ನೀರು ನೀರಡಿಸಿತ್ತು

ಸೃಜನ ಸಾಹಿತ್ಯ:


ನೀರು ನೀರಡಿಸಿತ್ತು /ನೀರಾಗ ನಿಂತೇನಿ ನೀರಡಿಸಿಃ

ಸೃಜನಶೀಲ ಮನಸ್ಸಿನ ಡಾ. ಕಲಬುರ್ಗಿಯವರು ಸೃಜನಶೀಲ ಸಂಶೋಧಕರಾದುದನ್ನು ಅಲ್ಲಲ್ಲಿ ಹೇಳಿಕೊಂಡಿದ್ದಾರೆ. ಆದರೆ ಅವರ ಆ ಸೃಜನಶೀಲತೆ ಕಾವ್ಯ, ನಾಟಕಗಳ ರೂಪದಲ್ಲಿ ಅಭಿವ್ಯಕ್ತಿ ಪಡೆದಿದೆ ೧.  'ನೀರು ನೀರಡಿಸಿತ್ತು' ಡಾ.ಎಂ.ಎಂ. ಕಲಬುರ್ಗಿ ಅವರ ಮೊದಲ ಸಂಕಲನ . ಅಲ್ಲಮ ವಚನದ ಸಾಲನ್ನು 'ಶೀರ್ಷಿಕೆ'ಯಾಗಿ ಬಳಸಿಕೊಂಡಿರುವುದನ್ನು 'ಕಾರಣಸಹಿತ ಅರಿಕೆಯಲ್ಲಿ ವಿವರಿಸಿದ್ದಾರೆ. ೪೬ ಕವಿತೆಗಳನ್ನು ಒಳಗೊಂಡಿರುವ ಈ ಸಂಕಲನ ಕುರಿತು ಅವರು "ಕವಿಯಾದವನು ಭಾವನೆಗಳನ್ನು ಕಲ್ಪಿಸಿಕೊಂಡು ಬರೆಯುವುದು ಬೇರೆ, ಬದುಕಿ ಬರೆಯುವುದು ಬೇರೆ. ಇಲ್ಲಿಯ ಕವನಗಳೆಲ್ಲ ಸಾಮಾನ್ಯವಾಗಿ ನಾನು ಬದುಕಿದಭಾವನೆಗಳ ಭಾಷಾ ಶಿಲ್ಪವೆನಿಸಿವೆ. neeru neeradisittuಪರಿಸರ ನಮ್ಮನ್ನು ಬೆಳೆಸುತ್ತದೆ ಎಂಬುದು ಎಷ್ಟು ಸತ್ಯವೋ, ಬೆಳೆಯಗೊಡುವುದಿಲ್ಲ ಎಂಬುದೂ ಅಷ್ಟೇಸತ್ಯ. ಈ ಸತ್ಯದ ಶಾಬ್ದಿಕ ಕಲೆಯೆನಿಸಿದ ಇಲ್ಲಿಯ ಬಹುಪಾಲು ಕವನಗಳಲ್ಲಿ ಮತ್ತೆ ಮತ್ತೆ ಮರುಕ , ಸಿಟ್ಟು, ನೋವು, ಜಿಗುಪ್ಸೆ, ಹತಾಸೆ ಇತ್ಯಾದಿ ಭಾವಗಳನ್ನು ಕಾಣುವುದು ಸಹಜ" ಎಂದಿದ್ದಾರೆ. (ಪ್ರ. ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ಮೈಸೂರು- ೧೯೯೭).

