ಶಾಸನ ಸಾಹಿತ್ಯ ಪುಸ್ತಕಗಳು

ಶಾಸನಗಳಲ್ಲಿ ಶಿವಶರಣರು:
shasanagalalli shivasharanaruಸುಮಾರು ನೂರು ಜನ ಶರಣರ ಚರಿತ್ರೆಯನ್ನು ಒಳಗೊಂಡಿರುವ ಶಾಸನಗಳ ಪಠ್ಯವನ್ನು ತಿಳಿಗನ್ನಡಕ್ಕೆ ಲಿಪ್ಯಂತರಗೊಳಿಸಿ ಅವುಗಳ ವಿಷಯವನ್ನು ಸರಳಗನ್ನಡದಲ್ಲಿ ನಿರೂಪಿಸಿರುವ ಅಪರೂಪದ ಈ ಕೃತಿಗೆ "...ವೀರಶೈವದ ಇತಿಹಾಸ ಸಂಶೋಧನೆಗೆ ನಾಂದಿಯಾಗಿ ನಿಲ್ಲುವ ಶಾಶ್ವತ ಬೆಲೆಯಿದೆ". ಈ ಗ್ರಂಥದ ಪ್ರವೇಶಿಕೆಯ ನೆಪದಲ್ಲಿ ಡಾ.ಕಲಬುರ್ಗಿಯವರು ಕರ್ನಾಟಕದ ಶಾಸನಗಳ ಉಗಮ, ಇತಿಹಾಸ ಸ್ವರೂಪ, ವೈವಿಧ್ಯತೆ ಕುರಿತು ಶೋಧಿಸಿಕೊಟ್ಟಿರುವ ವಿಚಾರಗಳು ಆ ಕ್ಷೇತ್ರದ ಅಭ್ಯಸಿಗಳಿಗೆ ದಿಕ್ಸೂಚಿಯಂತಿವೆ. ಇಲ್ಲಿ 'ಕರ್ನಾಟಕದ ಶಾಸನಗಳು', 'ಶರಣರ ಚರಿತ್ರೆ- ಶಾಸನಗಳ ಮಹತ್ವ', 'ಶರಣರ ದೃಷ್ಟಿ-ಶಾಸನಗಳ ಸೃಷ್ಟಿ' ಎಂಬ ಮೂರು ವಿಭೇದಗಳಿದ್ದು, ಪ್ರಸ್ತುತ ಶಾಸನಗಳನ್ನು ಪರಿಭಾಷಿಸುವ ಕ್ರಮದ ಬಗ್ಗೆ ಸೂಕ್ತ ನಿರ್ದೇಶನ ನೀಡುತ್ತವೆ. ಈ ಗ್ರಂಥದ ಪಠ್ಯವು ಬಸವಪೂರ್ವ ಯುಗ, ಬಸವಯುಗ, ಬಸವೋತ್ತರ ಯುಗಗಳನ್ನು ಆವರಿಸಿಕೊಂಡಿದ್ದು,  ಈ ಮೂರು ಯುಗದಲ್ಲಿ ಮೊದಲು, ಶೈವಧರ್ಮದ ಉತ್ಪಾದನಕ್ಕೆ ಕಾರಣರಾದವರನ್ನು ತ್ರಿಷಷ್ಟಿ ಪುರಾತನರೆಂದು, ಈ ಶೈವದ ಉಗ್ರಾಚರಣೆ ಮತ್ತು ಉಗ್ರಭಕ್ತಿಯನ್ನು ಖಂಡಿಸಿ, 'ಸ್ಥಾವರ'ಸಂಸ್ಕೃತಿಯ ಶೋಷಣೆಯ ಎದುರು ಸೌಮ್ಯಭಕ್ತಿ, ಲಿಂಗ, ವರ್ಗ, ವರ್ಣಭೇದವಿಲ್ಲದ ಸಮಾನತೆ ಮತ್ತು ಸಾಮಾಜಿಕ ನ್ಯಾಯಕೇಂದ್ರಿತವಾದ 'ಜಂಗಮ ಸಂಸ್ಕೃತಿ'ಯ ಪ್ರತಿಪಾದಕರನ್ನು ಬಸವಯುಹಗದ ಶರಣರೆಂದು, ತರುವಾಯದ ಕಾಲಘಟ್ಟದಲ್ಲಿ ಶೈವ-ವೀರಶೈವ ಎರೆಡೂ ಲಕ್ಷಣಗಳನ್ನು ಮೈಗೂಡಿಸಿಕೊಂಡು "ಹತ್ತೊದಿಕ್ಕಿಗೆ" ಧರ್ಮಪ್ರಸಾರ ಕೈಗೊಂಡವರನ್ನು ಬಸವೋತ್ತರ ಯುಗದ ಶಿವಶರಣರೆಂದು ಸ್ಪಷ್ಟವಾಗಿ ಗುರುತಿಸಿ ಇಡೀ ಪರಂಪರೆಯನ್ನು ತುಂಬ ವ್ಯವಸ್ಥಿತವಾಗಿ ಮಂಡಿಸುತ್ತದೆ. ಈ ಶಾಸನೋಕ್ತ ಶಿವಶರಣರ ಪಠ್ಯಗಳನ್ನೇ ಹರಿಹರ ಮಹಾಕವಿ ತನ್ನ ರಗಳೆಗಳ ಕಥಾನಕ ಪಠ್ಯಗಳಾಗಿ ರೂಪಿಸಿಕೊಂಡಿರಿವುದು ತಿಳಿಯುತ್ತದೆ.

