ಮಹಾಮಾರ್ಗದ ರೂವಾರಿ

ಮಹಾಮಾರ್ಗದ ರೂವಾರಿ- ಡಾಎಂ.ಎಂ.ಕಲಬುರ್ಗಿ:

mahamargada ruari

ಡಾ. ವಿರಣ್ಣ ರಾಜೂರ ರೂಪಿಸಿದ ಈ ಕೃತಿ ಡಾ.ಎಂ.ಎಂ.ಕಲಬುರ್ಗಿಯವರ ಬದುಕು ಮತ್ತು ವ್ಯಕ್ತಿತ್ವವನ್ನು ಆರಂಭದ ಲೇಖನದಲ್ಲಿ ತುಂಬ ನಿಖರವಾಗಿಪರಿಚಯಿಸುತ್ತದೆ. ನಂತರದಲ್ಲಿ ಅವರ ಜೀವನ ...ವಹಿಸಿಕೊಂಡ ಹುದ್ದೆ- ಬಹುಶೃತ ವಿದ್ವತ್ತು- ಅವರಿಗೆ ಸಂದ ಗೌರವ -ಪ್ರಶಸ್ತಿ- ಸಂಸ್ಥೆ ಹಾಗೂ ಮಠಗಳಿಗೆ ನೀಡಿದ ಮಾರ್ಗದರ್ಶನ ಇತ್ಯಾದಿ ಸಂಗತಿಗಳನ್ನು ಒಂದು ವ್ಯವಸ್ಥಿತ ವಿಂಗಡಿತ ಕ್ರಮದಲ್ಲಿ ಕಟ್ಟಿಕೊಟ್ಟ ಈ ಕೃತಿ, ಕಲಬುರ್ಗಿಯವರನ್ನು ಕುರಿತು ಬರೆಯುವವರಿಗೆಲ್ಲ ಒಂದು ಕೈಪಿಡಿಯಾಗಿದೆ. (ಪ್ರ. ಡಾ. ವೀರಣ್ಣ ರಾಜೂರ -?)

 

 

 

ಡಾ.ಎಂ.ಎಂ.ಕಲಬುರ್ಗಿ:

Drmmk_prakash girimallanavar

ಕೆ.ಎಲ್.ಇ.ಸಂಸ್ಥೆಯ ಶತಮಾನೋತ್ಸವ ಸಾಹಿತ್ಯ ಮಾಲಿಕೆಯಲ್ಲಿ ಪ್ರಕಟಗೊಂಡಿರುವ -೪೪ನೆಯ ಕೃತಿ ಇದು. ಪ್ರಕಾಶ ಗಿರಿಮಲ್ಲನವರ ಇದನ್ನು ರಚಿಸಿದ್ದಾರೆ. ಕೆ.ಎಲ್.ಇ.ಸಂಸ್ಥೆ ಹಾಗೂ ಅದರ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆಯವರೊಂದಿಗೆ ಡಾ. ಎಂ.ಎಂ.ಕಲಬುರ್ಗಿಯವರ ಸಂಬಧ ತುಂಬಾ ನಿಕಟವಾದುದು. ಈ ಹಿನ್ನೆಲೆಯನ್ನು ಈ ಕೃತಿಯ ಮೂಲಕ ಸ್ಮರಿಸಿಕೊಳ್ಳುವ ಅಭೀಪ್ಸೆ ಇಲ್ಲಿ ಎದ್ದು ಕಾಣುತ್ತದೆ. ಕಲಬುರ್ಗಿಯವರ ಜೀವನ, ಅವರು ಕೈಗೆತ್ತಿಕೊಂಡ ಸಮಗ್ರ ವಚನ ಸಂಪುಟಗಳ ಯೋಜನೆ, ಸಮಗ್ರ ದಾಸ ಸಂಪುಟಗಳ ಪ್ರಕಟಣ ಯೋಜನೆ, ಮಾನಸೋಲ್ಲಾಸ ಕನ್ನಡ ಅನುವಾದ ಯೋಜನೆ, ಫ.ಗು.ಹಳಕಟ್ಟಿ ಸಮಗ್ರ ಸಾಹಿತ್ಯ ಸಂಪುಟಗಳ ಪ್ರಕಟಣ ಯೋಜನೆ, ತೋಂಟದ ಸಿದ್ಧಲಿಂಗೇಶ್ವರ ಸಮಗ್ರ ಸಾಹಿತ್ಯ ಪ್ರಕಟಣ ಯೋಜನೆ, ಆದಿಲಶಾಹಿ ಕಾಲದ ಸಾಹಿತ್ಯ- ಅನುವಾದ ಪ್ರಕಟಣ ಯೋಜನೆ, ವಚನ ಸಾಹಿತ್ಯವನ್ನು ಬೈಬಲ್ ಮಾದರಿಯಲ್ಲಿ ಪ್ರಕಟಿಸುವ ಯೋಜನೆ, ಬಸವರಾಜ ಕಟ್ಟಿಮನಿ ಸಮಗ್ರ ಸಾಹಿತ್ಯ ಪ್ರಕಟಣ ಯೋಜನೆ ಮುಂತಾದ ಇನ್ನೂ ಕೆಲವು ಯೋಜನೆಗಳ ಸ್ಟೂಲ ಪರಿಚಯ, ಅವರ ವಚನ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ, ಅವರ ಸಾಹಿತ್ಯ ಅವಲೋಕನ, ಸಂಶೋಧನೆ ಕುರಿತ ಅವರ ಸಮಗ್ರ ದೃಷ್ಟಿ,  ಹಾಗೂ ಕೆ.ಎಲ್.ಇ. ಸಂಸ್ಥೆಯ ಪ್ರಸಾರಾಂಗದೊಂದಿಗೆನ ಅವರ ಒಡನಾಟ ಈ ಎಲ್ಲ ವಿಷಯಗಳನ್ನು ಈ ಕೃತಿ ತುಂಬಾ ಅಚ್ಚುಕಟ್ಟಾಗಿ ಧಾಖಲಿಸಿದೆ. (ಪ್ರ. ಪ್ರಸಾರಾಂಗ, ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ, ಬೆಳಗಾವಿ-೨೦೧೬).