ನೀರಾಗ ನಿಂತಿನಿ ನೀರಡಿಸಿ:
ಇದು ಡಾ. ಕಲಬುರ್ಗಿಯವರ ಎರಡನೆಯ ಕವಿತಾ ಸಂಕಲನ. ಇದರಲ್ಲಿ ಸಂಕಲನದಲ್ಲಿ ೪೨ ಕವಿತೆಗಳಿದ್ದು ಇವು, ಡಾ.ರಾಮಕೃಷ್ಣ ಮರಾಠೆಯವರು ಅಭಿಪ್ರಾಯಪಟ್ಟಿರುವಂತೆ" ಹಿರಿಯರ ಬಗೆಗೆ ಗೌರವ , ಗುರುಗಳ ಬಗ್ಗೆ ಭಕ್ತಿ, ಕುಟುಂಬ ಪ್ರೀತಿ ಮತ್ತು ಸಾತ್ವಿಕ ಹಾದಿಗೆ ಅಡ್ಡಬರುವ ವ್ಯಕ್ತಿಗಳ ಕುರಿತ ವಿಷಾದ ಇತ್ಯಾದಿ ಅನುಭವಗಳ" ಭಾಷಿಕ ಆಕೃತಿಗಳೆನಿಸಿವೆ. ಕಲಬುರ್ಗಿಯವರ ಮರಣಾನಂತರ ಪ್ರಕಟವಾದ ಕೃತಿಯಿದು.(ಪ್ರ.....). ಭಾವನೆಗಳ ಭಾಷಾ ಶಿಲ್ಪವೆನಿಸಿವೆ. ಪರಿಸರ ನಮ್ಮನ್ನು ಬೆಳೆಸುತ್ತದೆ ಎಂಬುದು ಎಷ್ಟು ಸತ್ಯವೋ, ಬೆಳೆಯಗೊಡುವುದಿಲ್ಲ ಎಂಬುದೂ ಅಷ್ಟೇಸತ್ಯ. ಈ ಸತ್ಯದ ಶಾಬ್ದಿಕ  ಕಲೆಯೆನಿಸಿದ ಇಲ್ಲಿಯ ಬಹುಪಾಲು ಕವನಗಳಲ್ಲಿ ಮತ್ತೆ ಮತ್ತೆ ಮರುಕ , ಸಿಟ್ಟು, ನೋವು, ಜಿಗುಪ್ಸೆ, ಹತಾಸೆ ಇತ್ಯಾದಿ ಭಾವಗಳನ್ನು ಕಾಣುವುದು ಸಹಜ" ಎಂದಿದ್ದಾರೆ. (ಪ್ರ. ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ಮೈಸೂರು- ೧೯೯೭). ನೀರಾಗ ನಿಂತಿನಿ ನೀರಡಿಸಿ:

  ಕೆಟ್ಟಿತ್ತು ಕಲ್ಯಾಣ  ನಾಟಕ :

kettitu kallyana hindi all

ಇದರ ಮೊದಲ ಆವೃತ್ತಿ ೧೯೯೫ರಲ್ಲಿ ಎರಡನೇಯ ಆವೃತ್ತಿ 'ರಂಗ ಪಠ್ಯ' ಎಂಬ ವಿಶೇಷ ಸೂಚನೆಯೊಂದಿಗೆ ೨೦೧೧ರಲ್ಲಿ ಪ್ರಕಟವಾಯಿತು. ಈ ಕೃತಿಯ ಅರಿಕೆಯಲ್ಲಿ ಲೇಖಕ ಡಾ.ಎಂ.