ಅರಟಾಳ ರುದ್ರಗೌಡರ ಚರಿತ್ರೆ

ಅರಟಾಳ ರುದ್ರಗೌಡರ ಚರಿತ್ರೆ

ಅರಟಾಳ ರುದ್ರಗೌಡರ ಚರಿತ್ರೆ:

artala rudragouda charitre

ಲೋಕಮಾನ್ಯಟಿಳಕ, ಮಹಾತ್ಮಾ ಗಾಂಧಿ, ಛತ್ರಪತಿ ಶಾಹುಮಹಾರಾಜ, ಅಂಬೇಡ್ಕರ ಇವರಿಗಿಂತ ವಯಸ್ಸಿನಲ್ಲಿ ಹಿರಿಯರಾಗಿದ್ದ ಅರಟಾಳ ರುದ್ರಗೌಡರು(ಜನನ-೧೮೫೧) ಉತ್ತರ ಕರ್ನಾಟಕದ ಸಾಮಾಜಿಕ ಹೋರಾಟಗಾರರಲ್ಲಿ ಮೊದಲಿಗರು. "The entire credit of eradicating corruption from the Revenue department, goes to Rao Bahaddur R.C.Aratal" ಎಂದು ಸರಕಾರದ ರೆವಿನ್ಯೂ ಎಡ್ಮಿನಿಸ್ತ್ರೇಟಿವ್ ರಿಪೋರ್ಟನಲ್ಲಿ ದಾಖಲಾಗಿದೆ. "ಕೇವಲ ಮ್ಯಾಟ್ರಿಕ್ (ಈಗಿನ ಎಸ್.ಎಸ್.ಎಲ್.ಸಿ)ವರೆಗೆ ಓದಿ ಹಳ್ಳಿಯ ಗೌಡಕಿಯಿಂದ ಆರಂಭಿಸಿ ಡೆಪ್ಯುಟಿ ಕಲೆಕ್ಟರ್ ಹುದ್ದೆಯ ವರೆಗೆ ಏರಿದ ರುದ್ರಗೌಡರ ಮನೋಧರ್ಮ ವ್ಯಕ್ತಿಕೇಂದ್ರಿತಲ್ಲ ಸಮಾಜಕೇಂದ್ರಿತ "ಎನ್ನುವ ಎಂ.ಎಂ.ಕಲಬುರ್ಗಿಯವರ ಮಾತು ಈ ಚರಿತ್ರೆಯುದ್ದಕ್ಕೂ ನಿಜವಾಗುತ್ತ ಹೋಗುತ್ತದೆ. ಅರಟಾಳರು ದಿನಚರಿ ಬರೆಯುವ ರೂಢಿಯಿಟ್ಟುಕೊಂಡಿದ್ದರು. ಈ ಟಿಪ್ಪಣಿ ಮತ್ತು ಅವರ ಒಡನಾಟದ ನೆನಪು, ಮತ್ತು ಅವರ ಸಂದರ್ಶನಗಳನ್ನು ಬಳಸಿಕೊಂಡು ಶ್ರೀ ಬಸವಾರ್ಯ (ಬಸವಯ್ಯ ಚನ್ನಬಸವಯ್ಯ ಹಿರೇಮಠ ಊರ್ಪ ಕಂಬಿ ಸ್ಕೂಲ್ ಮಾಸ್ತರ)ರು ಸನ್ ೧೯೦೭ ರಿಂದ ೧೯೨೧ರ ವರೆಗೆ (ಸು.೧೫ ವರ್ಷ) ಎರೆಡು ದೊಡ್ಡ ಆಕಾರದ ವಹಿಗಳಲ್ಲಿದ್ದ ಹಸ್ತಪ್ರತಿಗಳನ್ನು ತುಂಬಾ ಕಷ್ಟಪಟ್ಟು ಪರಿಷ್ಕರಿಸಿ ಈ 'ಅರಟಾಳ ರುದ್ರಗೌಡರ ಚರಿತ್ರೆ'ಯನ್ನು ತುಂಬ ವ್ಯವಸ್ತಿತವಾಗಿ ರೂಪಿಸಿ ಪ್ರಕಟಿಸಿದವರು ಎಂ.ಎಂ.ಕಲಬುರ್ಗಿಯವರು. ಅವರೇ ಹೇಳುವಂತೆ "ಇದರ ಮುಖ್ಯ ಲಕ್ಷಣವೆಂದರೆ ವ್ಯಕ್ತಿನಿಷ್ಠ ಜೀವನಚರಿತ್ರೆಗೆ ಸೀಮಿತವಾಗದೆ, ಸಮಾಜನಿಷ್ಠೆ, ಅದರಲ್ಲೂ ಲಿಂಗಾಯತನಿಷ್ಠೆ ಜೀವನ ಚರಿತ್ರೆಯಾಗಿ ಇದು ವಿಸ್ತಾರ ಪಡೆದಿದೆ. ಹೀಗಾಗಿ ಇದು ಅರ್ದಶತಮಾನದ ಉತ್ತರ ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯೆಂಬಂತೆ ಆಕಾರ ಪಡೆದಿದೆ" (ಯುಗದ ಉತ್ಸಾಹ,). ಈ ಚರಿತ್ರೆಯಲ್ಲಿ ೨೩ ಭಾಗಗಳನ್ನು ಕಲ್ಪಿಸಿಕೊಳ್ಳಲಾಗಿದ್ದು, ಒಂದೊಂದು ಭಾಗವೂ ಬೇರೆಯವರ ಬದುಕಿಗೆ ಪ್ರೇರಣಾದಾಯಕವಾಗಿವೆ.

