಾಲ್ಕುವಿಡಿದು ಬಂದ ಜಂಗಮವೇ ಶ್ರೇಷ್ಠ' ಎಂಬ ಒಂದು ಸಂಶೋಧನಾ ಲೇಖನವನ್ನು ಅಳವಡಿಸಿಕೊಂಡಿರುವ ಈ ಮಾಸಪತ್ರಿಕೆಯನ್ನು ಕಲಬುರ್ಗಿಯವರಿಗೆ ಸಮರ್ಪಿಸಲಾಗಿದೆ. (ಪ್ರ. ಕರ್ನಾಟಕರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ(ರಿ)ಬೆಂಗಳೂರು. ಸಂಪುಟ ೪, ಸಂಚಿಕೆ ೨ ಅಕ್ಟೋಬರ -೨೦೧೫ ).

 

 

 

ಸಾವಧಾನ:

savadhana

ಧಾರವಾಡ ಶ್ರೀ ಮುರುಘಾಮಠ ಪ್ರಕಟಿಸುತ್ತಿರುವ ಮಾಸಿಕ ಪತ್ರಿಕೆ ಇದು. ಡಾ. ಎಂ.ಎಂ.ಕಲಬುರ್ಗಿಯವರ ಅಮಾನುಷ್ಯ ಹತ್ಯೆಯನ್ನು ಖಂಡಿಸಿ, ವಿಶೇಷವಾಗಿ ಅವರು ಶರಣಧರ್ಮ ಮತ್ತು ಸಾಹಿತ್ಯ ಕುರಿತು ಬರೆದಿರುವ ಆಯ್ದ ೯ ಲೇಖನಗಳನ್ನು ಡಾ.ವೀರಣ್ಣ ರಾಜೂರ ಮತ್ತು ಬಸವರಾಜ ಹೂಗಾರ ಸಂಪಾದಿಸಿ ಈ ವಿಶೇಷ ಸಂಚಿಕೆಯನ್ನು ರೂಪಿಸಿದ್ದಾರೆ. (ಪ್ರ. ಅಖಿಲ ಭಾರತ ಶಿವಾನುಭವ ಸಂಸ್ಥೆ, ಶ್ರೀ ಮುರುಘಾಮಠ, ಧಾರವಾಡ-ಸಂಪುಟ-೬೮ ಸಂಚಿಕೆ-೨ ಅಕ್ಟೋಬರ-೨೦೧೫).