ಎಂ. ಕಲಬುರ್ಗಿಯವರು 'ಈ ನಾಟಕವನ್ನು ಬರೆಯುವಾಗ ರಿಚರ್ಡ ಆಟನ್ ಬರೊ ನಿರ್ದೇಶಿಸಿದ 'ಗಾಧೀ' ಚಲನ ಚಿತ್ರ ನನ್ನ ಕಣ್ಣ ಮುಂದಿದೆ, ಈ ನಾಟಕವನ್ನು ಬರೆದವನು ನಾನಾಗಿದ್ದರೂ ಬರೆಸಿಕೊಂಡವನು ನನ್ನೊಳಗಿದ್ದ ಬಸವಣ್ಣ ಎಂದಿದ್ದಾರೆ. ನಾಟಕದಲ್ಲಿ ನಲವತ್ತು ದೃಶ್ಯಗಳಿವೆ. ಬಸವಣ್ಣ ಜನಿವಾರ ಹರಿದುಕೊಳ್ಳುವ ದೃಶ್ಯದಿಂದ ನಾಟಕ ಆರಂಭವಾಗುವುದು. ಮುಂದಿನ ದೃಶ್ಯಗಳಲ್ಲಿ ಕಲ್ಯಾಣ ಕ್ರಾಂತಿಯ ಘಟನಾವಳಿಗಳ ಸರಮಾಲೆಯಾಗಿ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಕಲ್ಯಾಣ ಕ್ರಾಂತಿ ಕುರಿತು ಯಾವ ನಾಟಕಗಳೂ ಹೇಳದ ಒಂದು ಒಳಸಂಚಿನ ಸಂಗತಿಯನ್ನು 'ಕೆಟ್ಟಿತು ಕಲ್ಯಾಣ' ನಾಟಕ ಕಣ್ಣಿಗೆ ಕಟ್ಟುವಂತೆ ನಿರೂಪಿಸುತ್ತದೆ. ಚಲನಶೀಲವಾದ ಜಂಗಮದ ಪರಿಕಲ್ಪನೆ ನಾಟಕದುದ್ದಕ್ಕೂ ಕಂಡು ಬರುತ್ತದೆ. ಈವರೆಗೆ ಮುಚ್ಚಿಹೋಗಿದ್ದ ಬಾಗೆವಾಡಿಯ ಅಗ್ರಹಾರ ಸಂಸ್ಕೃತಿ, ಕೂಡಲಸಂಗಮದ ದೇವಾಲಯ ಸಂಸ್ಕೃತಿ ಮತ್ತು ಕಲ್ಯಾಣದ ರಾಜಸಂಸ್ಕೃತಿ- ಹೀಗೆ ಮೂರು ಸಂಸ್ಕೃತಿಗಳ ಅನಾವರಣವನ್ನು ಇಲ್ಲಿ ನೋಡಬಹುದು. ಬಸವಣ್ಣನವರ ಆತ್ಮ ತತ್ವಜ್ಞಾನವನ್ನೂ ಬಿಡದೆ, ಸಮಾಜ ತತ್ವಜ್ಞಾನವನ್ನು ಆಧರಿಸಿ ಬರೆದ ಮತ್ತು. ಅವರ ಸಮಗ್ರ ವ್ಯಕ್ತಿತ್ವ ಬಿಡಿಸಿದ ದೃಶ್ಯರೂಪದ ವ್ಯಾಖ್ಯಾನವಿದು. ಸ್ಥಾವರ ಪರಿಸರ, ಅದಕ್ಕೆ ಬಸವಣ್ಣ ತೋರಿದ ಪ್ರತಿಕ್ರಿಯೆ, ಅದರಿಂದ ಆಕಾರಗೊಂಡ ಜಂಗಮ ಪರಿಸರ, ಇದನ್ನು ಸ್ಥಾವರ ಪರಿಸರ ನಾಶ ಮಾಡಿದ ರೀತಿ - ಇಷ್ಟೂ ಈ ನಾಟಕದ ಮೈ, ಮನಸ್ಸು. " "ಈ ನಾಟಕವು ಹಿಂದಿ, ಮಲಯಾಳಂ ಭಾಷೇಗಳಿಗೂ ಅನುವಾದಗೊಂಡಿದೆ.  
(ಪ್ರ. ಸಹೃದಯ ಸಂಸ್ಕೃತಿಕ ಅಕಾಡಮಿ-ಧಾರವಾಡ, ಸಂವಹನ ಧಾರವಾಡ ಹಾಗೂ ಅಭಿಶೇಕ ಪ್ರಿಂಟರ್ಸ್ ಗದಗ-೧೯೯೫, ೧೯೯೭)
pdf-icon
kettittu-kalyana-m-m-kalburagi-pmd
 

