ವಿದ್ಯಾಹ೯ತೆ/ವೃತ್ತಿಜೀವನ:
"ಪ್ರೊ ಬಿ.ಟಿ.ಸಾಸನೂರ ಅವರ ವಿದ್ಯಾರ್ಥಿಯಾದುದು ನನ್ನ ಜೀವನದ ಬಹುಮುಖ್ಯ ತಿರುವು, ಗ್ರಾಮೀಣ ಪರಿಸರದ ಶಿಲೆಯಾಗಿದ್ದ ನನ್ನನ್ನು ಸಾಸನೂರ ಅವರು ವಿಗ್ರಹವಾಗಿ ಕಂಡರಿಸಿದರು. ನನಗೆ ಬೋಧನೆ ತುಂಬಾ ಇಷ್ಟ. ಒಂದು ತಾಸಿನ ಅರವತ್ತು ನಿಮಿಷಗಳನ್ನು ಸಾರ್ಥಕಗೊಳಿಸಲು ನಾನು ಪೂರ್ವಸಿದ್ಧತೆಯೊಂದಿಗೇ ವರ್ಗಕೋಣೆ ಪ್ರವೇಶಿಸುತ್ತೇನೆ. ಇದು ನನ್ನ ಪ್ರಾಧ್ಯಾಪಕರಾದ ಬಿ.ಟಿ.ಸಾಸನೂರ ಅವರಿಂದ ಬಂದ ಬಳುವಳಿಯಾಗಿದೆ. ಅವರು ಶಾಸ್ತ್ರವನ್ನಂತೂ ಸರಿ, ಕಾವ್ಯವನ್ನೂ ಶಾಸ್ತ್ರಶಿಸ್ತಿನಿಂದಲೇ ಬೋಧಿಸುತ್ತಿದ್ದರು. ಬೋಧನೆಯಲ್ಲಿ ಇವೆರೆಡರ ಅಂತರಶಿಸ್ತು ಸಾಧಿಸುತ್ತಿದ್ದರು. ನಿಜವನ್ನು ಕಾಣುವ ಮನೋಧರ್ಮ, ಕಂಡ ನಿಜದ ಎಲ್ಲ ಮಗ್ಗುಲುಗಳನ್ನು ಅಭಿವ್ಯಕ್ತಿಸುವ ಸಾಹಸ, ಸ್ಪಷ್ಟ ಉಚ್ಛಾರ, ಕರ್ಣಮಧುರ ವಾಕ್ಯವಿನ್ಯಾಸ, ಲಯಬದ್ಧ ಅಭಿವ್ಯಕ್ತಿ ಇತ್ಯಾದಿಗಳಿಂದಾಗಿ ಅವರ ಬೋಧನೆಗೆ 'ಸಾಸನೂರತ್ವ' ಪ್ರಾಪ್ತವಾಗುತ್ತಿದ್ದಿತು. ಅವರು ಪಾಠಬೋಧನೆಯೊಂದಿಗೆ ಬೋಧನಕಲೆಯನ್ನೂ ಕಲಿಸಿದರು".
ವಿದ್ಯಾಹ೯ತೆ
- ಬಿ.ಎ (ಕನ್ನಡ) ಪ್ರಥಮ ವಗ೯, ಪ್ರಥಮ ರಾಂಕ್ (ಯು.ಜಿ.ಸಿ. ಶಿಷ್ಯವೇತನ ಗೌರವ, ೧೯೬೦).
- ಎಂ.ಎ (ಕನ್ನಡ) ಪ್ರಥಮವಗ೯, ಪ್ರಥಮ ರಾಂಕ್ ಪ್ರಶಸ್ತಿ ಸಹಿತ (ಜಯಚಾಮರಾಜ ಒಡೆಯರ ಪಾರಿತೋಷಕ ಗೌರವ, ೧೯೬೨).
- ಪಿಎಚ್.ಡಿ. (ವಿಷಯಃ ಕವಿರಾಜಮಾಗ೯ ಪರಿಸರದ ಕನ್ನಡ ಸಾಹಿತ್ಯ, ೧೯೭೦).