ರಾಷ್ಟ್ರಧರ್ಮದ್ರಷ್ಟಾರ ಹಡೇ೯ಕರ ಮಂಜಪ್ಪ, ಸಂಪುಟ-೨:

ಕರ್ನಾಟಕ ಸರಕಾರವು ೧೯೮೯ರಲ್ಲಿ 'ಹರ್ಡೇಕರ ಮಂಜಪ್ಪ ಜನ್ಮಶತಮಾನೋತ್ಸವ ವರ್ಷ' ಆಚರಿಸ ಬಯಸಿ, ಅದರಂಗವಾಗಿ ಮಂಜಪ್ಪನವರ ಕುರಿತು ಗೌರವಗ್ರಂಥ ಸಿದ್ಧಪಡಿಸುವ ಹೊಣೆಯನ್ನು ಡಾ. ಎಂ.ಎಂ.ಕಲಬುರ್ಗಿಯವರಿಗೆ ವಹಿಸಿತು. hardekar manjappaಆ ಸಂದರ್ಭದಲ್ಲಿ ಅವರು ಡಾ. ಸಿ.ಚೆ.ನಂದಿಮಠ, ಕುವೆಂಪು, ಡಾ.ಗ.ಸ.ಹಾಲಪ್ಪ, ಶಿವಾನಂದ ಗುಬ್ಬಣ್ಣವರ ಮುಂತಾದವರು ಮಂಜಪ್ಪನವರನ್ನು ಕುರಿತು ಪ್ರಕಟಿಸಿದ್ದ ಗ್ರಂಥಗಳನ್ನು ಆಧರಿಸಿ "ಕರ್ನಾಟಕದ ಗಾಂಧಿ ಹರ್ಡೇಕರ ಮಂಜಪ್ಪ" ಎನ್ನುವ ೪೫೦ ಪುಟಗಳ ಗ್ರಂಥವನ್ನು ಅತ್ಯಂತ ಶ್ರದ್ಧೆಯಿಂದ ಸಂಪಾದಿಸಿಕೊಟ್ಟರು. ಆಗ ಅವರು ಅದನ್ನು ಮೊದಲು ಸಂಪುಟವೆಂದು ಕರೆದು, ಮಂಜಪ್ಪನವರ ಕೃತಿಸಂಖ್ಯೆಗಳ ನಿರ್ಣಯ, ಆವೃತ್ತಿಯಿಂದ ಆವೃತ್ತಿಗೆ ವ್ಯತ್ಯಾಸಗೊಂಡಿರುವ ಕೃತಿನಾಮ, ಬೇರೊಬ್ಬರ ಕೃತಿಗಳನ್ನು ಮಂಜಪ್ಪನವರ ಕೃತಿಗಳನ್ನು ತಪ್ಪು ಭಾವಿಸಿರುವುದು- ಇವೇ ಮೊದಲಾದ ಸಮಸ್ಯಗಳ ಪರಿಹಾರಕ್ಕಾಗಿ ಮತ್ತೊಂದು ಸಂಪುಟವನ್ನು ಸಂಪಾದಿಸಲು ಸಿರ್ಧರಿಸಿದರು, ಅದರ ಫಲವೇ ಪ್ರಸ್ತುತ 'ರಾಷ್ಟ್ರಧರ್ಮದ್ರಷ್ಟಾರ ಹರ್ಡೇಕರ ಮಂಜಪ್ಪ ಸಂಪುಟ-೨'. ಈ ಬೃಹದ್ಗ್ರಂಥ ೧. ಆತ್ಮಚರಿತ್ರೆ ೨. ರಾಷ್ತ್ರೀಯ ಸಾಹಿತ್ಯ ೩. ಸಾಮಾಜಿಕ ಸಾಹಿತ್ಯ ೪. ಮಕ್ಕಳ ಸಾಹಿತ್ಯ ೫ ಸೃಜನ -ಸಂಪಾದನಾ ಸಾಹಿತ್ಯ ಎಂಬ ಐದು ಭಾಗಗಳನ್ನು ಮೂರು ಅನುಬಂಧಗಳನ್ನು ಒಳಗೊಂಡಿದೆ. ಹರ್ಡೇಕರ ಮಂಜಪ್ಪನವರ ಜೀವನ ಮತ್ತು ವಿವಿಧ ಮುಖದ ಸಾಧನೆಯನ್ನು ತಿಳಿಯಬೇಕೆನ್ನುವವರಿಗೆ ಇದೊಂದು ಅತ್ಯಂತ ಮಹತ್ವದ ಗ್ರಂಥವೆನಿಸಿದೆ. (ಪ್ರ. ಲಿಂಗಾಯತ ಅಧ್ಯಯನ ಸಂಸ್ಥೆ ಶ್ರೀ ಜಗದ್ಗುರು ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ, ಗದಗ- ೨೦೦೬).

ಹಾಲಭಾವಿ ವೀರಭದ್ರಪ್ಪನವರ ಆತ್ಮಚರಿತ್ರೆ:

halbhavi veerabhadra charitre