   


 

ಕನ್ನಡ ಶಾಸನ ಸಂಪದ:
shasan_4ಕರ್ನಾಟಕ ಪ್ರಾಚೀನ ಸಂಸ್ಕೃತಿಯನ್ನು ಸಾಕ್ಷಿದಿಯಾಗಿ ಪ್ರಾಕೃತ, ಸಂಸ್ಕೃತ, ಕನ್ನಡ, ತೆಲಗು, ಮಲೆಯಾಳ, ಉರ್ದು ಭಾಷೆಗಳಲ್ಲಿ ಈ ವರೆಗೆ ಲಭ್ಯವಾದ ಸುಮಾರು ೨೫೦೦೦ ಶಾಸನಗಳನ್ನು ಪಾಶ್ಚಾತ್ಯ ಹಾಗೂ ಪೌರಾತ್ಯ ವಿದ್ವಾಂಸರು ಸಂಗ್ರಹಿಸಿದ್ದಾರೆ. ಈ ಸಂಗ್ರಹದಲ್ಲಿ ಸೇರಿರುವ ಕನ್ನಡ ಶಾಸನಗಳ ಅಭ್ಯಾಸ, ಕನ್ನಡ ಎಂ.ಎ. ಓದುವ ವಿಧ್ಯಾರ್ಥಿಗಳಿಗೆ ಇರಬೇಕೆಂಬ ಉದ್ದೇಶದಿಂದ ಪೂರ್ವದ ಹಳಗನ್ನಡ, ಹಳಗನ್ನಡ, ನಡುಗನ್ನಡ, ಕಾಲಘಟ್ಟ ಮತ್ತು ಜೈನ, ಬ್ರಾಹ್ಮಣ, ವೀರಶೈವ ಧರ್ಮಗಳನ್ನು ಪ್ರತಿನಿಧಿಸುವಂತೆ ಪ್ರಸ್ತುತ ಕೃತಿಯಲ್ಲಿ ೩೨ ಕನ್ನಡ ಶಾಸನಗಳನ್ನು ಸಂಗ್ರಹಿಸಲಾಗಿದೆ. ಅಭ್ಯಾಸಿಗಳಿಗೆ ಅನುಕುಲವಾಗಲಿ ಎಂಬ ಉದ್ದೇಶದಿಂದ ಅನುಬಂಧದಲ್ಲಿ ಶಾಸನಗಳ ಮೂಲ ಪಠ್ಯ ವಿಷಯವನ್ನು ಹಾಗೂ ವಿವರಣಾತ್ಮಕ ಪದಕೋಶವನ್ನು ಒದಕಿಸುವದರಿಂದ 'ಉದ್ದೇಶ'ಫಲಿಸುವಂತಾಗಿದೆ.
ರನ್ನ, ಜನ್ನ, ಮಧುರ, ಕವಿರಾಜರಾಜ, ಸೇನಬೋವ, ಗುಣವರ್ಮ, ಬೋಕಿಮಯ್ಯ, ಕೇಶಿರಾಜ, ಚಮೊಪ ಮೊದಲಾದ ಕವಿಗಳು ಶಾಸನಗಳನ್ನು ಬರೆದು ಶಾಸನ ಕವಿಗಳ ಪಟ್ಟಿಯಲ್ಲಿ ಸೇರಿರುವದನ್ನು ವಿಶೇಷವಾಗಿ ಇಲ್ಲಿ ಎತ್ತಿ ಹೆಳಲಾಗಿದೆ. ಈ ಕೃತಿಯನ್ನು ಕಲಬುರ್ಗಿಯವರು, ಗುರುಗಳಾದ ಡಾ. ಆರ್. ಹಿರೇಮಠ ಅವರೊಂದಿಗೆ ಸಂಪಾದಿಸಿದ್ದಾರೆ.