ವೃತ್ತಿ ಜೀವನ
- ಸಹಾಯಕ ಸಂಶೋಧಕರು, ಕನ್ನಡ ವಿಭಾಗ, ಕನಾ೯ಟಕ ವಿಶ್ವವಿದ್ಯಾಲಯ ಧಾರವಾಡ. (೧೯೬೨)
- ಅಧ್ಯಾಪಕರು, ಕನಾ೯ಟಕ ಕಾಲೇಜು, ಧಾರವಾಡ. (೧೯೬೨-೬೬)
- ಅಧ್ಯಾಪಕರು, ಕನ್ನಡ ಅಧ್ಯಯನ ಪೀಠ, ಕನಾ೯ಟಕ ವಿಶ್ವವಿದ್ಯಾಲಯ ಧಾರವಾಡ (೧೯೬೬-೭೧)
- ಪ್ರವಾಚಕರು, ಕನ್ನಡ ಅಧ್ಯಯನ ಪೀಠ, ಕನಾ೯ಟಕ ವಿಶ್ವವಿದ್ಯಾಲಯ (೧೯೭೧-೮೦)
- ಯು.ಜಿ.ಸಿ. ರಾಷ್ತ್ರೀಯ ಪ್ರಾಧ್ಯಾಪಕರು, ಕನಾ೯ಟಕ ವಿಶ್ವವಿದ್ಯಾಲಯ ಧಾರವಾಡ (೧೯೭೭-೭೮)
- ಅಧ್ಯಕ್ಷರು, ಬಸವೇಶ್ವರಪೀಠ, ಕನಾ೯ಟಕ ವಿಶ್ವವಿದ್ಯಾಲಯ ಧಾರವಾಡ (೧೯೮೦-೮೩)
- ಮುಖ್ಯಸ್ಥರು, ಕನ್ನಡ ಅಧ್ಯಯನ ಪೀಠ (೧೯೮೩-೮೫)
- ನಿರ್ದೇಶಕರು, ಕನ್ನಡ ಸಂಶೋಧನಾ ಸಂಸ್ಥೆ, ಕನಾ೯ಟಕ ವಿಶ್ವವಿದ್ಯಾಲಯ ಧಾರವಾಡ (೧೯೮೪-೮೫)
- ಅಧ್ಯಕ್ಷರು, ಬಸವೇಶ್ವರ ಅಧ್ಯಯನ ಪೀಠ, ಕನಾ೯ಟಕ ವಿಶ್ವವಿದ್ಯಾಲಯ ಧಾರವಾಡ (೧೯೮೫-೮೮)
- ಪ್ರಾಧ್ಯಾಪಕರು, ಕನ್ನಡ ಅಧ್ಯಯನ ಪೀಠ, ಕನಾ೯ಟಕ ವಿಶ್ವವಿದ್ಯಾಲಯ ಧಾರವಾಡ (೧೯೮೮-೯೮)
- ಕುಲಪತಿಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ. (೧೯೯೮-೨೦೦೧)
ಪಿಎಚ್ .ಡಿ. ಮಾರ್ಗದರ್ಶನ:
- ೧೯೮೧: ಡಾ.ಚೆನ್ನಕ್ಕ ಎಲಿಗಾರ- ಶಾಸನಗಳಲ್ಲಿ ಕರ್ನಾಟಕದ ಸ್ತ್ರೀ ಸಮಾಜ.
- ೧೯೮೨: ಡಾ.ಬಿ.ಆರ್ .ಹಿರೇಮಠ- ಶಾಸನಗಳಲ್ಲಿ ಕರ್ನಾಟಕದ ವರ್ತಕರು.
- ೧೯೮೫: ಡಾ.ಶ್ರೀರಾಮ ಇಟ್ಟಣ್ಣವರ- ಶ್ರೀಕೃಷ್ಣ ಪಾರಿಜಾತ: ಒಂದು ಅಧ್ಯಯನ.
