ಶಾಸನಸೂಕ್ತಿ ಸುಧಾಣ೯ವ

ಶಾಸನ ಸಾಹಿತ್ಯ:

ಶಾಸನಸೂಕ್ತಿ  ಸುಧಾಣ೯ವ:

shasan_1

 

 

 

 

 

 

ಕನ್ನಡ ಶಾಸನ ಸಾಹಿತ್ಯ:

shasan_2

 

 

 

 

 

 

ಶಾಸನಗಳಲ್ಲಿ ಶಿವಶರಣರು:

shasan_3

ಸುಮಾರು ನೂರು ಜನ ಶರಣರ ಚರಿತ್ರೆಯನ್ನು ಒಳಗೊಂಡಿರುವ ಶಾಸನಗಳ ಪಠ್ಯವನ್ನು ತಿಳಿಗನ್ನಡಕ್ಕೆ ಲಿಪ್ಯಂತರಗೊಳಿಸಿ ಅವುಗಳ ವಿಷಯವನ್ನು ಸರಳಗನ್ನಡದಲ್ಲಿ ನಿರೂಪಿಸಿರುವ ಅಪರೂಪದ ಕೃತಿ ಇದು. "...ವೀರಶೈವದ ಇತಿಹಾಸ ಸಂಶೋಧನೆಗೆ ನಾಂದಿಯಾಗಿ ನಿಲ್ಲುವ ಶಾಶ್ವತ ಬೆಲೆ ಇದಕ್ಕಿದೆ". ಈ ಗ್ರಂಥದ ಪ್ರವೇಶಿಕೆಯಲ್ಲಿ ಡಾ. ಕಲಬುರ್ಗಿಯವರು ಕರ್ನಾಟಕದ ಶಾಸನಗಳ ಉಗಮ, ಇತಿಹಾಸ ಸ್ವರೂಪ, ವೈವಿಧ್ಯತೆ ಕುರಿತು ಶೋಧಿಸಿಕೊಟ್ಟಿರುವ ವಿಚಾರಗಳು ಆ ಕ್ಷೇತ್ರದ ಅಭ್ಯಾಸಿಗಳಿಗೆ ದಿಕ್ಸೂಚಿಯಂತಿವೆ. ಇಲ್ಲಿ 'ಕರ್ನಾಟಕದ ಶಾಸನಗಳು', 'ಶರಣರ ಚರಿತ್ರೆ-ಶಾಸನಗಳ ಮಹತ್ವ', 'ಶರಣರ ದೃಷ್ಟಿ-ಶಾಸನಗಳ ಸೃಷ್ಟಿ' ಎಂಬ ಮೂರು ವಿಭೇದಗಳಿದ್ದು, ಪ್ರಸ್ತುತ ಶಾಸನಗಳನ್ನು ಪರಿಭಾವಿಸುವ ಕ್ರಮದ ಬಗ್ಗೆ ಸೂಕ್ತ ನಿರ್ದೇಶನ ನೀಡುತ್ತವೆ. ಈ ಗ್ರಂಥದ ಪಠ್ಯವು ಬಸವಪೂರ್ವಯುಗ, ಬಸವಯುಗ, ಬಸವೋತ್ತರಯುಗಗಳನ್ನು ಆವರಿಸಿಕೊಂಡಿದ್ದು, ಈ ಮೂರು ಯುಗದಲ್ಲಿ ಮೊದಲು, ಶೈವಧರ್ಮದ ಉತ್ಪಾದನಕ್ಕೆ ಕಾರಣರಾದವರನ್ನು ತ್ರಿಷಷ್ಟಿ ಪುರಾತನರೆಂದು, ಈ ಶೈವದ ಉಗ್ರಾಚರಣೆ ಮತ್ತು ಉಗ್ರಭಕ್ತಿಯನ್ನು ಖಂಡಿಸಿ, 'ಸ್ಥಾವರ'ಸಂಸ್ಕೃತಿಯ ಶೋಷಣೆಯ ಎದುರು ಸೌಮ್ಯಭಕ್ತಿ, ಲಿಂಗ, ವರ್ಗ, ವರ್ಣಭೇದವಿಲ್ಲದ ಸಮಾನತೆ ಮತ್ತು ಸಾಮಾಜಿಕ ನ್ಯಾಯಕೇಂದ್ರಿತವಾದ 'ಜಂಗಮ ಸಂಸ್ಕೃತಿ'ಯ ಪ್ರತಿಪಾದಕರನ್ನು ಬಸವಯುಗದ ಶರಣರೆಂದು, ತರುವಾಯದ ಕಾಲಘಟ್ಟದಲ್ಲಿ ಶೈವ-ವೀರಶೈವ ಎರೆಡೂ ಲಕ್ಷಣಗಳನ್ನು ಮೈಗೂಡಿಸಿಕೊಂಡು "ಹತ್ತೂದಿಕ್ಕಿಗೆ" ಧರ್ಮಪ್ರಸಾರ ಕೈಗೊಂಡವರನ್ನು ಬಸವೋತ್ತರ ಯುಗದ ಶಿವಶರಣರೆಂದು ಸ್ಪಷ್ಟವಾಗಿ ಗುರುತಿಸಿ ಇಡೀ ಪರಂಪರೆಯನ್ನು ತುಂಬ ವ್ಯವಸ್ಥಿತವಾಗಿ ಮಂಡಿಸುತ್ತದೆ. ಈ ಶಾಸನೋಕ್ತ ಶಿವಶರಣರ ಪಠ್ಯಗಳನ್ನೇ ಹರಿಹರ ಮಹಾಕವಿ ತನ್ನ ರಗಳೆಗಳ ಕಥಾನಕ ಪಠ್ಯಗಳಾಗಿ ರೂಪಿಸಿಕೊಂಡಿರಿವುದು ತಿಳಿಯುತ್ತದೆ.