ಮಾರ್ಗ ಸಂಪುಟಗಳು

ಮಾರ್ಗ ಸಂಪುಟಗಳು:

ಮಾರ್ಗ ಶಬ್ದಕ್ಕೆ ಅನ್ವೇಷಣೆ, ದಾರಿ, ಪದ್ಧತಿಯೆಂದು ಮೂರು ಅರ್ಥಗಳಿವೆ. ಸಾಹಿತ್ಯ ಕ್ಷೇತ್ರದಲ್ಲಿ ಈ ಮೂರು ಬಗೆಯ ಕಾರ್ಯಮಾಡಿರುವ ಕಲಬುರ್ಗಿಯವರು, ತಮ್ಮ ಎಲ್ಲ ಸಂಶೋಧನ ಪ್ರಭಂಧಗಳ ಸಂಕಲನಗಳಾಗಿರುವ ಎಂಟೂ ಸಂಪುಟಗಳಿಗೆ ಇಟ್ಟಿರುವ ಹೆಸರು 'ಮಾರ್ಗ'. ಇವರ ಪಿಎಚ್.ಡಿ. ಪ್ರಬಂಧದ ಹೆಸರೂ 'ಕವಿರಾಜ ಮಾರ್ಗ ಪರಿಸರದ ಕನ್ನಡ ಸಾಹಿತ್ಯ'. ಇವರಿಗೆ ಅರ್ಪಿಸಿರುವ ಅಭಿನಂದನ ಗ್ರಥದ ಹೆಸರೂ 'ಮಹಾಮಾರ್ಗ'. ಇವರು ಹುಟ್ಟಿದ್ದು ಕೂಡಾ "ಮಾರ್ಗಶೀರ್ಷ ಮಾಸದಲ್ಲಿ". ಈ "ಮಾರ್ಗಪ್ರಜ್ಞೆ" ಇವರನ್ನು 'ಮಹಾಮಾರ್ಗದ ಪಥಿಕರನ್ನಾಗಿ' ರೂಪಿಸಿತು. ಕನ್ನಡ ಸೃಜನಸಾಹಿತ್ಯವು ನವೋದಯ, ನವ್ಯ ನವ್ಯೋತ್ತರವೆಂಬ ಘಟ್ಟಗಳನ್ನು ರೂಪಿಸುತ್ತ ಬಂದ ಹಾಗೆ, ಕನ್ನಡ ಸಂಶೋಧನ ಸಾಹಿತ್ಯವೂ ರೂಪಿಸಿಕೊಳ್ಳುತ್ತ ಬಂದ ಸಾಮಗ್ರಿ ಶೋಧನಿಷ್ಠ, ವಿಶ್ಲೇಷಣನಿಷ್ಠ, ವ್ಯಾಕ್ಯನನಿಷ್ಠ ಘಟ್ಟಗಳಲ್ಲಿ ಇವರು ದುಡಿಯುತ್ತ ಬಂದರು. ಎರಡನೆಯದಾಗಿ ಕನ್ನಡ ಸಂಶೋಧನೆ ಆಗಾಗ ಅಳವಡಿಸಿಕೊಳ್ಳುತ್ತ ಬಂದ ಸಂಸ್ಕೃತಿ, ಶಾಸನ, ಜಾನಪದ, ನಾಮವಿಜ್ಞಾನ ಇತ್ಯಾದಿ ಹೊಸಹೊಸ ಕ್ಷೇತ್ರಗಳಲ್ಲಿಯೂ ಇವರು ತಮ್ಮ ಅಸ್ಮಿತೆ ಪ್ರಕಟಿಸಿದರು. ಹೀಗಾಗಿ ಈ ಎರಡೂ ಆಯಾಮಗಳನ್ನೊಳಗೊಂಡ ಇಲ್ಲಿಯ ೭೦೦ ಪ್ರಬಂಧಗಳು ಕನ್ನಡ ಸಂಶೋಧನೆಯ ಎಲ್ಲ ಮಾದರಿಗಳನ್ನು ಪ್ರತಿನಿಧಿಸುತ್ತಿದ್ದು, ಅವು ಹೀಗಿವೆ.

