ಮಹಾಮಾರ್ಗದ ಪಥಿಕ
ವಿದ್ವಾಂಸರ ದೃಷ್ಟಿಯಲ್ಲಿ
*
"ವಿದ್ವತ್ತು , ಪಾಂಡಿತ್ಯ ಇವು ನಮ್ಮೊಂದಿಗೇ ಕೊನೆಗಾಣುತ್ತವೆಂದು ಭಾವಿಸಿರುವ ಜನ ಇನ್ನೂ ಇರುವಾಗಲೇ ನೀವು
'ಕನ್ನಡ ಗ್ರಂಥ ಸಂಪಾದನ ಶಾಸ್ತ್ರ'ವನ್ನು ಪ್ರಕಟಿಸಿರುವುದು ಅಭಿಮಾನದ ಮಾತು". (ಡಾ. ಹಾ. ಮಾ. ನಾಯಕ, ಮೈಸೂರು)
'ಡಾ. ಕಲಬುರ್ಗಿಯವರು ನಮ್ಮ ಕನ್ನಡ ಬೆಳೆಯ ಗಟ್ಟಿಕಾಳು. ಇಂಥ ವಿದ್ಯಾರ್ಥಿಗಳಿಂದ ಕನ್ನಡ ಕ್ಷೇತ್ರ ಕೃತಾರ್ಥವೆಂದು
ನಾನು ಅನೇಕ ಸಲ ಉದ್ಗಾರ ತೆಗೆದಿದ್ದೇನೆ. ಈ ಉದ್ಗಾರಕ್ಕೆ ನಿದರ್ಶನವೆಂಬಂತೆ ಪ್ರಸ್ತುತ ಮಹಾಪ್ರಬಂಧ
'ಕವಿರಾಜ ಮಾರ್ಗ ಪರಿಸರದ ಕನ್ನಡ ಸಾಹಿತ್ಯ' ಹೊರಬಂದಿದೆ. ಇದರ ಮೂಲಕ ಡಾ. ಕಲಬುರ್ಗಿಯವರು ಕನ್ನಡ ಸಾಹಿತ್ಯ
ಚರಿತ್ರೆಯ ಸೌಧಕ್ಕೆ ಅಡಿಪಾಯ ಹಾಕಿಕೊಟ್ಟಿದ್ದಾರೆ'. (ಡಾ. ಆರ್. ಸಿ. ಹಿರೇಮಠ ,ಧಾರವಾಡ )