 

ಖರೇ ಖರೇ ಸಂಗ್ಯಾಬಾಳ್ಯಾ (ಸಣ್ಣಾಟ):

kare kare sangyabalya all

ಇದು ಡಾ. ಕಲಬುರ್ಗಿಯವರು ರಚಿಸಿರುವ ಸಣ್ಣಾಟ. ಉತ್ತರ ಕರ್ನಾಟಕ, ವಿಶೇಷವಾಗಿ ಬೆಳಗಾವಿ ಜಿಲ್ಲೆಯಲ್ಲಿ ಮನೆಮಾತಾಗಿರುವ ಮೂಲ ಸಣ್ಣಾಟ 'ಸಂಗ್ಯಾ-ಬಾಳ್ಯಾ'ದ (ಕರ್ತೃ: ಬೈಲವಾಡ ಗ್ರಾಮದ ಪತ್ತಾರ ರಾಯಪ್ಪ ಮಾಸ್ತರ)ಕಥಾವಸ್ತುವಿನ ಋಜುತ್ವವನ್ನೇ ಸಂದೇಹಿಸಿ, ಅದೇ ಭಾಗದಲ್ಲಿ ಇನ್ನೂ ಹರಿದಾಡುತ್ತಿರುವ ಮೌಖಿಕ ಪಠ್ಯವೇ ಆ ಸಣ್ಣಾಟದ "ನಿಜಪಠ್ಯ"ವೆಂದು ಸಾರಲು ರಚನೆಗೊಂಡ ಆಟವೇ ಖರೇ ಖರೇ ಸಂಗ್ಯಾ-ಬಾಳ್ಯಾ. ಪತ್ತಾರ ಮಾಸ್ತರನ 'ಸಂಗ್ಯಾ-ಬಾಳ್ಯಾ' ಪಠ್ಯದಲ್ಲಿ ಚಿತ್ರಿತವಾಗಿರುವ ಗಂಗಾ, ಸಂಗ್ಯಾನೊಂದಿಗೆ ಅನೈತಿಕ ಸಂಬಂಧ ಹೊಂದಿದ ಹಾದರದ ಹೆಣ್ಣು. ಆದರೆ ಇದನ್ನು ಖಡಾ ಖಂಡಿತವಾಗಿ ನಿರಾಕರಿಸುವ ಮೌಖಿಕ ಪಠ್ಯವು ತನಗೆ ದಕ್ಕದ ಗಂಗಾಳ ಮೇಲಿನ ಸೇಡಿನ ಕ್ರಮವಾಗಿ ಪತ್ತಾರ ಮಾಸ್ತರ ಈ ಆಟವನ್ನು ಬರೆದನೆಂದು ಹೇಳುತ್ತದೆ. ಪತ್ತಾರ ಮಾಸ್ತರ ಬರೆದ ಪಠ್ಯದಲ್ಲಿ ಕಾಣಿಸಿಕೊಳ್ಳುವ ಸಾಂದರ್ಭಿಕ ಸಂಗತಿಗಳೂ ಡಾ. ಕಲಬುರ್ಗಿಯವರು ಮೌಖಿಕಪಠ್ಯವನ್ನು ಗ್ರಹಿಸಿ ಬರೆದ 'ಖರೇ ಖರೇ ಸಂಗ್ಯಾ-ಬಾಳ್ಯಾ'ದ ನಿಲುವನ್ನು ಸಮರ್ಥಿಸುವಂತಿದೆ. ಕಲಬುರ್ಗಿಯವರು ತಮ್ಮ ಕೃತಿ ಕುರಿತು "ಅಕ್ಷರ ಜಗತ್ತಿನ ದುಷ್ಟ ವ್ಯಕ್ತಿಗಳಿಂದ ಇಂಥ ಸೃಷ್ಟಿ ಅಸಹಜವೇನಲ್ಲ . ಇಂಥ ವ್ಯಕ್ತಿಗಳನ್ನೇ ಕೇಂದ್ರವನ್ನಾಗಿಟ್ಟುಕೊಂಡು ಈ ಕೃತಿ ಕಟ್ಟಡ ಬೆಳೆದಿದೆ. ಇಷ್ಟಾಗಿಯೂ ಸಿದ್ಧ ಕಥೆಯ ಮರುಸೃಷ್ಟಿ ಸ್ವಾತಂತ್ರ್ಯ ಲೇಖಕನಿಗೆ ಇದ್ದೇ ಇದೆ" ಎಂದಿದ್ದಾರೆ. ಇವರ ಈ ಕೃತಿ ಮರಾಠಿ ಭಾಷೆಗೂ ಅನುವಾದಗೊಂಡಿದೆ. (ಲೋಹಿಯಾ ಪ್ರಕಾಶನ, ಬಳ್ಳಾರಿ-೨೦೦೫)

 ಖರೇ ಖರೇ ಕಿತ್ತೂರು ಬಂಡಾಯ -ಕಿತ್ತೂರು ಸಂಸ್ಥಾನ ಪತನಕ್ಕೆ ಕಾರಣ ಮಲ್ಲಪ್ಪಶೆಟ್ಟಿ ಬ್ರಿಟೀಷರೊಂದಿಗೆ ನಡೆಸಿದ ಒಳಸಂಚು ಎಂಬುದು ಒಂದು ಜನಜನಿತ ಅಭಿಪ್ರಾಯ. ಇತಿಹಾಸಕಾರರ ಗ್ರಹಿಕೆ ಕೂಡ ಇದೇ ಆಗಿದೆ. ಆದರೆ ಡಾ. ಕಲಬುರ್ಗಿಯವರಿಗೆ ಲಂಡನ್ನಿನಲ್ಲಿ ದೊರೆತ ಬ್ರಿಟೀಷ ಧಾಖಲೆಯೊಂದು ಈ ಸಂಗತಿಯನ್ನು ಅಲ್ಲಗಳೆದು, ಕಿತ್ತೂರು ಸಂಸ್ಥಾನ ಹಾಳಾಗಲು ಸಂಚುರುಪಿಸಿದವನು ಅವರಾದಿ ವೀರಪ್ಪ ಕಾರಣನೆಂದು ಹೇಳುತ್ತದೆ. ಅಷ್ಟೇಅಲ್ಲ ಈತನೇ ಮಲ್ಲಪ್ಪಶೆಟ್ಟಿಯನ್ನು ಕೊಲೆ ಮಾಡಿಸಿದನೆಂದು ತಿಳಿಸುತ್ತದೆ. ಈ ಧಾಖಲೆಯನ್ನೇ ಆಧರಿಸಿ ಡಾ. ಕಲಬುರ್ಗಿಯವರು ಪ್ರಸ್ತುತ ನಾಟಕವನ್ನು ರಚಿಸಿದ್ದಾರೆ. ಉಳಿದಂತೆ ಕಿತ್ತೂರು  ಸಂಸ್ಥಾನದ ಹೋರಾಟದ ಸುತ್ತ ಈ ನಾಟಕ ಬೆಳೆದು ನಿಂತಿದೆ. (ಪ್ರ........)