ಗ್ರಂಥ ಸಂಪಾದನೆ:
ಕನ್ನಡದಲ್ಲಿ ಗ್ರಂಥಸಂಪಾದನಾ ಕಾಯ೯ಕ್ಕೆ ಸುಮಾರು ಒಂದು ನೂರು ವಷ೯ದ ಇತಿಹಾಸವಿದೆ. ಈ ಅವಧಿಯಲ್ಲಿ ಎಲ್ಲ ವಿದ್ವಾಂಸರು ಮಾಗ೯ಸಾಹಿತ್ಯ ಸಂಪಾದನೆಗೆ ರೂಪಿಸಿಕೊಂಡ ನಿಯಮಗಳನ್ನೇ ದೇಶಿಸಾಹಿತ್ಯಕ್ಕೂ ಅನ್ವಯಿಸುತ್ತ ಬಂದುದರಿಂದ, ದೇಶಿಸಾಹಿತ್ಯ ಸಂಪಾದನೆಗೆ ಅನ್ಯಾಯವಾಗಿದೆಯೆಂದು ಆಧಾರ ಸಹಿತ ಹೇಳಿ, ಹೊಸ ನಿಯಮಗಳನ್ನು ಡಾ. ಕಲಬುರ್ಗಿಯವರು ಸೂಚಿಸಿದರು. ಇದಲ್ಲದೇ ಮೂಲತಃ ಶ್ರವಣ ಸಂಸ್ಕೃತಿಯಲ್ಲಿ ಹುಟ್ಟಿದ ದೇಶಿ ಸಾಹಿತ್ಯಕೃತಿಗಳ ಸಂಧಿಯ ಆರಂಭದಲ್ಲಿದ್ದ ರಾಗ-ತಾಳಗಳನ್ನು ವಾಚನ ಸಂಸ್ಕೃತಿಯ ಪಾಶ್ಚಿಮಾತ್ಯರು ಸಹಜವಾಗಿಯೇ ಕೈಬಿಟ್ಟಿದ್ದು, ಅದನ್ನೇ ನಾವು ಅನುಸರಿಸುತ್ತಾ ಬಂದಿದ್ದೇವೆ. ಈಗ ರಾಗ-ತಾಳಗಳನ್ನಿಟ್ಟು ಅವುಗಳನ್ನು ಮುದ್ರಿಸಬೇಕೆಂಬುದು ಇವರ ಪ್ರತಿಪಾದನೆಯಾಗಿದೆ. ಹೀಗೆ ಹೊಸ ವಿಚಾರಗಳನ್ನು ಮಂಡಿಸಿದುದಲ್ಲದೆ ಹರಿಹರನ ಸಮಗ್ರ ರಗಳೆ ಮತ್ತು ಅನೇಕ ಐತಿಹಾಸಿಕ ಕಾವ್ಯಗಳನ್ನು ಸಂಪಾದಿಸಿದರು. ಇವರ 'ಸಮಗ್ರ ವಚನ ಸಾಹಿತ್ಯ ಸಂಪುಟ'ಗಳ ಸಂಪಾದನೆ ಮತ್ತು ಪ್ರಕಟನೆ ಒಂದು ಐತಿಹಾಸಿಕ ಘಟನೆಯೆನಿಸಿತು. ಗದುಗಿನ 'ಲಿಂಗಾಯತ ಅಧ್ಯಯನ ಸಂಸ್ಥೆ'ಯ ಮೂಲಕ ಆರಂಭಿಸಿದ 'ಸಮಗ್ರ ಲಿಂಗಾಯತ ಪ್ರಾಚೀನ ಅಪ್ರಕಟಿತ ಸಾಹಿತ್ಯ ಪ್ರಕಟನ ಯೋಜನೆ' ಇನ್ನೊಂದು ಐತಿಹಾಸಿಕ ಘಟನೆಯಾಗಿದೆ. ಮೈಸೂರಿನ ಸುತ್ತೂರು ಮಠದ ಮೂಲಕ ಕೈಗೆತ್ತಿಕೊಂಡಿದ್ದ 'ಸಮಗ್ರ ಸ್ವರವಚನ ಸಾಹಿತ್ಯ ಪ್ರಕಟನ ಯೋಜನೆ'ಯ ಮೂಲಕ ಪ್ರಕಟವಾದ ೧೦ ಸಂಪುಟಗಳನ್ನು ಇಲ್ಲಿ ನೆನೆಯಬಹುದಾಗಿದೆ. 'ಕನಾ೯ಟಕದ ಕೈಫಿಯತ್ತುಗಳು' ಎನ್ನುವ ಕೃತಿ, ದಾಖಲುಸಾಹಿತ್ಯ ಸಂಪಾದನೆಗೆ ಒಂದು ದೊಡ್ಡ ನಿದಶ೯ನವಾಗಿದೆ.