 ಮಾರ್ಗ-೮  


ಮಾರ್ಗ ಸಂಪುಟಗಳಿಂದ ಆಯ್ದ ನಿರ್ದಿಷ್ಟ ವಿಷಯ ಕುರಿತು ಸಂಶೋಧನ ಲೇಖನಗಳ ಸಂಗ್ರಹ:

  • ಜಂಗಮದಿಂದ ಸ್ಥಾವರಕ್ಕೆ (ಲಿಂಗಾಯತ ಸಂಸ್ಕೃತಿಯನ್ನು ಕುರಿತ ಲೇಖನಗಳ ಸಂಗ್ರಹ ಸಂ. ಮೃತ್ಯುಂಜಯ ರುಮಾಲೆ, ಸಾಯಿಮಣಿ ಪ್ರಕಾಶನ, ಹೊಸಪೇಟೆ,೨೦೦೯).
  • ಹಾಲುಮತ ಅಧ್ಯಯನಗಳು (ಲೇಖನಗಳ ಸಂಗ್ರಹ- ಸಂ. ಡಾ. ಎಫ್.ಟಿ.ಹಳ್ಳಿಕೇರಿ, ವಿಕಾಸ ಪ್ರಕಾಶನ, ಹೊಸಪೇಟೆ, ೨೦೧೦).
  • ನಾಟಕದ ನೆಲೆಗಳು (ರಂಗಭೂಮಿ ಕೇಂದ್ರಿತ ಲೇಖನಗಳು-ಸಂ. ಡಾ. ರಾಮಕೃಷ್ಣ ಮರಾಠೆ, ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೧೧).
  • ಪಂಪನ ಅಧ್ಯಯನಗಳು (ಪಂಪನ ಕುರಿತು ಪ್ರಬಂಧಗಳ ಸಂಕಲನ-ಸಂ ಡಾ. ಎನ್. ಎಸ್. ತಾರಾನಾಥ, ಸಂವಹನ ಪ್ರಕಾಶನ, ಮೈಸೂರು, ೨೦೧೧).
  • ಕನ್ನಡ ಭಾಷಾವಲೋಕನ (ಭಾಷೆ, ವ್ಯಾಕರಣ ಕುರಿತ ಸಂಪ್ರಬಧಗಳ ಸಂಕಲನ, ಸಂ. ಎಸ್.ಎಸ್.ಅಂಗಡಿ, ಸಂವಹನ ಪ್ರಕಾಶನ, ಮೈಸೂರು, ೨೦೧೧).
  • ಛಂದಸ್ಸಿನ ಅಧ್ಯಯನದ ನೆಲೆಗಳು (ಛಂದಸ್ಸಿನ ಅಧ್ಯಯನ ಕುರಿತ ಸಂಪ್ರಬಂಧಗಳು-ಸಂ. ಎಸ್.ಎಸ್.ಅಂಗಡಿ, ಸಂವಹನ ಪ್ರಕಾಶನ, ಮೈಸೂರು, ೨೦೧೨).
  • ಬಸವಣ್ಣ ಮತ್ತು...(ಪ್ರಬಂಧ ಸಂಕಲನ, ಸಂ ಡಾ. ನಂದೀಶ ಹಂಜೆ, ಸಂವಹನ ಪ್ರಕಾಶನ, ಮೈಸೂರು, ೨೦೧೨).
  • ಸಿದ್ಧರಾಮ ಮತ್ತು...(ಪ್ರಬಂಧ ಸಂಕಲನ, ಸಂ. ಡಾ. ಎಸ್.ಕೆ.ಕೊಪ್ಪಾ, ಸಂವಹನ ಪ್ರಕಾಶನ, ಮೈಸೂರು, ೨೦೧೨).
