ಕನ್ನಡ ಗ್ರಂಥಸಂಪಾದನ ಶಾಸ್ತ್ರ

ಶಾಸ್ತ್ರ ಸಾಹಿತ್ಯ:

ಕನ್ನಡ ಸಂಶೋಧನಶಾಸ್ತ್ರ:

kannada samshodhana shatra

ಪಶ್ಚಿಮದಿಂದ ೧೯ನೆಯ ಶತಮಾನದಲ್ಲಿ ಭಾರತವನ್ನು ಪ್ರವೇಶಿಸಿದ ಈ 'ಜ್ಞಾನಶಿಸ್ತು' ಭಾಷಾಶಾಸ್ತ್ರ, ಅರ್ಥಶಾಸ್ತ್ರ, ಭೌತಶಾಸ್ತ್ರಗಳಂತೆ ಒಂದು ಶಾಖೆಯಲ್ಲ. ಇಂಥ ಎಲ್ಲ ಶಾಖೆಗಳ ಅರ್ಥಮಾಡಿಕೊಳ್ಳುವಿಕೆ, ಮುಂದುವರಿಕೆಗಳ ತತ್ವ ಮತ್ತು ವಿಧಾನಗಳನ್ನು ಪ್ರತಿಪಾದಿಸುವ ಒಂದು ಶಾಖೆಯಾಗಿದೆ- ಎನ್ನುತ್ತಾರೆ ಡಾ.ಎಂ.ಎಂ.ಕಲಬುರ್ಗಿಯವರು. ಪಾಶ್ಚಾತ್ಯ ಸಂಶೋಧನ ವಿಧಾನಗಳನ್ನು ಅನುಸರಿಸಿ ಸಂಶೋಧನೆ ಕೈಗೊಂಡು ಕಲಾನಿಕಾಯದ ಭಾಷೆ, ಸಾಹಿತ್ಯ, ಸಂಸ್ಕೃತಿ, ಜಾನಪದ, ಶಾಸನ ಕ್ಷೇತ್ರಗಳನ್ನು ನಿರ್ಲಕ್ಷಿಸುತ್ತ ಬಂದ 'ಆವಿಷ್ಕರಣಾತ್ಮಕ ಸಂಶೋಧನ ಶಾಸ್ತ್ರ'ಕ್ಕೆ ಪ್ರತಿಯಾಗಿ 'ಅನ್ವೇಷಣಾತ್ಮಕ ಸಂಶೋಧನಶಾಸ್ತ್ರ'ದ ಅಗತ್ಯತೆಯನ್ನು ಪೂರೈಸಲು ಇವರು ಪ್ರಸ್ತುತ ಕೃತಿಯನ್ನು ರಚಿಸಿದ್ದಾರೆ. ೧. ಸಂಶೋಧನೆ-ಸಂಶೋಧಕ ೨. ಆಕರಗಳು ೩. ಸಂಶೋಧನ: ಕ್ರಿಯೆ-ಪ್ರಕಾರ ೪. ಪ್ರಬಂಧ ೫. ಪೂರಕ ವಿಚಾರಗಳು ೬. ಕನ್ನಡ ಸಂಶೋಧನೆ ಎನ್ನುವ ಉಪಶೀರ್ಷಿಕೆಗಳ ಅಡಿಯಲ್ಲಿ ಅತ್ಯಂತ ವ್ಯವಸ್ಥಿತವಾಗಿ, ಅಷ್ಟೇ ಸ್ಪಷ್ಟವಾಗಿ ವಿಷಯಗಳನ್ನು ಮಂಡಿಸುವ ಈ ಕೃತಿ, ಕನ್ನಡ ಸಂಶೋಧನ ಕ್ಷೇತ್ರ ಮತ್ತು ಸಂಶೋಧಕರು ಬಯಸುವ ಮಾರ್ಗದರ್ಶಕ ಸೂತ್ರಗಳನ್ನು ತೆರೆದಿಡುತ್ತದೆ. (ಪ್ರ. ೧೯೯೨ರಲ್ಲಿ ಧಾರವಾಡದ ಸೌಜನ್ಯ ಪ್ರಕಾಶನ, ೧೯೯೫ರಲ್ಲಿ ಮೈಸೂರಿನ ಚೇತನ ಬುಕ್ ಹೌಸ್ ೨೦೦೨ ಮತ್ತು ೨೦೦೯ರಲ್ಲಿ ಬೆಂಗಳೂರಿನ ಸಪ್ನ ಬುಕ್ ಹೌಸ್ ಈ ಕೃತಿಯನ್ನು ಪ್ರಕಟಿಸಿದ್ದು ಈಗಾಗಲೆ ಇದು ನಾಲ್ಕು ಆವೃತ್ತಿ ಕಂಡಿದೆ).