ಶಾಸನ ವ್ಯಾಸಂಗ

ಶಾಸನ ಸಾಹಿತ್ಯ:

 

ಧಾರವಾಡ ಜಿಲ್ಲೆಯ ಶಾಸನಸೂಚಿ/ವಿಜಯಪುರ ಜಿಲ್ಲೆಯ ಶಾಸನಸೂಚಿ:

shasan_7shasan_6

ಉಭಯ ಜಿಲ್ಲೆಗಳ ಈ 'ಶಾಸನಸೂಚಿ'ಗಳು ಕ್ರಮವಾಗಿ ಕರ್ನಾಟಕ ವಿಶ್ವವಿದ್ಯಾಲಯದ ರಜತ ಮಹೋತ್ಸವ ಮತ್ತು ಕನ್ನಡ ಅಧ್ಯಯನ ಪೀಠದ ಬೆಳ್ಳಿಹಬ್ಬದ ವಿಶಿಷ್ಟ ಸಂದರ್ಭಗಳಲ್ಲಿ ಪ್ರಕಟಗೊಂಡಿವೆ. ಅವಿಭಜಿತ ಧಾರವಾಡ ಜಿಲ್ಲೆಯ ಒಟ್ಟು ೧೯೧೫ ಗ್ರಾಮಗಳಲ್ಲಿ ಶಾಸನಗಳಿದ್ದು ೫೪೬ ಗ್ರಾಮಗಳಲ್ಲಿ ಈ ಗ್ರಾಮಗಳಲ್ಲಿರುವ ಶಾಸನಗಳ ಒಟ್ಟು ಸಂಖ್ಯ ೨೧೩೯. ಇವುಗಳಲ್ಲಿ ಪ್ರಕಟಿತ ಶಾಸನಗಳ ಸಂಖ್ಯೆ ೧೧೯೬. ಇನ್ನು ಪ್ರಕಟವಾದುವುಗಳು ೯೪೭. ಅಂತೆಯೆ ಬಿಜಾಪುರ ಒಟ್ಟು ೧೩೦೧ ಗ್ರಾಮಗಳಲ್ಲಿ ಶಾಸನಗಳಿದ್ದ ಗ್ರಾಮಗಳು ೨೫೨. ಈ ಗ್ರಾಮಗಳಲ್ಲಿರುವ ಶಾಸನಗಳ ಸಂಖ್ಯೆ ೧೦೬೧. ಇವುಗಳಲ್ಲಿ ಪ್ರಕಟವಾದವು ೧೪೩. ಈ ಅಂಕಿಸಂಖ್ಯೆಗಳನ್ನು ಒಳಗೊಂಡ ಕೋಷ್ಟಕಗಳನ್ನು (ಎರಡೂ ಜಿಲ್ಲೆಗಳಿಗೆ ಸಂಬಂಧಿಸಿದ) ಪ್ರಸ್ತುತ ಗ್ರಂಥಗಳ 'ಪ್ರಸ್ತಾವನೆ'ಯಲ್ಲಿ ಒದಗಿಸಲಾಗಿದೆ. ಧಾರವಾಡ ಜಿಲ್ಲೆಯಲ್ಲಿ ಒಟ್ಟು ೧೬ ತಾಲೂಕುಗಳಲ್ಲಿ ಶಾಸನವಿರುವ ಗ್ರಾಮಗಳನ್ನು, ಬಿಜಾಪೂರ ಜಿಲ್ಲೆಯಲ್ಲಿ ಒಟ್ಟು ೧೧ ತಾಲೂಕುಗಳಲ್ಲಿ ಶಾಸನವಿರುವ ಗ್ರಾಮಗಳನ್ನು ಪರಿವೀಕ್ಷಿಸುವ ಮೂಲಕ ಪ್ರಸ್ತುತ ಎರಡೂ ಜಿಲ್ಲೆಗಳ ಪ್ರಕಟಿತ , ಅಪ್ರಕಟಿತ ಶಾಸನಗಳ ವಿವರಣಾತ್ಮಕ 'ಸೂಚಿ'ಗಳು ಇವಾಗಿದ್ದು, ಕರ್ನಾಟಕದ ಧಾರ್ಮಿಕ, ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಚರಿತ್ರೆಯನ್ನು ಮರುರೂಪಿಸಿಕೊಳ್ಳುವುದರಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಶಾಸನ ದೊರೆತ ಗ್ರಾಮ, ಸ್ಥಳ, ಬರೆಯಿಸಿದ ಅರಸ, ಶಾಸನಗಳ ಸ್ವರೂಪ, ಉದ್ದೇಶ, ಹಿನ್ನೆಲೆ, ಭಾಷೆ ಇತ್ಯಾದಿ ವಿವರಗಳನ್ನು ಇಲ್ಲಿ ನೋಡಬಹುದಾಗಿದೆ.