ಸಮಗ್ರ ಸಂಶೋಧಕ ಡಾ. ಎಂ.ಎಂ.ಕಲಬುರ್ಗಿ :

ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗ ವ್ಯಾಸಂಕ ವಿಸ್ತರಣ ಉಪನ್ಯಾಸ ಶಿಬಿರವು (ಜನೆವರಿ ೨೧,೨೨,೧೯೯೮) ಗದಗ ಜಿಲ್ಲೆಯ ಮುಂಡರಗಿಯಲ್ಲಿ ಜರುಗಿತು. ಈ ಸಂದರ್ಭದಲ್ಲಿ ಡಾ.ಜೆ.ಎಂ.ನಾಗಯ್ಯ ಪ್ರಸ್ತುತ ವಿಷಯ ಕುರಿತು ನೀಡಿದ ಉಪನ್ಯಾಸದ ವಿಸ್ತ್ರತರೂಪ ಈ ಕೃತಿ. ಪ್ರವೇಶ, ಸಮಗ್ರ ಸಂಶೋಧಕ, ಸಮಾರೋಪ ಹೀಗೆ ಮೂರು ವಿಭಾಗಗಳು ಇಲ್ಲಿದ್ದು, ಸಹಜವಾಗಿಯೇ ನಿರ್ದಿಷ್ಟ ಪುಟಗಳ ಮಿತಿಯಲ್ಲಿ ಡಾ.ಕಲಬುರ್ಗಿಯವರ ಜೀವನ ವಿವರಗಳನ್ನು ಸಂಕ್ಷಿಪ್ತವಾಗಿ, ಸಂಶೋಧಕ ವ್ಯಕ್ತಿತ್ವ ಮತ್ತು ಸೃಜನಶೀಲ ವ್ಯಕ್ತಿತ್ವವನ್ನು ವಿಸ್ತೃತವಾಗಿ ಈ ಕೃತಿ ಕಟ್ಟಿಕೊಟ್ಟಿದೆ. (ಪ್ರ. ಪ್ರಸಾರಾಂಗ ಕರ್ನಾಟಕ ವಿಶ್ವವಿದ್ಯಾಲಯ - ಸುವರ್ಣ ಮಹೋತ್ಸವ ವರ್ಷ-೧೯೯೯).