- ೧೯೮೭: ಡಾ.ಜೆ.ಎಮ್. ನಾಗಯ್ಯ- ಆರನೆಯ ವಿಕ್ರಮಾದಿತ್ಯನ ಶಾಸನಗಳುಃ ಒಂದು ಅಧ್ಯಯನ.
- ೧೯೮೮: ಡಾ.ಬಿ.ಕೆ.ಹಿರೇಮಠ- ಕನ್ನಡ ಹಸ್ತಪ್ರತಿಗಳು: ಒಂದು ಅಧ್ಯಯನ.
- ೧೯೮೮: ಡಾ.ಬಸವಲಿಂಗ ಸೊಪ್ಪಿಮಠ- ಕೊಡೆಕಲ್ಲ ಬಸವಣ್ಣ: ಒಂದು ಅಧ್ಯಯನ.
- ೧೯೮೯: ಡಾ.ಬಿ.ಎಸ್. ಶೇಠೆ- ಕರ್ನಾಟಕದ ಸತಿಪದ್ದತಿ: ಒಂದು ಅಧ್ಯಯನ.
- ೧೯೯೨: ಡಾ.ಶ್ರೀನಿವಾಸ ಕುಲಕರ್ಣಿ- ಕುಮಾರವ್ಯಾಸನ ರೂಪಕಗಳುಃ ಒಂದು ಅಧ್ಯಯನ.
- ೧೯೯೩: ಡಾ.ಸಿ.ವಿ.ಪ್ರಭುಸ್ವಾಮಿಮಠ- ಬಸವಣ್ಣನವರ ವಚನಗಳ ಸಾಹಿತ್ಯಿಕ ಅಧ್ಯಯನ.
- ೧೯೯೭: ಡಾ.ಸದಾನಂದ ಪಾಟೀಲ- ಹರಿಹರನ ರಗಳೆಗಳು: ಒಂದು ಸಾಂಸ್ಕೃತಿಕ ಅಧ್ಯಯನ.
- ೨೦೦೦: ಡಾ.ಕೆ.ವೈ.ನಾರಾಯಣಸ್ವಾಮಿ- ನೀರು: ಒಂದು ಅಧ್ಯಯನ.
- ೨೦೦೨: ಡಾ.ಸಾವುಕಾರ ಎಸ್ . ಕಾಂಬಳೆ- ಲಿಂಗಾಯತ ಅಸ್ಪೃಶ್ಯರು (ಉರಿಲಿಂಗಪೆದ್ದಿ ಸಂಪ್ರದಾಯದ ಅಭ್ಯಾಸ).
- ೨೦೦೩: ಡಾ.ಮಹಾದೇವ ಜ. ಜಿಡ್ಡಿಮನಿ- ಕುಮಾರವ್ಯಾಸನ ಭೀಷ್ಮ.
- ೨೦೧೬: ಡಾ.ಬಿ.ರಾಜಶೇಖರಪ್ಪ- ಚಿತ್ರದುರ್ಗ: ಒಂದು ಅಧ್ಯಯನ.
ಎಂ.ಫಿಲ್
- ವಿಜಯಶ್ರೀ ಹಿರೇಮಠ: ಸಂಪಾದನ ಸಮಯ.
- ಗಾಯತ್ರಿ ಹಿರೇಮಠ: ಎ.ಟಿ.ಸಾಸನೂರ ಬದುಕು ಸಾಧನೆ.
- ಎಸ್ .ಎಲ್ . ನಾಟಿಕಾರ: ಸಿಡಿ ಸಂಪ್ರದಾಯ.
- ಎಸ್.ಪಿ. ಗೌಡರ: ಕ್ರೈಸ್ತ ಪಾದ್ರಿಗಳು.
"ಸಂಶೋಧನೆಯ ಭಾಷೆ ಅಲಂಕಾರಕವೂ ಆಗಿರಬಾರದು, ಶುಷ್ಕವೂ ಆಗಿರಬಾರದು. ನೇರ, ಸ್ಪಷ್ಟ ಪರಿಣಾಮಕಾರಿಯಾಗಿರಬೇಕು."