ಗ್ರಂಥಸಂಪಾದನೆ :
ಇಮ್ಮಡಿ ಚಿಕ್ಕಭೂಪಾಲನ ಸಾಂಗತ್ಯ:
ಕರ್ನಾಟಕದ ರಾಜಕೀಯ ಚರಿತ್ರೆಯೆಂದರೆ ಅರಸರ, ಸಾಮಂತರ, ಪಾಳೆಯಗಾರರ, ಮಹಾನಾಡ ಪ್ರಭುಗಳ ಯುದ್ಧಪ್ರತಿಷ್ಠೆ, ಸಾಂಸ್ಕೃತಿಕನಿಷ್ಠೆಯ ಕಥನವೆಂದು ಭಾವಿಸಬೇಕಾಗುತ್ತದೆ. ಪ್ರಸ್ತುತ ಕಾವ್ಯವೂ ಇದಕ್ಕೆ ಹೊರತಲ್ಲ. ಇಮ್ಮಡಿ ಚಿಕ್ಕಭೂಪಾಲನು: ವೀರಶೈವ 'ನೊಣಬ' ಪಂಗಡದ ಕರಿತಿಮ್ಮ ಚಿಕ್ಕಭೂಪಾಲ ಹಾಗೂ ಅವನ ಹೆಂಡತಿ ಸೋಮಾಂಬೆಯ ಮಗ. ಪೆನುಗೊಂಡೆ ಆಳುತ್ತಿದ್ದ ವಿಜಯನಗರದ ಅರಸು ವೆಂಕಟಪತಿರಾಯನ ೭೭ ಜನ ಪಾಳೆಗಾರರಲ್ಲಿ ಒಬ್ಬನಾಗಿದ್ದ. ಚಿಕ್ಕಭೂಪಾಲನ ಬ್ರಹ್ಮವಿರಚನೆ, ಹಿರಿಯ ಮಗ ತೋಂಟದರಾಯವೀರನ ಸ್ವರ್ಗಾರೋಹಣ ಈತನ ಕಿರಿಯ ಮಗ ಸಪ್ಪೇಂದ್ರ ಕಟ್ಟಿಸಿದ ಮಲ್ಲೇಶ ದೇವಾಲಯ ನಿರ್ಮಾಣ ಇತನ ಕಣ್ಣಮುಂದೆಯೇ ಜರುಗಿರಬೇಕು ..."ಶುದ್ಧಚಾರಿತ್ರಿಕ ಕಾವ್ಯ ರಚನೆ ಪರಂಪರೆ ಬೆಳೆದು ಬರಲಿಲ್ಲ. ಆದರೆ ಈ ಕಾವ್ಯದಲ್ಲಿ ಬರುವ ಸ್ಥಳನಾಮ, ವ್ಯಕ್ತಿನಾಮ, ರಾಜಕೀಯ ಸಂಘರ್ಷ, ನಿರ್ಮಿಸಿದ ದೇವಾಲಯ, ನಂಬಿದ್ದ ಮೌಲ್ಯ ಮೊದಲಾದವು ೧೬ನೆಯ ಶತಮಾನದ ಒಂದು ಪಾಳೆಯಗಾರ ಪರಿವಾರದ ಮತ್ತು ಪ್ರಜಾಪರಿಸರದ ಸ್ಪಷ್ಠ ಚಿತ್ರವನ್ನೊದಗಿಸುತ್ತವೆ.... ಈ ಎಲ್ಲ ದೃಷ್ಟಿಯಿಂದ ಇಮ್ಮಡಿ ಚಿಕ್ಕ ಭೂಪಾಲನ ಈ ಸಾಂಗತ್ಯ ಕೃತಿ ಬೆಲೆಯುಳ್ಳ ಚಾರಿತ್ರಿಕ ಕೃತಿಯಾಗಿ ಪರಿಣಮಿಸಿದೆ "ಎನ್ನುತ್ತಾರೆ ಸಂಪಾದಕರಾದ ಡಾ.ಎಂ.ಎಂ.ಕಲಬುರ್ಗಿ ಹಾಗೂ ಡಾ. ವೀರಣ್ಣ ರಾಜೂರ ಅವರು.
(ಪ್ರ. ಶ್ರೀ. ನಿ. ಪ್ರ. ಮಹಾಂತ ಸ್ವಾಮಿಗಳು/ಶ್ರೀ ಗುರು ಮೃತ್ಯುಂಜಯ ಮಹಾಸ್ವಾಮಿಗಳು ಶ್ರೀ ಮುರುಘಾಮಠ, ಮೃತ್ಯುಂಜಯ ನಗರ-ಧಾರವಾಡ, ೧೯೭೭.)