ಸೂ: ಈ ಕೃತಿಗಳ ಹೆಚ್ಚಿನ ವಿವರಗಳಿಗಾಗಿ ಕೃತಿಗಳ ಹೆಸರಿನ ಮೇಲೆ ಕ್ಲಿಕ್ಕಿಸಿರಿ.
ಗ್ರಂಥಸಂಪಾದನೆ (ಪ್ರಾಚೀನ)
- ಮಲ್ಲಿನಾಥ ಪುರಾಣ ಸಂಗ್ರಹ
- ಶಿವಯೋಗ ಪ್ರದೀಪಿಕಾ
- ಬಸವಸ್ತೋತ್ರ ವಚನಗಳು
- ಇಮ್ಮಡಿ ಚಿಕ್ಕಭೂಪಾಲನ ಸಾಂಗತ್ಯ
- ಬಸವಣ್ಣನವರ ಟೀಕಿನ ವಚನಗಳು -೧
- ಕೊಂಡಗುಳಿ ಕೇಶಿರಾಜ ಕೃತಿಗಳು
- ತೋಂಟದ ಸಿದ್ದೇಶ್ವರ ಭಾವರತ್ನಾಭರಣಸ್ತೋತ್ರ
- ಆದಯ್ಯನ ಲಘು ಕೃತಿಗಳು
- ನಿಂಬಸಾಮಂತ ಚರಿತೆ
- ಬಸವಣ್ಣನವರ ಟೀಕಿನ ವಚನಗಳು -೨
- ಸಿರುಮಣ ನಾಯಕನ ಸಾಂಗತ್ಯ
- ಸಿರುಮಣ ಚರಿತೆ
- ಚನ್ನಬಸವಣ್ಣನವರ ಷಟ್ ಸ್ಥಲ ವಚನ ಮಹಾಸಂಪುಟ
- ವಚನ ಸಂಕಲನ ಸಂಪುಟ -೪
- ಬಸವಣ್ಣನವರ ವಚನಗಳು
- ಸಂಕೀರ್ಣವಚನ ಸಂಪುಟ-೧
- ಗೊಲ್ಲಸಿರುಮನ ಚರಿತೆ
- ಸಿದ್ದರಾಮಯ್ಯದೇವರ ವಚನಗಳು
- ಷಟ್ ಸ್ಥಲ ಶಿವಾಯಣ
- ಹರಿಹರನ ರಗಳೆಗಳು
- ಕಿತ್ತೂರು ಸಂಸ್ಠಾನ ಸಾಹಿತ್ಯ -ಭಾಗ ೧
- ಹೊಸ ಕುಮಾರರಾಮನ ಸಾಂಗತ್ಯ
- ವಚನ ಸಂಕಲನ ಸಂಪುಟ-೬
- ಸಿದ್ಧಮಂಕಚರಿತೆ
- ತಗರ ಪವಾಡ
- ಕಿತ್ತೂರು ಸಂಸ್ಠಾನ ಸಾಹಿತ್ಯ -೧೨
- ಬಾಲರಾಮನ ಸಾಂಗತ್ಯ
- ಗುಂಡಬಸವೇಶ್ವರ ಪುರಾಣ
- ಹಳೆಯ ಕುಮಾರರಾಮನ ಸಾಂಗತ್ಯ
- ಪರಮಾನಂದ ಸುಧೆ
- ವಚನ
- ಕೊಡೇಕಲ್ಲ ವಚನ ವಾಕ್ಯ
- ಏಕೋತ್ತರಶತಸ್ಥಲ
- ಕಿತ್ತೂರು ಸಂಸ್ಥಾನ ಸಾಹಿತ್ಯ -ಭಾಗ ೩
- ಹರಿಹರ ವಿರಚಿತ ಕನ್ನಡ ಶರಣ ಕಥೆಗಳು