ವೀರಶೈವ ಇತಿಹಾಸ ಮತ್ತು ಭೂಗೋಲ

ವೀರಶೈವ ಇತಿಹಾಸ ಮತ್ತು ಭೂಗೋಲ:

virashiva itihas _bhugola

ವೀರಶೈವ ಮತ್ತು ಲಿಂಗಾಯತ ಪದಗಳನ್ನು ಪರ್ಯಾಯ ಪದಗಳೆಂಬಂತೆ ಓದಿಕೊಳ್ಳುತ್ತ ಬರಲಾಗಿದೆ. ಆದರೆ ತಾತ್ವಿಕವಾಗಿ ಅವು ಭಿನ್ನ ಎನ್ನುವುದನ್ನು ಸ್ಪಷ್ಟಪಡಿಸಲು ಡಾ. ಕಲಬುರ್ಗಿಯವರು ಕಾವ್ಯ, ಶಾಸ್ತ್ರ, ಶಾಸನ, ಶಿವಶರಣರ ವಚನ, ಶಿವಕವಿಗಳ ರಗಳೆ, ಷಟ್ಪದಿ, ಚಂಪೂ ಮುಂತಾದ ಆಕರಗಳನ್ನು ಶೋಧಿಸಿ ಪ್ರಸ್ತುತ ಕೃತಿಯನ್ನು ರಚಿಸಿದ್ದಾರೆ. ಇಲ್ಲಿ ಮೂಲದ 'ಲಿಂಗಾಯತ'ವನ್ನು ಬದಿಗೊತ್ತಿ ಯಾವಾಗ ಯಾವ ಕಾರಣಕ್ಕಾಗಿ 'ವೀರಶೈವ' ತನ್ನ ಪ್ರಾಬಲ್ಯವನ್ನು ಮೆರೆಯತೊಡಗಿತು ಎನ್ನುವುದರತ್ತ ಗಮನಸೆಳೆದಿದ್ದಾರೆ. ೧. ವೀರಶೈವ ಪದ- ಐತಿಹಾಸಿಕ ಬೆಳವಣಿಗೆ ೨. ವೀರಶೈವ ಪದ- ಭೌಗೋಳಿಕ ಪ್ರಸಾರ ಎನ್ನುವ ಎರಡೇ ಎರಡು ಭಾಗಗಳಲ್ಲಿ ಉದ್ದೇಶಿತ ವಿಚಾರಗಳನ್ನು ಮಂಡಿಸಿದ್ದಾರೆ. (ಪ್ರ. ಲಿಂಗಾಯತ ಅಧ್ಯಯನ ಅಕಾಡಮಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ-೨೦೦೫)