  • ರೇವಣಸಿದ್ಧ ಮತ್ತು...(ಪ್ರಬಂಧ ಸಂಕಲನ, ಸಂ. ಡಾ. ಕೆ. ರವೀಂದ್ರನಾಥ, ಸಂವಹನ ಪ್ರಕಾಶನ, ಮೈಸೂರು, ೨೦೧೨).
  • ಶರಣರು ಮತ್ತು...(ಪ್ರಬಂಧ ಸಂಕಲನ, ಸಂ. ಡಾ. ವ್ಹಿ.ಎಸ್. ಮಾಳಿ, ಸಂವಹನ ಪ್ರಕಾಶನ, ಮೈಸೂರು, ೨೦೧೨).
  • ಗ್ರಂಥಸಂಪಾದನ ವ್ಯಾಸಂಗ (ಪ್ರಬಂಧ ಸಂಕಲನ, ಸಂ. ಡಾ. ವಾಯ್.ಸಿ. ಭಾನುಮತಿ, ಸಂವಹನ ಪ್ರಕಾಶನ, ಮೈಸೂರು, ೨೦೧೨).
  • ಜೈನ ಅಧ್ಯಯನಗಳು (ಡಾ. ಎಂ. ಎಂ.ಕಲಬುರ್ಗಿಯವರ ಸಂಶೋಧನ ಪ್ರಬಂಧಗಳು, ಸಂ. ಡಾ. ಶಾಂತಿನಾಥ ದಿಬ್ಬದ, ಸಂವಹನ ಪ್ರಕಾಶನ, ಮೈಸೂರು,೨೦೧೨).
  • ನಾಮ ವ್ಯಾಸಂಗ (ನಾಮಗಳನ್ನು ಕುರಿತ ಪ್ರಬಂಧ ಸಂಕಲನ, ಸಂ. ಡಾ.ಎಚ್. ಶಶಿಕಲಾ, ಸಪ್ನಬುಕ್ ಹೌಸ್, ಬೆಂಗಳೂರು, ೨೦೧೨).
  • ಮಹಾಮರಣ (ಆತ್ಮಬಲಿದಾನಕ್ಕೆ ಸಂಬಂಧಿಸಿದ ಸಂಶೋಧನಾ ಲೇಖನಗಳು- ಸಂ. ಡಾ.ಜೆ.ಎಂ.ನಾಗಯ್ಯ, ಸಂವಹನ ಪ್ರಕಾಶನ, ಮೈಸೂರು, ೨೦೧೨).
  • ಇತಿಹಾಸ ಮತ್ತು... (ಸಂ. ಡಾ. ಎನ್. ಎಸ್. ಮಹಾಂತೇಶ, ಆದಿತ್ಯ ಪ್ರಕಾಶನ ಚಿತ್ರದುರ್ಗ, ೨೦೧೫).
  • ಡಾ. ಎಂ.ಎಂ. ಕಲಬುರ್ಗಿ ಮಾರ್ಗದ ಮಹಾವಾಕ್ಯಗಳು (ಸಂ. ಡಾ.ಎಫ್.ಟಿ. ಹಳ್ಳಿಕೇರಿ, ಎನ್. ಬಿ. ವಿರೂಪಾಕ್ಷ, ವಿಕಾಸ ಪ್ರಕಾಶನ, ಹೊಸಪೇಟೆ, ೨೦೧೨).
  • ಲಿಂಗಾಯತ ಸ್ವತಂತ್ರ ಧರ್ಮ ಡಾ. ಎಂ.ಎಂ.ಕಲಬುರ್ಗಿ (ವೀರಣ್ಣಾ ರಾಜೂರ) (ಫ.ಗೂ. ಹಳಕಟ್ಟಿ ಸಂಶೋಧನಾ ಕೇಂದ್ರ, ವಿಜಯಪುರ) ೨೦೧೭.